ಕಾರ್ಕಳ: ಕಾರ್ಕಳದ ದುರ್ಗಾ ಎಂಬಲ್ಲಿ ಭಾರೀ ಪ್ರಮಾಣದಲ್ಲಿ ಸಂಗ್ರಹಿಸಿಟ್ಟಿದ್ದ ಸ್ಫೋಟಕ ಪತ್ತೆಯಾಗಿದೆ. ಈ ಬಗ್ಗೆ ಖಚಿತ ಮಾಹಿತಿಯರಿತ ಪೊಲೀಸರು ಎಎಸ್ಪಿ ನೇತೃತ್ವದಲ್ಲಿ ದಾಳಿ ನಡೆಸಿ ಸ್ಫೋಟಕಗಳನ್ನು ವಶಪಡಿಸಿಕೊಂಡಿದ್ದಾರೆ.
ತಾಲೂಕಿನ ತೆಳ್ಳಾರು ಗ್ರಾಮದ ದುರ್ಗಾ ಎಂಬಲ್ಲಿರುವ ಜಲದುರ್ಗಾ ದೇವಸ್ಥಾನ ಸಮೀಪದ ತೋಟದ ಮನೆಯೊಂದರಲ್ಲಿ ಅಕ್ರಮವಾಗಿ ಸ್ಫೋಟಕಗಳನ್ನು ಸಂಗ್ರಹಿಸಿಡಲಾಗಿತ್ತು. ಅಮೋನಿಯಂ ನೈಟ್ರೇಟ್ ಇರುವ 50 ಕೆ.ಜಿ. ತೂಕದ 220 ಚೀಲವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ದಾಳಿಯ ವೇಳೆ ಆರೋಪಿ ಬೀಜೋ ತಲೆ ಮರೆಸಿಕೊಂಡಿದ್ದಾನೆ. ಈತ ಕಳೆದ ಒಂದು ವರ್ಷಗಳ ಹಿಂದೆ ಕೆಲವೆಡೆಗಳಲ್ಲಿ ಇದೇ ರೀತಿಯಲ್ಲಿ ಸ್ಫೋಟಕಗಳನ್ನು ಸಂಗ್ರಹಿಸಿ ಇಟ್ಟಿದ್ದ. ಅಂದು ಕಾರ್ಕಳ ಎಎಸ್ಪಿಯಾಗಿದ್ದ ಅಣ್ಣಾಮಲೈ ಪ್ರಕರಣವನ್ನು ಭೇಧಿ ಕೋಟ್ಯಂತರ ಬೆಲೆಬಾಳುವ ಸ್ಫೋಟಕಗಳನ್ನು ವಶಪಡಿಸಿಕೊಂಡಿದ್ದರು. ಕೋಟ್ಯಂತರ ಬೆಲೆಬಾಳುವ ಸ್ಫೋಟಕ ಪತ್ತೆಯಾಗಿದ್ದು ರಾಜ್ಯದಲ್ಲೇ ಪ್ರಥಮವಾಗಿತ್ತು. ಇದೀಗ ಬೀಜೋ ತನ್ನ ಛಾಳಿಯನ್ನು ಮತ್ತೆ ಮುಂದುವರಿಸಿದ್ದಾನೆ.

