ಬಜಪೆ: ಬಜಪೆ ಶ್ರೀ ಶಾರದೋತ್ಸವ ಸಮಿತಿ ಆಶ್ರಯದಲ್ಲಿ ಜರಗಿದ 23ನೇ ವರ್ಷದ ಸಾರ್ವಜನಿಕ ಶ್ರೀ ಶಾರದೋತ್ಸವ ವೈಭವದ ಶೋಭಾಯಾತ್ರೆಯೊಂದಿಗೆ ಶುಕ್ರವಾರ ಮುಂಜಾನೆ ಸಂಪನ್ನಗೊಂಡಿತು.
ಚೆಂಡೆ ತಂಡ, ತಾಲೀಮು, ನೂರಾರು ಹುಲಿ ವೇಷಗಳು, ಸಾಂಸ್ಕೃತಿಕ ಸ್ತಬ್ಧ ಚಿತ್ರಗಳು, ಭಾರೀ ಸಂಖ್ಯೆಯಲ್ಲಿ ಜನ ಪಾಲ್ಗೊಂಡಿದ್ದರು. ಮೆರವಣಿಗೆಗೆ ಮೆರುಗು ನೀಡಿತ್ತು. ಬಳಿಕ ಶ್ರೀ ಶಾರದಾ ಮಾತೆಯ “ಗ್ರಹವನ್ನು ಮರವೂರು ಪಲ್ಗುಣೀ ನದಿಯಲ್ಲಿ ವಿಸರ್ಜಿಸಲಾಯಿತು.
ರಸ್ತೆ ಪಕ್ಕದಲ್ಲಿ ಅಲ್ಲಲ್ಲಿ ತಳಿರು ತೋರಣ ಅಲಂಕಾರ, ಹಣ್ಣುಕಾು, ದೀಪ, ಬಾಯಾರಿಕೆ ಇರಿಸಿ ಜನ ಮೆರವಣಿಗೆಗೆ ಸ್ವಾಗತ ಕೋರಿದರು.

