ಬಂಟ್ವಾಳ; ಬ್ರಹ್ಮರಕೂಟ್ಲು ಟೋಲ್ ಫ್ಲಾಝಾದ ಹೆಸರಿನಲ್ಲಿ ಸಾಮಾಜಿಕ ಶಾಂತಿ ಹಾಳುಗೆಡಹುವವರ ವಿರುದ್ದ ಪೊಲೀಸರು ನಿದರ್ಾಕ್ಷಿಣ್ಯ ಕ್ರಮ ಕೈಗೊಳ್ಳಬೇಕೆಂದು ಇಲ್ಲಿನ ಜನಪರ ಹೋರಾಟ ಸಮಿತಿ ಆಗ್ರಹಿಸಿದೆ. ಶನಿವಾರ ಸಂಜೆ ಬಿ.ಸಿ.ರೋಡಿನಲ್ಲಿ ಕರೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಸಮಿತಿ ಕಾರ್ಯದರ್ಶಿ ಕಿರಣ್ ಕುಮಾರ್ ಮಾತನಾಡಿ ಹೋರಾಟ ದ ಹೆಸರಿನಲ್ಲಿ ಗಲಾಟೆ ಮಾಡುವವರು ನ್ಯಾಯೋಚಿತ ಬೇಡಿಕೆಗಳನ್ನು ಮುಂದಿಟ್ಟರೆ ಅದು ಸರಿಯಾದ ಹೋರಾಟ ವಾದೀತು. ಆದರೆ ಯಾರದೋ ಹಿತಾಸಕ್ತಿಗೆ ಕಟ್ಟುಬಿದ್ದು, ಆರೋಪಿಗಳನ್ನು ರಕ್ಷಿಸುವ ಕಾರಣಕ್ಕೆ ಹೋರಾಟ ನಡೆಸುವುದು ಎಷ್ಟು ಸರಿ ಎಂದು ಪ್ರಶ್ನಿಸಿರುವ ಅವರು, ಇಲ್ಲಿ ರಾಜಕೀಯ ಪಕ್ಷಗಳು, ಸಂಘಟನೆಗಳು ಮಾಡುತ್ತಿರುವ ಹೋರಾಟ ಕೇವಲ ಟೋಲ್ ಫ್ಲಾಝಾದವನ್ನು ಕೇಂದ್ರೀಕರಿಸಿ ನಡೆಯುತ್ತಿದೆ, ಅವಶ್ಯವಾಗಿ ಚಚರ್ೆಯಾಗಿ ಪರಿಹಾರ ಸಿಗಲೇಬೇಕಾದ ತುಂಬೆ ಕಾಲೇಜು ಬಳಿಯ ಅಪಾಯಕಾರಿ ತಿರುವು, ಚತುಷ್ಪಥದ ಅಕ್ಕಪಕ್ಕದ  ರಸ್ತೆಯ ಕೊರತೆ, ಬಸ್ಸುತಂಗುದಾಣದ ಸಮಸ್ಯೆಗಳ ಬಗ್ಗೆ ಯಾರೂ ಚಕಾರವೆತ್ತುತ್ತಿಲ್ಲ. ಟೋಲ್ ಪ್ಳಾಝಾ ದ ಆರಂಭದಲ್ಲಿ ಮೂಲಭೂತ ಸಮಸ್ಯೆಗಳ ಬೇಡಿಕೆ ಮುಂದಿಟ್ಟುಕೊಂಡು ನಡೆದ ಹೋರಾಟಕ್ಕೆ ಬೆಂಬಲ ಕೊಡದವರು ಈಗ್ಯಾಕೆ ಹೊಸ ಸಮಿತಿ ರಚಿಸಿ ಹೋರಾಟ ನಡೆಸುತ್ತಿದ್ದಾರೆ ಎಂದರು. ಟೋಲ್ ಫ್ಲಾಝಾದ ಗುತ್ತಿಗೆದಾರರು ಹಾಗೂ ಸಿಬ್ಬಂದಿಗಳಿಂದ ಯಾವುದೇ ತೊಂದರೆಗಳಾಗುತ್ತಿಲ್ಲ, ಗುತ್ತಿಗೆದಾರರು ಇಕ್ಕೆಲಗಳಲ್ಲಿ ಬಸ್ ತಂಗುದಾಣಗಳನ್ನು ನಿರ್ಮಿಸಿ ಕೊಟ್ಟಿದ್ದಾರೆ, ಸ್ಥಳೀಯರಿಗೆ ಉದ್ಯೋಗ ಕೊಡಿಸಿದ್ದಾರೆ ಇಷ್ಟಾದರೂ, ಗುತ್ತಿಗೆದಾರರ ಮೇಲೆ ಇಲ್ಲ ಸಲ್ಲದ ಆರೋಪ ಹೊರಿಸಿ ಸಿಬ್ಬಂದಿಗಳ ಮೇಲೆ ಹಲ್ಲೆ ನಡೆಸುವ ಕಾರ್ಯ ನಡೆಯುತ್ತಿದೆ. ಮಾತ್ರವಲ್ಲ ಹಲ್ಲೆ ನಡೆಸಿದ ಆರೋಪಿಗಳ ಬಗ್ಗೆ ವಿಡೀಯೋ ದೃಶ್ಯಾವಳಿಗಳ ಸಹಿತ ದೂರು ಕೊಟ್ಟರೂ ಪೊಲೀಸ್ ಇಲಾಖೆ ಮೌನ ವಹಿಸಿದೆ ಎಂದು ಆರೋಪಿಸಿರುವ ಅವರು, ಪೊಲೀಸರ ನಿರ್ಲಕ್ಷ್ಯದಿಂದಾಗಿ ಇಂತಹ ಘಟನೆಗಳು ಮರುಕಳಿಸುತ್ತಿದೆ. ಆರೋಪಿಗಳನ್ನು ಶೀಘ್ರ ಬಂಧಿಸದೇ ಇದ್ದಲ್ಲಿ ಬಂಟ್ವಾಳ ಪೊಲೀಸ್ ಠಾಣೆಯ ಮುಂದೆ ಉಪವಾಸ ಸತ್ಯಾಗ್ರಹ ನಡೆಸಲಾಗುವುದು ಎಂದು ಅವರು ತಿಳಿಸಿದರು.
ಪತ್ರಿಕಾ ಗೋಷ್ಠಿಯಲ್ಲಿ ಸಮಿತಿ ಅಧ್ಯಕ್ಷ ರೂಪೇಶ್ ಜ್ಯೋತಿಗುಡ್ಡೆ, ಪ್ರವೀಣ್ ಜ್ಯೋತಿಗುಡ್ಡೆ, ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *