ವಿದ್ಯಾರ್ಥಿಗಳು ಅವಕಾಶಗಳನ್ನು ಬಳಸಿಕೊಂಡು ಐದಾರು ವರ್ಷ ಶಿಕ್ಷಣದ ಬಗ್ಗೆಯೇ ಮನಸ್ಸು ಕೇಂದ್ರೀಕರಿಸಿ ಕಲಿತರೆ ಜೀವನದಲ್ಲಿ ಮುಂದೆ ಬರಬಹುದು,’ಜಯರಾಮ ಶೆಟ್ಟಿ

ವಿಟ್ಲ : ಸುಪ್ರಜಿತ್ ಫೌಂಡೇಶನ್ , ಬೆಂಗಳೂರು ಇದರ ವತಿಯಿಂದ ಈ ವರ್ಷದಲ್ಲಿ ಎರಡನೇ ಬಾರಿಯ ವಿದ್ಯಾರ್ಥಿ  ವೇತನ ವಿತರಣಾ ಸಮಾರಂಭವು ವಿಟ್ಲದ ವಿಠಲ ಪದವಿ ಪೂರ್ವ ಕಾಲೇಜಿನ ಪ್ರೌಢ ಶಾಲಾ ಸಭಾಂಗಣದಲ್ಲಿ ನಡೆಯಿತು. ಈ ಸಮಾರಂಭದ ಅಧ್ಯಕ್ಷತೆ ವಹಿಸಿದ ಜಯರಾಮ ಶೆಟ್ಟಿ ಮಾತಾಡಿ `ಅವಕಾಶಗಳನ್ನು ಬಳಸಿಕೊಂಡು ವಿದ್ಯಾರ್ಥಿಗಳು ಐದಾರು ವರ್ಷ ಶಿಕ್ಷಣದ ಬಗ್ಗೆಯೇ ಮನಸ್ಸು ಕೇಂದ್ರೀಕರಿಸಿ ಕಲಿತರೆ ಜೀವನದಲ್ಲಿ ಮುಂದೆ ಬರಬಹುದು’ ಎಂದರು.

DSCN0076

DSCN0089

ಮುಖ್ಯ ಅತಿಥಿಯಾಗಿ ಭಾಗವಹಿಸಿದ ಡಾ| ಮಂಜುನಾಥ ರೈಯವರ ಪುತ್ರಿ ಪ್ರಾಧ್ಯಾಪಕಿ ಆರತಿ ಶೆಟ್ಟಿ ಮಾತಾಡಿ ಸಿಗುವ ಆರ್ಥಿಕ ಸಹಾಯಗಳನ್ನು ಉಪಯೋಗಿಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಕರೆನೀಡಿದರು. ಇನ್ನೋರ್ವ ಮುಖ್ಯ ಅತಿಥಿ ವಿಠಲ ವಿದ್ಯಾ ಸಂಘದ ಸಂಚಾಲಕ ಎಲ್ ಎನ್ ಕೂಡೂರುರವರು ದೊಡ್ಡ ಮಟ್ಟದ ಬೇರೆ ಬೇರೆ ರೀತಿಯ ಆರ್ಥಿಕ ನೆರವು ನೀಡುತ್ತಿರುವ ಸುಪ್ರಜಿತ್ ಫೌಂಡೇಶನ್ನ ಅಜಿತ್ ಕುಮಾರ್ ರೈ ಯವರ ಆದರ್ಶಗಳನ್ನು ಮೆಚ್ಚಿ ಶುಭ ಹಾರೈಸಿದರು. 84 ವಿದ್ಯಾರ್ಥಿ ಗಳಿಗೆ ಒಟ್ಟು 4,90,000 ರೂಪಾಯಿಯ ವಿದ್ಯಾರ್ಥಿ  ವೇತನದ ಚೆಕ್ ವಿತರಿಸಲಾಯಿತು. ಈ ಕಾರ್ಯಕ್ರಮದಲ್ಲಿ ವಿಠಲ ವಿದ್ಯಾ ಸಂಘದ ಉಪಾಧ್ಯಕ್ಷ ಕ ಶಿ ವಿಶ್ವನಾಥ, ಕಾರ್ಯದರ್ಶಿ  ಯಶವಂತ ವಿಟ್ಲ ಸದಸ್ಯ ಜಾನ್ ಡಿ ಸೋಜಾ ಹಾಗೂ ಪ್ರಾಂಶುಪಾಲ ಆದರ್ಶ ಚೊಕ್ಕಾಡಿ ಉಪಸ್ಥಿತರಿದ್ದರು.

ನಿವೃತ್ತ ಪ್ರಾಂಶುಪಾಲ ಅನಂತಕೃಷ್ಣ ಹೆಬ್ಬಾರ್ ಪ್ರಸ್ತಾವಿಸಿದರು. ಉಪನ್ಯಾಸಕ ಪ್ರಕಾಶ್ ನಾಯಕ್ ಸ್ವಾಗತಿಸಿದರು. ಸಿ ಕುಮಾರ ಸುಬ್ರಹ್ಮಣ್ಯ ಶಾಸ್ತ್ರಿ ವಂದಿಸಿದರು. ಶಿಕ್ಷಕ ಬಿ ಮೋಹನ ನಿರೂಪಿಸಿದರು. ಕುಮಾರಿ ಮಮತಾ ಕೆ ಆರ್, ಲೋಕಾನಂದ, ಸುಚೇತನ್ ಜೈನ್, ಆಲ್ಫಾನ್ಸ್ ವಿನ್ಸೆಂಟ್ ವೇಗಸ್, ಉದಯ ಕುಮಾರ್, ಮಹೇಶ್ ಕೆ ಹಾಗೂ ವಿದ್ಯಾರ್ಥಿ  ಅನೂಷಾ ಕೆ ಸಹಕರಿಸಿದರು

By suddi9

Leave a Reply

Your email address will not be published. Required fields are marked *