ದಿನಪತ್ರಿಕೆಯೊಂದರಲ್ಲಿ ಪ್ರಕಟವಾದ ವರದಿಯ ಪ್ರಕಾರ ಮೋದಿ ವಡೋದರಾದಲ್ಲಿ ನಾಮಪತ್ರ ಸಲ್ಲಿಸಿದ ನಂತರ  ಅವರ ಪತ್ನಿ ಜಶೋಧಾ ಬೆನ್‌ರವರನ್ನು ರಾಮದೇವ್ ಬಾಬಾರವರ ಆಶ್ರಮದಲ್ಲಿ ಇಡಲಾಗಿದೆ. ಆದರೆ ರಾಮದೇವ್ ಆಶ್ರಮದವರು ಈ ಸುದ್ದಿಯನ್ನು ಖಂಡಿಸಿದ್ದಾರೆ. ತಮ್ಮ ಪತಿ ಮೋದಿ ಪ್ರಧಾನಿಯಾಗ ಬೇಕೆಂಬ ಸಂಕಲ್ಪದಲ್ಲಿ ತೀರ್ಥಯಾತ್ರೆಗೆ ಹೊರಟ ಜಶೋಧಾ ಬೆನ್‌ರವರನ್ನು ಸಂಪರ್ಕಿಸಿದ ಮೋದಿ ಬೆಂಬಲಿಗರು ಅವರನ್ನು ಉತ್ತರಾಖಂಡ್‌ನ ರಾಮದೇವ್ ಆಶ್ರಮದಲ್ಲಿ ಅಡಗಿಸಿಡಲಾಗಿದೆ. ಯಾತ್ರಾರ್ಥಿಗಳ ವೇಷದಲ್ಲಿರುವ ಮೋದಿ ಸಮರ್ಥಕರು ಅವರಿಗೆ ಭದ್ರತೆಯನ್ನು ಒದಗಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
jashodaben-pti-360
ಕಾಂಗ್ರೆಸ್ ಮತ್ತು ಮಾಧ್ಯಮಗಳಿಂದ ತಪ್ಪಿಸಲು ಅವರನ್ನು ಹೀಗೆ ಅಜ್ಞಾತ ಸ್ಥಳದಲ್ಲಿ ಇಡಲಾಗಿದೆ . ಒಂದು ವೇಳೆ ಜಶೋಧಾರವರನ್ನು ಮಾಧ್ಯಮಗಳು ಅಥವಾ ವಿರೋಧ ಪಕ್ಷಗಳು ಕಂಡುಕೊಂಡರೆ <ಮೋದಿಯ ವರ್ಚಸ್ಸಿಗೆ ಕುಂದು ತರುವಂತಹದ್ದು ನಡೆಯಬಹುದು ಎಂಬ ಶಂಕೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು  ವರದಿಯಾಗಿದೆ. ವಡೋದರಾದಲ್ಲಿ ಮೋದಿ ತಾವು ವಿವಾಹಿತರೆಂದು ಘೋಷಿಸಿದ ನಂತರ, ಆ ವಿಷಯವನ್ನು ಇಟ್ಟುಕೊಂಡು ವಿರೋಧ ಪಕ್ಷಗಳು ಅವರ ಮೇಲೆ ಟೀಕಾಸ್ತ್ರಗಳ ಸುರಿಮಳೆಯನ್ನು ಸುರಿಸುತ್ತಿವೆ.

By suddi9

Leave a Reply

Your email address will not be published. Required fields are marked *