ದೆಹಲಿ: ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಹನಿಮೂನ್ ಮತ್ತು ಪಿಕನಿಕ್ ನಡೆಸಲು ದಲಿತರ ಮನೆಗೆ ಹೋಗುತ್ತಾರೆ ಎಂದು ಅಸಂಬದ್ಧ ಹೇಳಿಕೆ ನೀಡಿರುವ ಯೋಗಗುರು ಬಾಬಾ ರಾಮದೇವ್ ಹೊಸ ವಿವಾದಕ್ಕೆ ಜನ್ಮ ನೀಡಿದ್ದಾರೆ.
ಲಖನೌನ ಸಭೆಯೊಂದರಲ್ಲಿ ಮಾತನಾಡುತ್ತಿದ್ದ ಬಾಬಾ, “ರಾಹುಲ್ ಹನಿಮೂನ್ ಮತ್ತು ಪಿಕ್ನಿಕ್ ನಡೆಸಲು ದಲಿತರ ಮನೆಗೆ ಹೋಗುತ್ತಾರೆ. ಇದರ ಬದಲು ಅವರು ದಲಿತ ಹುಡುಗಿಯನ್ನು ಮದುವೆಯಾಗಿದ್ದರೆ, ಅವರ ಅದೃಷ್ಟ ಬದಲಾಗಿ ಅವರು ಪ್ರಧಾನ ಮಂತ್ರಿಯಾಗಿರುತ್ತಿದ್ದರು. ಮೋದಿ ಮತ್ತು ಬಾಬಾ ರಾಮದೇವ್, ರಾಹುಲ್ ತರಹ ಅನಿವಾರ್ಯತೆಯಿಂದ ಫಕೀರರಾಗಿಲ್ಲ” ಎಂದು ಬಾಬಾ ಟೀಕಿಸಿದರು.
“ಈ ವ್ಯಕ್ತಿಯ ಅದೃಷ್ಟ ತುಂಬ ಕೆಟ್ಟದಿದೆ. ಅವರ ಮಮ್ಮಿ ಹೇಳುತ್ತಾರೆ ನೀನು ವಿದೇಶದ ಹುಡುಗಿಯನ್ನು ಮದುವೆಯಾದರೆ ಪ್ರಧಾನಿಯಾಗಲು ಸಾಧ್ಯವಿಲ್ಲ. ಆದರೆ ಆತ ದೇಶಿಯ ಹುಡುಗಿಯನ್ನು ಮದುವೆಯಾಗಲು ತಯಾರಿಲ್ಲ. ಅವರ ಅಮ್ಮ ಆತ ಮೊದಲು ಪ್ರಧಾನಿಯಾಗಬೇಕು, ನಂತರ ವಿದೇಶಿ ಹುಡುಗಿಯನ್ನು ಕರೆತರಲಿ ಎಂದು ಬಯಸುತ್ತಿದ್ದಾರೆ” ಎಂದು ಬಹಳ ಕಟುವಾಗಿ ಬಾಬಾ ಯನ್ನು ಮೂದಲಿಸಿದರು. ಬಾಬಾರ ಈ ಹೇಳಿಕೆಯನ್ನು ತೀವೃವಾಗಿ ಖಂಡಿಸಿರುವ ಕಾಂಗ್ರೆಸ್ ಅವರ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸುವುದಾಗಿ ಹೇಳಿದೆ.

