ಬಂಟ್ವಾಳ: ಬ್ಯಾಂಕ್ , ಸಹಕಾರಿ ಸಂಘ , ಎಟಿ.ಎಂ. ಗಳು ಸೇರಿದಂತೆ ಹಣಕಾಸು ಸಂಸ್ಥೆಗಳಿಗೆ ದಿನದ 24 ಗಂಟೆಗಳ ಕಾಲ ಕಡ್ಡಾಯವಾಗಿ ಕಾವಲುಗಾರರನ್ನು ನೇಮಿಸುವಂತೆ ಪೊಲೀಸ್ ಅಧಿಕಾರಿಗಳು ಬ್ಯಾಂಕ್ ಹಾಗೂ ಸಹಕಾರಿ ಸಂಘಗಳ ಆಡಳಿತಕ್ಕೆ ಸೂಚನೆ ನೀಡಿದೆ.
ಬಂಟ್ವಾಳ ನಗರ ಠಾಣಾ ಎಸ್ಐ ನಂದ ಕುಮಾರ್ ನೇತೃಥ್ವದಲ್ಲಿ ಬುಧವಾರ ನಗರ ಠಾಣೆಯಲ್ಲಿ ಕರೆದ ಸಭೆಯಲ್ಲಿ 16 ಅಂಶಗಳ ಸೂಚನೆಯನ್ನು ಕಡ್ಡಾಯವಾಗಿ ಪಾಲಿಸುವಂತೆ ಬ್ಯಾಂಕ್ ಅಧಿಕಾರಿಗಳಿಗೆ ಆದೇಶಿಸಲಾಗಿದೆ. 1

ಸುಸಜ್ಜಿತ ಕಟ್ಟಡದಲ್ಲಿ ಬ್ಯಾಂಕ್ ತೆರಯುವುದು, ಬ್ಯಾಂಕಿನ ಬಾಗಿಲು, ಕಿಟಕಿ ಛಾವಣೀಗಳನ್ನು ಭದ್ರವಾಗಿಟ್ಟುಕೊಳ್ಳುವುದು, ಬ್ಯಾಂಕಿನ ವಿಳಾಸ ಸಹಿತ ಸಮಗ್ರ ಮಾಹಿತಿಯನ್ನು ಸ್ಥಳೀಯ ಪೊಲೀಸ್ ಠಾಣೆಗೆ ನೀಡುವುದು, ಅತ್ಯಾಧುನಿಕ ಲಾಕರ್ ವ್ಯವಸ್ಥೆಯ ಭದರತಾ ಕೊಠಡಿಯನ್ನು ನಿರ್ಮಿಸುವುದು, ಉತ್ತಮ ದರ್ಜೆಯ ಸಿಸಿಕ್ಯಾಮೆರಾ ಅಳವಡಿಸುವುದು, ಅದಕ್ಕೆ ಪೂರಕವಾದ ವಿದ್ಯುತ್ ಹಾಗೂ ಬೆಳಕಿನ ವ್ಯವಸ್ಥೆ ಕಲ್ಪಿಸುವುದು, ಅಲರಾಂ, ಸೈರನ್ ಅಳವಡಿಸುವುದು, ಸಿಬ್ಬಂದಿಗಳು ಹಾಗೂ ಕಾವಲುಗಾರರ ಕಾರ್ಯದ ಬಗ್ಗೆ ನಿಗಾವಹಿಸುವುದು, ಅಪರಿಚಿತರ ವ್ಯವಹಾರಗಳ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡುವುದು ಸೇರಿದಂತೆ ಸುಮಾರು 16 ಅಂಶಗಳನ್ನು ಪಟ್ಟಿಯಲ್ಲಿ ನೀಡಲಾಗಿದೆ. ಈ ಸೂಚನೆಗಳನ್ನು ಪಾಲಿಸದೇ ಇದ್ದಲ್ಲಿ ಸಂಸ್ಥೆಗಳ ಮೇಲಧಿಕಾರಿಗಳಿಗೆ ವರದಿ ಸಲ್ಲಿಸಿ ಮುಂದೆ ಏನಾದರೂ ಅನಾಹುತ ದುಷ್ಕೃತ್ಯಗಳು ನಡೆದಲ್ಲಿ ಸಂಸ್ಥೆಯ ಮುಖ್ಯಸ್ಥರನ್ನೇ ಹೊಣೆಗಾರರನ್ನಾಗಿಸುವುದು ಎಂದವರು ಎಚ್ಚರಿಕೆ ನೀಡಿದರು.
ಕ್ರೈಂ ಎಸ್ಸೈ ಗಂಗಾಧರಪ್ಪ ಉಪಸ್ಥಿತರಿದ್ದು. ಬ್ಯಾಂಕ್ ಹಾಗೂ ಸಹಕಾರಿ ಸಂಸ್ಥೆಗಳ ಮುಖ್ಯಸ್ಥರು ಸಭೆಯಲ್ಲಿ ಭಾಗವಹಿಸಿದರು.

By suddi9

Leave a Reply

Your email address will not be published. Required fields are marked *