ವಿಟ್ಲ: ನ್ಯೂ ಶೈನ್ ಮ್ಯೂಸಿಕಲ್ ವತಿಯಿಂದ ಮಕ್ಕಳಿಗೆ ಚಲನಚಿತ್ರ ಗೀತೆ, ಭಾವಗೀತೆ, ಜಾನಪದ ಗೀತೆಗಳನ್ನು ಹಿನ್ನೆಲೆ ಸಂಗೀತದೊಂದಿಗೆ ಹಾಡುವ ಮತ್ತು ನೃತ್ಯ ಮಾಡುವ ತರಬೇತಿ ತರಗತಿಗಳ ಉದ್ಘಾಟನಾ ಕಾರ್ಯಕ್ರಮ ವಿಟ್ಲ ಅರಮನೆಯ ಕೃಷ್ಣಯ್ಯ ಕೆ. ಅವರ ಅಧ್ಯಕ್ಷತೆಯಲ್ಲಿ ವಿಟ್ಲ ಬಸ್ ನಿಲ್ದಾಣ ಹತ್ತಿರ ಇರುವ ಕೆ.ಜೆ ಟವರ್ಸ್ನಲ್ಲಿ ಅ.11ರಂದು ನಡೆಯಿತು.
IMG_2575
ಕಾರ್ಯಕ್ರಮವನ್ನು ಪುತ್ತೂರಿನ ಬಾರಿಸು ಕನ್ನಡ ಡಿಂಡಿಮವ ನಿರ್ದೇಶಕ, ರಂಗಕರ್ಮಿ ಚಿದಾನಂದ ಕಾಮತ್ ಕಾಸರಗೋಡು ದೀಪ ಬೆಳಗಿಸಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು “ವಿದ್ಯಾರ್ಥಿಗಳಲ್ಲಿ ಅಡಗಿರುವ ಸುಪ್ತ ಪ್ರತಿಭೆಗೆ ತೆರೆದ ಅವಕಾಶವನ್ನು ಸಾಂಸ್ಕೃತಿಕ ಚಟುವಟಿಕೆಗಳು ನೀಡುತ್ತದೆ. ಹಾಗಾಗಿ ವಿದ್ಯಾರ್ಥಿ ದೆಸೆಯಲ್ಲಿ ಮಕ್ಕಳು ಸಾಂಸ್ಕೃತಿಕ ಅಭಿರುಚಿ ಬೆಳೆಸಿಕೊಂಡು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಹೆಚ್ಚು ಹೆಚ್ಚು ತೊಡಗಿಸಿಕೊಳ್ಳುವಂತಾಗಬೇಕು. ಯಾವುದೇ ಹವ್ಯಾಸ ವಿದ್ಯಾರ್ಥಿ ಗಳನ್ನು ಸನ್ನಡತೆಗೆ ಕೊಂಡೊಯ್ಯುತ್ತದೆ ಎಂದು ಹೇಳಿ ತದನಂತರ ನ್ಯೂ ಶೈನ್ ಮ್ಯೂಸಿಕಲ್ ಸಿದ್ಧಪಡಿಸಿದ “ನೆನಪು” ತುಳು ವೀಡಿಯೊ ಆಲ್ಬಮ್ ಗೀತೆಯ ಧ್ವನಿ ಮುದ್ರಿಕೆಯನ್ನು ಬಿಡುಗಡೆಗೊಳಿಸಿ ಶುಭ ಕೋರಿದರು.

ವೇದಿಕೆಯಲ್ಲಿ ಉಪಸ್ಥಿತರಿದ್ದ ದ.ಕ. ಜಿಲ್ಲಾ ದಲಿತ್ ಸೇವಾ ಸಮಿತಿಯ ಬಿ.ಕೆ ಸೇಸಪ್ಪ, ವಿಟ್ಲ ಆರ್.ಕೆ ಆರ್ಟ್ಸ್ ರಾಜೇಶ್, ತ್ಯಾಗರಾಜನ್ ವಿಟ್ಲ, ಕಾರ್ಮಿ ನ್ ಡಿ’ಸೋಜ ಶುಭ ಹಾರೈಸಿದರು. ಶಮಾ ಪ್ರಾರ್ಥಿಸಿದರು. ಸಂಸ್ಥೆಯ ಪ್ರವೀಣ್ ಜಯ ವಿಟ್ಲ ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ಹರ್ಷಿತ್ ಕುಮಾರ್ ಮತ್ತು ಜಗದೀಶ್ ಮುಂಡಾಜೆ ಅತಿಥಿಗಳನ್ನು ಪರಿಚಯಿಸಿದರು. ಪದ್ಮಶ್ರೀ ಬಿ.ಸಿ ಚಾರ್ವಾಕ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ಬಿಡುಗಡೆಗೊಂಡ ನೆನಪು ತುಳು ವೀಡಿಯೊ ಆಲ್ಬಮ್ನಲ್ಲಿ ಪದ್ಮಶ್ರೀ ಬಿ.ಸಿ ಚಾವಾ ಕ, ಸ್ಮಿತಾ, ಜಗದೀಶ್ ಪ್ರಧಾನ ಭೂಮಿಕೆಯಲ್ಲಿದ್ದು, ಕಥೆ ಗೀತ ರಚನೆ, ಗಾಯನ, ನಿರ್ಧೇದಶನ ಪ್ರವೀಣ್ ಜಯ ವಿಟ್ಲ, ನೃತ್ಯ ನಿರ್ದೇಶನ ಶಿವರಾಮ್ ಅಳಿಕೆ, ಛಾಯಾಗ್ರಹಣ, ಸಂಕಲನ ವಿನ್ಸೆಂಟ್ ಅಮ್ಟೂರ್, ಪ್ರವೀಣ್ ವಿಟ್ಲ

By Suddi9

Leave a Reply

Your email address will not be published. Required fields are marked *