ಬಂಟ್ವಾಳ: ಬ್ರಹ್ಮರಕೂಟ್ಲು ಟೋಲ್ಪ್ಲಾಜಾ ದಾಳಿ ನಡೆಸಿದ ಆರೋಪಿ ನೂತನ ನಿಯೋಜಿತ ಬ.ಕೆ. ಮಂಜಯ್ಯ ಅವರ ನೇತೃತ್ವದ ತಂಡಕ್ಕೆ ಸಿಕ್ಕಿಬಿದ್ದಿದ್ದಾನೆ. ಈ ಹಿನ್ನೆಲೆಯಲ್ಲಿ ಬಿ.ಸಿ.ರೋಡು, ಶಾಂತಿಯಂಗಡಿ ನಿವಾಸಿ ಶೇಖಬ್ಬ ಎಂಬವರ ಮಗ ಅಬೂಬಕ್ಕರ್ ಎಂಬಾತನನ್ನು ಬಂಧಿಸಲಾಗಿದೆ.
ಬ್ರಹ್ಮರಕೂಟ್ಲು ಟೋಲ್ಗೇಟ್ ದಾಳಿ, ಸಿಬ್ಬಂದಿಗೆ ಹಲ್ಲೆ, ಲಕ್ಷಾಂತರ ರೂ. ಸ್ವತ್ತು ನಾಶ ಘಟನೆಗಳಿಗೆ ಸಂಬಂಧಿಸಿ ಸ್ಥಳೀಯ ಪುರಸಭಾ ಸದಸ್ಯ ಮಹಮ್ಮದ್ ಶೆರೀಫ್ ಸಹಿತ ಸುಮಾರು 25 ಮಂದಿಗೆ ನಗರ ಠಾಣೆಯಲ್ಲಿ ಗಂಭೀರ ಸ್ವರೂಪದ ಪ್ರಕರಣ ದಾಖಲಿಸಲಾಗಿತ್ತು. ಆರೋಪಿಗಳ ರಾಜಾರೋಷವಾಗಿ ತಿರುಗಾಡುತ್ತಿದ್ದರೂ, ಅವರನ್ನು ಪೊಲೀಸರು ಬಂಧಿಸುತ್ತಿರಲಿಲ್ಲ. ಕಷ್ಟಪಟ್ಟು ವ್ಯವಸ್ಥಿತ ಯೋಜನೆ ರೂಪಿಸಿ ರಾತ್ರಿ ವೇಳೆ ಕಾಯರ್ಾಚರಣೆ ನಡೆಸುತ್ತಿದ್ದ ಪೊಲೀಸರಿಗೆ ಕಾಂಗ್ರೆಸ್ ಮುಖಂಡರು ಫೋನ್ ಮಾಡಿ ಹೆದರಿಸುತ್ತಿದ್ದರು. ನೀವೇನಾದರೂ ನಮ್ಮ ಹುಡುಗರನ್ನು ಎರೆಸ್ಟ್ ಮಾಡಿದರೆ, ಮಿನಿಸ್ಟ್ರಲ್ಲಿ ಹೇಳಿಸಿ ವಗರ್ಾಯಿಸುತ್ತೇವೆ ಎಂದು ಬೆದರಿಕೆ ಹಾಕುತ್ತಿದ್ದರು. ಆದರೂ ಜಗ್ಗದೇ ತಮ್ಮ ಡ್ಯೂಟಿಯಲ್ಲೇ ತೊಡಗುತ್ತಿದ್ದ ಪೊಲೀಸರಿಗೆ ಇನ್ಸ್ಪೆಕ್ಟರ್ ಮೂಲಕ ಫೋನಾಯಿಸಿ ನಿರುತ್ಸಾಹಿಯನ್ನಾಗಿಸುತ್ತಿದ್ದರು ಎಂದು ಆರೋಪಿಸಲಾಗಿತ್ತು.
