ಬಂಟ್ವಾಳ: ತಾಲ್ಲೂಕಿನ ಶಂಭೂರು ಎಎಂಆರ್ ಕಿರು ಜಲವಿದ್ಯುತ್ ಘಟಕ ವತಿಯಿಂದ ಇಲ್ಲಿನ ಗ್ರಾಮಗಳಿಗೆ ವಿವಿಧ ಮೂಲಭೂತ ಸೌಲಭ್ಯ ಒದಗಿಸಬೇಕು ಎಂದು ಆಗ್ರಹಿಸಿ ಇಲ್ಲಿನ ಯುವ ಸಂಗಮ ಯುವಕ ಮಂಡಲ ಸದಸ್ಯರು ಸಹಿತ ಸ್ಥಳೀಯರು ಬುಧವಾರ ಪ್ರತಿಭಟನೆ ನಡೆಸಿದರು. ಇಲ್ಲಿನ ನರಿಕೊಂಬು ಮತ್ತು ಶಂಭೂರು ಗ್ರಾಮಗಳ ಅಭಿವೃದ್ಧಿಗೆ ಎಎಂಆರ್ ಸಂಸ್ಥೆ ಯಾವುದೇ ರೀತಿಯಲ್ಲಿ ಸ್ಪಂದಿಸದೆ ಒಂದೇ ಕಡೆ ಎರಡೆರಡು ಘಟಕ ಆರಂಭಿಸಲು ಸಿದ್ಧತೆ ನಡೆಸಿದೆ. ಇಲ್ಲಿನ ಗ್ರಾಮಕ್ಕೆ ವಿವಿಧ ಮೂಲಭೂತ ಸೌಲಭ್ಯ ಒದಗಿಸಲು ಈಗಾಗಲೇ ಬೇಡಿಕೆ ಸಲ್ಲಿಸಿದ್ದರೂ ಅದನ್ನು ಕಡೆಗಣಿಸಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

28btl-protest
ಸಂಘದ ಅಧ್ಯಕ್ಷ ಸಚ್ಚಿದಾನಂದ ಶೆಟ್ಟಿ ಬೊಂಡಾಲ, ಪ್ರಮುಖರಾದ ಪದ್ಮನಾಭ ಮಯ್ಯ, ತಾಪಂ ಸದಸ್ಯ ಆನಂದ ಎ.ಶಂಭೂರು, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಆನಂದ ಸಾಲ್ಯಾನ್, ಸಮಾಜ ಸೇವಾ ದಳ ಮುಖ್ಯಸ್ಥ ಪುರುಷೋತ್ತಮ ಸಾಲ್ಯಾನ್ ನರಿಕೊಂಬು ಮತ್ತಿತರರು ಮಾತನಾಡಿದರು. ನಿವೃತ್ತ ಶಿಕ್ಷಕ ನಾಟಿ ಕೃಷ್ಣರಾಜ ಶೆಟ್ಟಿ, ಯುವಕ ಮಂಡಲ ಸೇವಾ ಟ್ರಸ್ಟ್ನ ಪ್ರಧಾನ ಕಾರ್ಯದರ್ಶಿ  ಕೇಶವ ನಾಯ್ಕ್ ಶೇಡಿಗುರಿ, ಗಣೇಶೋತ್ಸವ ಸಮಿತಿ ಸಂಚಾಲಕ ಯಶೋಧರ ಕೊಲ್ಲೂರು, ಮಹಿಳಾ ಮಂಡಲ ಗೌರವಾಧ್ಯಕ್ಷೆ ಗೀತಾ ದೇಜಪ್ಪ ಶೇಡಿಗುರಿ, ಅಧ್ಯಕ್ಷೆ ಸುನೀತಾ ಪದ್ಮನಾಭ ಶಂಭೂರು, ಆಲ್ಬರ್ಟ್  ಮಿನೇಜಸ್, ಗೋವಿಂದ ಪೂಜಾರಿ ಏಲಬೆ, ಕೇಶವ ಅಂಚನ್ ಪದವು, ನೋಣಯ್ಯ ರೆಂಜಮಾರ್, ಭೋಗನಾಥ ದಿಂಡಿಕೆರೆ, ನಾಗೇಶ ಪೂಜಾರಿ ಏಲಬೆ, ಮೋಹನ ಶಂಭೂರು ಮತ್ತಿತರು ಇದ್ದರು.
ಬೊಂಡಾಲ ಜಗನ್ನಾಥ ಶೆಟ್ಟಿ ಸ್ಮಾರಕ ಸರ್ಕಾರಿ ಪ್ರೌಢ ಶಾಲೆ, ಶೇಡಿಗುರಿ- ಕೊಲ್ಲೂರು ಅಯ್ಯಪ್ಪ ಭಕ್ತ ವೃಂದ, ನಾಟಿ ಶ್ರೀ ಕೊದಂಡರಾಮ ದೇವಸ್ಥಾನ ಸಮಿತಿ, ಶೇಡಿಗುರಿ ಶ್ರೀ ದುರ್ಗಾಪರಮೇಶ್ವರಿ ಮಹಿಳಾ ಮಂಡಳಿ, ಬೊಂಡಾಲ ಚಾರಿಟೇಬಲ್ ಟ್ರಸ್ಟ್, ಶೇಡಿಗುರಿ ಸಮಾಜ ಸೇವಾದಳ, ಶಂಭೂರು ಅಡೆಪಿಲ ಫ್ರೆಂಡ್ಸ್ ಮತ್ತಿತರ ಸಂಘ ಸಂಸ್ಥೆಗಳು ಪ್ರತಿಭಟನೆಗೆ ಬೆಂಬಲ ವ್ಯಕ್ತ ಪಡಿಸಿದ್ದರು.

By suddi9

Leave a Reply

Your email address will not be published. Required fields are marked *