ಬಂಟ್ವಾಳ, ಎ. 29: ಬ್ರಹ್ಮರಕೂಟ್ಲು ಟೋಲ್ ಪ್ಲಾಜಾ ಅವ್ಯವಸ್ಥೆ, ಸೌಲಭ್ಯಗಳ ಕೊರತೆ, ಸುರಕ್ಷಾ ಕ್ರಮಗಳ ಬಗ್ಗೆ ಬಂಟ್ವಾಳ ತಹಶೀಲ್ದಾರ್ ಕಛೇರಿಯಲ್ಲಿ ಎ. 29ರಂದು ಕರೆದಿದ್ದ ಉನ್ನತ ಮಟ್ಟದ ಸಭೆಯನ್ನು ಮಂಗಳೂರು ಉಪ ವಿಭಾಗಾಕಾರಿ ಡಾ| ಪ್ರಶಾಂತ್ ರದ್ದು ಪಡಿಸಿದ ಘಟನೆ ನಡೆದಿದೆ.
ಸಂಜೆ 6.30 ಸುಮಾರಿಗೆ ಸಭೆಯನ್ನು ಕರೆಯಲಾಗಿತ್ತು. ಹೆದ್ದಾರಿ ಪ್ರಾಕಾರ ಪಿಆರ್ ಓ ಪಾಲ್ಗೊಳ್ಳದ ಕಾರಣಕ್ಕೆ ಸಭೆಯನ್ನು ರದ್ದು ಪಡಿಸಿದ್ದಾಗಿ ಅವರು ಕಾರಣ ನೀಡಿ ಹೊರ ನಡೆದಿದ್ದರು.
ಸಭೆಗೆ ಬಂಟ್ವಾಳ ಉಪವಿಭಾಗ ಡಿವೈಎಸ್ಪಿ ರಶ್ಮಿ ಪರೆಡ್ಡಿ ಮತ್ತು ಪೊಲೀಸ್ ಅಕಾರಿಗಳು, ಬಂಟ್ವಾಳ ತಹಶೀಲ್ದಾರ್ ಮಲ್ಲೇಸ್ವಾಮಿ, ಟೋ ಲ್ ಗುತ್ತಿಗೆದಾರ ಗೋಪಾಲಕೃಷ್ಣ ಮೆಲಾಂಟ ಹಾಜರಾಗಿದ್ದರು.
