ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದಿಂದ ಅಭಿವೃದ್ಧಿಪಡಿಸಲಾದ ವಿದ್ಯಾಗಿರಿ ಆಟೋ ಪಾರ್ಕ್ ಅನ್ನು ಮೀನುಗಾರಿಕ ಸಚಿವ ಕೆ.ಅಭಯಚಂದ್ರ ಜೈನ್ ಶನಿವಾರ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ಪ್ರಯಾಣಿಕರಿಗೆ ಉತ್ತಮ ಸೇವೆ ನೀಡುವುದರ ಮೂಲಕ ಅವರ ವಿಶ್ವಾಸವನ್ನು ಪಡೆಯುವ ಪ್ರಯತ್ನ ಆಟೋ ಚಾಲಕರಿಂದಾಗಬೇಕು. ಮೂಡುಬಿದಿರೆಯಲ್ಲಿ 500ಕ್ಕೂ ಅಧಿಕ ಕುಟುಂಬಗಳನ್ನು ಆಟೋ ವೃತ್ತಿ ಪೊರೆಯುತ್ತಿರುವುದು ಶ್ಲಾಘನೀಯ ಎಂದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾಬದ ಅಧುಕ್ಷ ಡಾ.ಎಂ.ಮೋಹನ ಆಳ್ವ ಮಾತನಾಡಿ, ಪುತ್ತಿಗೆ ಗ್ರಾ.ಪಂ ಅಭಿವೃದ್ಧಿ ಕೆಲಸಗಳಿಗೆ ಆಳ್ವಾಸ್ ಸಂಸ್ಥೆ ಕೈಜೋಡಿಸುತ್ತಿದ್ದು, ಇದರಂಗವಾಗಿ ಕಳೆದ ವರ್ಷ ಸ್ಮಶಾನ ನಿರ್ಮಾಣ, ಈ ಬಾರಿ ಆಟೋ ಪಾರ್ಕ್ ಅಭಿವೃದ್ಧಿಯಲ್ಲಿ ಆಳ್ವಾಸ್ ನೆರವಾಗಿದೆ ಎಂದರು.
ಪುತ್ತಿಗೆ ಗ್ರಾ.ಪಂ ಅಧ್ಯಕ್ಷೆ ಮೋಹಿನಿ ಶೆಟ್ಟಿ, ಉಪಾಧ್ಯಕ್ಷೆ ಶೋಭಾ ಹೆಬ್ಬಾರ್, ಸದಸ್ಯರಾದ ಗಿರೀಶ್, ನಾಗವರ್ಮ ಜೈನ್, ನಾಗರಾಜ ಕರ್ಕೇರಾ, ದಿನೇಶ್ ಗೌಡ, ಶಶಿಧರ್ ಅಂಚನ್, ಚಂದ್ರಹಾಸ್, ಮೂಡುಬಿದರೆ ಆಟೋ ಚಾಲಕ ಮಾಲೀಕರ ಸಂಘದ ಅಧ್ಯಕ್ಷ ಭಾಸ್ಕರ ಆಚಾರ್ಯ, ಆದಿರಾಜ್ ಜೈನ್ ಉಪಸ್ಥಿತರಿದ್ದರು. ಗ್ರಾ.ಪಂ ಸದಸ್ಯ ಶಶಿಧರ್ ನಾಯಕ್ ಕಾರ್ಯಕ್ರಮ ನಿರೂಪಿಸಿದರು.
ಒಂಟಿಕಟ್ಟೆಯಿಂದ ಪುತ್ತಿಗೆ ದೇವಸ್ಥಾನಕ್ಕೆ ಹೋಗುವ ರಸ್ತೆ ದುರಸ್ತಿಗೆ ಪುತ್ತಿಗೆ ಪಂಚಾಯಿತಿಯವರು ಸಚಿವರಿಗೆ ಮನವಿ ಸಲ್ಲಿಸಿದರು.
