ಮೂಡುಬಿದಿರೆ: ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಸಾಹಿತ್ಯ ಸಂಘದ ಆಶ್ರಯದಲ್ಲಿ ಮಿಜಾರಿನ ಕ್ಯಾಂಪಸ್ನಲ್ಲಿ ಶನಿವಾರ ರೀಡರ್ಸ್ ಕ್ಲಬ್ ಉದ್ಘಾಟಿಸಲಾಯಿತು.
ದ.ಕ ಜಿಲ್ಲಾ ಎಸ್.ಪಿ ಡಾ.ಶರಣಪ್ಪ ಎಸ್.ಡಿ ರೀಡರ್ಸ್ ಕ್ಲಬ್ ಉದ್ಘಾಟಿಸಿ, ನಾಗರಿಕ ಸೇವೆಗಳು ಕುರಿತು ಉಪನ್ಯಾಸ ನೀಡಿದರು. ನಾಗರಿಕ ಸೇವೆಗಳಲ್ಲಿ ಅವಕಾಶ ಪಡೆಯುವುದು ಹಾಗೂ ಕರ್ತವ್ಯ ನಿರ್ವಹಿಸುವುದು ಕಷ್ಟಕರವಲ್ಲ. ಅವಕಾಶ ಹಾಗೂ ಸವಾಲುಗಳನ್ನು ಸಕಾರತ್ಮಕವಾಗಿ ಸ್ವೀಕರಿಸಿದರೆ ಯಶಸ್ವಿಯಾಗಿ ಸೇವೆ ಮಾಡಬಹುದು. ಓದುವುದರಿಂದ ಜ್ಞಾನ ಸಂಪಾದನೆಯಾಗುವುದು ಮಾತ್ರವಲ್ಲ. ನಾಗರಿಕ ಸೇವೆಗಳ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಸಾಧನೆ ಮಾಡಲು ಸಾಧ್ಯವಾಗುತ್ತದೆ. ವೃತ್ತ ಪತ್ರಿಕೆಗಳನ್ನು ಓದುವುದರಿಂದ ದೈನಂದಿನ ವಿದ್ಯಮಾನಗಳನ್ನು ಅರಿತುಕೊಳ್ಳಲು ಸಹಕಾರಿಯಾಗುತ್ತದೆ ಎಂದರು.
ಸಂವಾದ ಕಾರ್ಯಕ್ರಮ ನಡೆಯಿತು.
ದಿ ಹಿಂದೂ ಪತ್ರಿಕೆಯ ಮಂಗಳೂರು ಪ್ರಾದೇಶಿಕ ವ್ಯವಸ್ಥಾಪಕ ಜಿ.ಆರ್.ವೆಂಕಟೇಶ್ ಮುಖ್ಯ ಅತಿಥಿಯಾಗಿದ್ದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಪ್ರಾಂಶುಪಾಲ ಡಾ.ಪೀಟರ್ ಫೆರ್ನಾಂಡಿಸ್ ಉಪಸ್ಥಿತರಿದ್ದರು.
ಡಾ.ಕಿಶೋರ್ ಶೆಟ್ಟಿ ಸ್ವಾಗತಿಸಿದರು. ಡಾ.ಸಂತೋಷ್ ಆಚಾರ್ಯ ರೀಡರ್ಸ್ ಕ್ಲಬ್ನ ಕುರಿತು ಮಾತನಾಡಿದರು. ಹರ್ಷಿತಾ ಅತಿಥಿಗಳನ್ನು ಪರಿಚಯಿಸಿದರು. ರವೀಂದ್ರ ಶೆಣೈ ಕಾರ್ಯಕ್ರಮ ನಿರೂಪಿಸಿದರು.
