ಮೂಡುಬಿದರೆ: ವರ್ಧಮಾನ ಪ್ರಶಸ್ತಿ ಪೀಠದಿಂದ ವತಿಯಿಂದ 2014ರ ಸಾಲಿನ ಪ್ರಶಸ್ತಿ ವರ್ಧಮಾನ ಪ್ರಶಸ್ತಿ ಪ್ರದಾನ ಸಮಾರಂಭ ಸಮಾಜ ಮಂದಿರದಲ್ಲಿ ಗುರುವಾರ ರಾತ್ರಿ ನಡೆಯಿತು.
ವರ್ಷದ ಶ್ರೇಷ್ಠ ಕನ್ನಡ ಸಾಹಿತ್ಯ ಕೃತಿಗಾಗಿ ಧಾರವಾಡದ ಡಾ.ಗಿರಡ್ಡಿ ಗೋವಿಂದರಾಜ ಅವರ `ಸಾಹಿತ್ಯಲೋಕದ ಸುತ್ತಮುತ್ತ (ಪ್ರಸಂಗಗಳು) ಕೃತಿಗಾಗಿ ವರ್ಧಮಾನ ಸಾಹಿತ್ಯ ಪ್ರಶಸ್ತಿ ಹಾಗೂ ಡಾ.ಕಾತ್ಯಾಯಿನಿ ಕುಂಜಿಬೆಟ್ಟು ಉಡುಪಿ ಅವರ ‘ತೊಗಲುಗೊಂಬೆ’ ಕಾದಂಬರಿಗೆ ವರ್ಧಮಾನ ಉದಯೋನ್ಮುಖ ಸಾಹಿತ್ಯ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಪ್ರಶಸ್ತಿ ಪೀಠದ ನಿಕಟಪೂರ್ವ ಅಧ್ಯಕ್ಷ ಸಿ.ಕೆ.ಪಡಿವಾಳ್ ಅವರನ್ನು ಸನ್ಮಾನಿಸಲಾಯಿತು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಡಾ.ಗಿರಡ್ಡಿ ಗೋವಿಂದರಾಜ, ಸಾಹಿತ್ಯ ವಿಮರ್ಶೆಯನ್ನು ಜನಾನುರಾಗಿಯಾಗಿಸಬೇಕಾದರೆ ಅದು ಸೈದ್ಧಾಂತಿಕ ಹಾಗೂ ಗ್ರಾಂಥಿಕವಾಗಿರದೆ ಸ್ವಾಭಿವ್ಯಕ್ತಿಗೆ ಪೂರಕವಾಗಿರಬೇಕು. ಈ ರೀತಿಯ ಸ್ವಾಭಿವ್ಯಕ್ತಿಗೆ ಸಾಹಿತ್ಯ ಪ್ರಕಾರಗಳ ಮಿಶ್ರಣದಿಂದ ಅನುಕೂಲವಾಗುತ್ತದೆ ಎಂದರು.
ಡಾ.ಕಾತ್ಯಾಯಿನಿ ಕುಂಜಿಬೆಟ್ಟು ಪ್ರಶಸ್ತಿ ಸ್ವೀಕರಿಸಿ ಮಾತನಾಡಿ, ತನ್ನ ತೊಗಲು ಗೊಂಬೆ ಕೃತಿ ತಲೆಮಾರಿನ ಸಂಸ್ಕøತಿಯನ್ನು ದಾಖಲಿಸುವ ಪ್ರಯತ್ನವಾಗಿದೆ. ಇಂದಿನ ಪ್ರಶಸ್ತಿ ಹೆಚ್ಚಿನ ಸಾಹಿತ್ಯ ಕೃಷಿಗೆ ಪ್ರೋತ್ಸಾಹ ನೀಡಿದಂತಾಗಿದೆ ಎಂದರು.
ಪೀಠದ ಅಧ್ಯಕ್ಷ ಎಸ್.ಡಿ. ಸಂಪತ್ ಸಾಮ್ರಾಜ್ಯ ಸಮಾರಂಭ ಅಧ್ಯಕ್ಷತೆ ವಹಿಸಿ, ಪ್ರಶಸ್ತಿ ಪ್ರದಾನ ಮಾಡಿದರು.
ಪೀಠದ ಪ್ರಧಾನ ನಿರ್ದೇಶಕ ಡಾ.ನಾ ಮೊಗಸಾಲೆ ಪ್ರಸ್ತಾವನೆಯೊಂದಿಗೆ ಸ್ವಾಗತಿಸಿದರು. ವಿಠಲ ಬೇಲಾಡಿ ಕಾರ್ಯಕ್ರಮ ನಿರೂಪಿಸಿದರು. ಶ್ರೀಪಾಲ್.ಎಸ್.ವಂದಿಸಿದರು,
