ಕಿನ್ನಿಗೋಳಿ: ಪಕ್ಷಿಕೆರೆ ಸಂತ ಜೂದರ ಯಾತ್ರಿಕ ಕೇಂದ್ರದ ವಾರ್ಷಿಕ ಹಬ್ಬ ಮತ್ತು ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ ಅ. 26 ರಂದು ಚರ್ಚ್‍ನಲ್ಲಿ ನಡೆಯಿತು. ಶಿವಮೊಗ್ಗ ಧರ್ಮ ಪ್ರಾಂತ್ಯದ ಧರ್ಮಾದ್ಯಕ್ಷ ವಂ|ಡಾ| ಪ್ರಾನ್ಸಿಸ್ ಸೆರಾವೊ ವಿವಾಹ ಕಾರ್ಯ ನೆಡೆಸಿಕೊಟ್ಟರು.
pakshikereಶೈಲೇಶ್ ಮೊಂತೆರೋ-ರಶ್ಮಿ ಡಿಸೋಜ, ಅರುಣ್ ಅಶೋಕ್ ವರೇಡಾ-ಅಂಜಲಿ ಮೇರಿ, ಜೋನ್ಸನ್ ಡಿಸೋಜ-ರೇಖಾ ಮೇರಿ ಮಾಡ್ತಾ, ರೋನಾಲ್ಡ್ ಡಿಸೋಜ-ಶರಲ್, ಲಾರೆನ್ಸ್ ಡಿಸೋಜ-ಶ್ರುತಿ, ಆಲ್ವಿನ್ ಡಿಸೋಜ-ಪ್ರಿಯಾಂಕ ವೇಗಸ್, ವಿನ್ಸೆಂಟ್ ಮೋರಾಸ್-ಸುನೀತಾ, ಹೆನ್ರಿ ಡಿಸೋಜ-ರೂಪಾ, ಸುನಿಲ್ ಕೊರೆಯ-ಗೀತಾ, ಡೊಲ್ಪಿ ರೊಡ್ರಿಗಸ್- ಜೆನೆಟ್ ಮೊಂತಿ ಡಿಸಿಲ್ವಾ, ಪಾವ್ಲ್ ಲಸ್ರಾದೊ-ಮೆಗಲ, ಅನಿಲ್ ಕ್ರಾಸ್ತಾ-ಜಸ್ಮಿನ್ ಕುಟಿನ್ಹಾ, ರಾಜೇಶ್ ಸಿಕ್ವೇರಾ- ರಮ್ಯ ಪೆರುಗೊಂಡ, ರೋಬರ್ಟ್ ಡಿಸೋಜ- ಮಂಜುಳ ಮರಿಯ, ಲಾರೆನ್ಸ್ ಪಿಂಟೊ-ಬಿನಿ, ರೋಹನ್ ನೊಯಲ್ ಡಿಸೋಜ-ಜಾನೆಟ್ ಡಿಸೋಜ, ಪ್ರಮೋದ್ ಕರ್ಕೇಟಾ-ಅನುಜಾ ಟಿಗಾ ಒಟ್ಟು 17 ಜೋಡಿಗಳು ದಾಂಪತ್ಯ ಜೀವನ ಸ್ವೀಕರಿಸಿದರು. ಸಚಿವ ಕೆ. ಅಭಯಚಂದ್ರ ಜೈನ್, ಪಕ್ಷಿಕೆರೆ ಸಂತ ಜೂದರ ಯಾತ್ರಿಕ ಕೇಂದ್ರದ ಪ್ರಧಾನ ಧರ್ಮಗುರು ಫಾ|ಆಂಡ್ರ್ಯೂಲಿಯೋ ಡಿ ಸೋಜ ಪಕ್ಷಿಕೆರೆ, ಸಹಾಯಕ ಧರ್ಮ ಗುರು ಪ್ಯಾಟ್ರಿಕ್ ಸಿಕ್ವೇರಾ, ಕಿನ್ನಿಗೋಳಿ ವಲಯದ ಪ್ರಧಾನ ಧರ್ಮಗುರು ಫಾ|ವಿನ್ಸೆಂಟ್ ಮೊಂತೆರೊ ಸಹಿತ ಪರಿಸರದ ಹಾಗೂ ಹೊರ ರಾಜ್ಯದ ಚರ್ಚುಗಳ ಧರ್ಮಗುರುಗಳು, ಪಕ್ಷಿಕೆರೆ ಚರ್ಚ್ ಪಾಲನಾ ಮಂಡಳಿ ಕಾರ್ಯದರ್ಶಿ ಲೂಸಿ ಡಿಸೋಜಾ ಹಾಗೂ ರಾಬರ್ಟ್ ಡಿಸೋಜ ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *