ಬಂಟ್ವಾಳ: ಭಾಷೆಯ ಬಳಕೆ ಕಡಿಮೆಯಾದಲ್ಲಿ ಅದು ಆ ಭಾಷೆಯ ನಾಶಕ್ಕೆ ಕಾರಣವಾಗುತ್ತದೆ, ಭಾಷೆಗಳ ಉಳಿವು ಹಾಗೂ ಅದರ ಹಿಂದಿನ ಸಂಸ್ಕ್ರತಿಯ ಉಳಿವಿಗಾಗಿ ಸರ್ಕಾರ ಅಕಾಡೆಮಿಗಳನ್ನು ಸ್ಥಾಪಿಸಿದೆ ಎಂದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದರು.
ಅವರು ಮಂಗಳವಾರ ಗೋಳ್ತಮಜಲು ಅನುಗ್ರಹ ಮಹಿಳಾ ಕಾಲೇಜಿನಲ್ಲಿ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಆಶ್ರಯದಲ್ಲಿ “ಬ್ಯಾರಿ ಭಾಷಾ ಮಾಸಾಚರಣೆಯ ಅಂಗವಾಗಿ ನಡೆದ “ಬ್ಯಾರಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಭ್ರಮ” ಕಾರ್ಯಕ್ರಮವನ್ನು ಉದ್ಘಾಟಸಿ ಮಾತನಾಡಿದರು.

6

1 (1)

2
ಬ್ಯಾರಿ ಭಾಷೆ ಸುಂದರ ಭಾಷೆಯಾಗಿದ್ದು, ಅದರ ಸುಂದರ ಸಾಹಿತ್ಯಗಳು ಮನಸ್ಸಿಗೆ ಖುಷಿಕೊಡುತ್ತದೆ ಎಂದರು. ಮಕ್ಕಳೆಲ್ಲರೂ ಬ್ಯಾರಿ ಸಾಹಿತ್ಯದ ಬಗ್ಗೆ ಹೆಚ್ಚಿನ ಒಲವು ತೋರುವ ಮೂಲಕ ಭಾಷೆಯ ಉಳಿವಿಗೆ ಶ್ರಮಿಸುವಂತೆ ಅವರು ಕರೆ ನೀಡಿದರು.
ದಕ್ಷಿಣ ಕನ್ನಡ ಜಿಲ್ಲೆ ವಿವಿಧ ಧರ್ಮ-ಭಾಷಿಗರ ಜಿಲ್ಲೆಯಾಗಿದ್ದು ಇಡೀ ರಾಜ್ಯಕ್ಕೆ ಸೌಹಾರ್ದತೆಯ ಸಂಕೇತವಾಗಿತ್ತು. ಆದರೆ ಧರ್ಮ ಧರ್ಮಗಳ ನಡಿವೆ ವಿಷಬೀಜಗಳನ್ನು ಭಿತ್ತಿ, ನೀರು ಕದಡಿ ಮೀನು ಹಿಡಿಯುವ ಮತೀಯವಾದಿಗಳಿಂದಾಗಿ ಜಿಲ್ಲೆಯ ಹೆಸರು ಕೆಡುತ್ತಿದೆ ಎಂದವರು ವಿಷಾಧಿಸಿದರು.
ಮಕ್ಕಳೆಂದರೆ ದೇವರ ಸಮಾನರು, ಕಡಿ, ಪಿಡಿ, ಎದ್ದೇಳು, ಸಿಂಹದಂತೆ ಘರ್ಜಿಸು ಎನ್ನುತ್ತಾ ಕೋಮು ಪ್ರಚೋದನೆ ಮಾಡುವವರಿಗೆ ಗೌರವ ಸಿಗ್ತದೆ ,ಅದು ನಿಜವಾದ ಗೌರವವಲ್ಲ. ಹೆದರಿಕೆಯ ಗೌರವ ಎಂದ ಅವರು, ಕೆಲವರು ಸಮಾಜ ಸೇವೆ ಮಾಡಿ ನಾಯಕರಾಗ್ತಾರೆ, ಕೆಲವರು ಭಾಷಣ ಮಾಡಿ ಲೀಡರ್ ಆಗ್ತಾರೆ , ಆದರೆ ಅದು ಕೇವಲ ಕ್ಷಣಿಕ ಮಾತ್ರ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ಅಕಾಡೆಮಿಯ ಅಧ್ಯಕ್ಷರಾದ ಬಿ.ಎ. ಮುಹಮ್ಮದ್ ಹನೀಫ್ ವಹಿಸಿದ್ದರು.
ಪ್ರೊ| ಬಿ.ಎಂ. ಇಚ್ಲಂಗೋಡುರವರ ‘ನಾನುಂ-ನೀನುಂ-ದುನಿಯಾವುಂ’ ಎಂಬ ಕೃತಿಯನ್ನು ಬಿಡುಗಡೆ ಮಾಡಿದ ಸಚಿವರು, ಸಾಧಕರನ್ನು ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಿದರು. ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಪ್ರದೀಪ್ ಕುಮಾರ್ ಕಲ್ಕೂರ ಇವರು ಕೃತಿಕಾರರಿಗೆ ಅಭಿನಂದನೆ ನೆರವೇರಿಸಿದರು.
ಬ್ಯಾರಿ-ಕನ್ನಡ-ಇಂಗ್ಲಿಷ್ ನಿಘಂಟು ಉಪಸಂಪಾದಕ ಜನಾಬ್ ಅಬ್ದುಲ್ ರಹ್ಮಾನ್ ಕುತ್ತೆತ್ತೂರು ಕೃತಿ ಪರಿಚಯಿಸಿದರು. ಬಂಟ್ವಾಳ ಬ್ಯಾರಿ ಸಾಹಿತ್ಯ ಪರಿಷತ್ತು ಅಧ್ಯಕ್ಷ ಅಬ್ಬಾಸ್ ಅಲಿ ಬಿ.ಎಂ, ಗೋಳ್ತಮಜಲು ಗ್ರಾಮ ಪಂಚಾಯತ್ ಅಧ್ಯಕ್ಷೆ ಜಯಲಕ್ಷ್ಮಿ ಎಸ್.ಭಟ್, ಜಿಲ್ಲಾ ಪಂಚಾಯತ್ ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ, ಎಂ.ಎಸ್. ಮಹಮ್ಮದ್, ಮಮತಾ ಗಟ್ಟಿ, ತಾ.ಪಂ. ಸದಸ್ಯೆ ಐಡಾ ಸುರೇಶ್, ದ.ಕ.ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಉಪಾಧ್ಯಾಕ್ಷರಾದ ಅಬೂಬಕ್ಕರ್ ಸಜಿಪ, ಕುಪ್ಪೆಪದವು ಗ್ರಾ.ಪಂ.ಸದಸ್ಯ ಬಿ.ಎ.ಅಬೂಬಕ್ಕರ್, ಅನುಗ್ರಹ ಮಹಿಳಾ ಕಾಲೇಜಿನ ಸಂಚಾಲಕ ಇಬ್ರಾಹಿಂ ಚೆಂಡಾಡಿ, ಜೆಮ್ ಆಂಗ್ಲ ಮಾಧ್ಯಮ ಶಾಲಾ ಆಡಳಿತ ಟ್ರಸ್ಟಿ ಮಹಮ್ಮದ್ ಹನೀಫ್ ಹಾಜಿ, ಕಲ್ಲಡ್ಕ ಮೊಹಿಯುದ್ದೀನ್ ಜುಮ್ಮಾ ಮಸೀದಿ ಸದಸ್ಯ ಬಿ.ಕೆ.ಇದಿನಬ್ಬ, ಉಪನ್ಯಾಸಕ ಅಬ್ದುಲ್ ರಝಾಕ್, ಕಾರ್ಯದರ್ಶಿ ಇಬ್ರಾಹಿಂ ಡಿ.ಕೆ, ಅನುಗ್ರಹ ಪದವಿ ಕಾಲೇಜಿನ ಪ್ರಾಂಶುಪಾಲೆ ಸುಚಿತ್ರ, ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ ಜ್ಯೋತಿ ರತ್ನ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ನಿವೃತ್ತ ಶಿಕ್ಷಕ ಜನಾಬ್ ಅಬ್ದುಲ್ ಸಲಾಂ ಮಾಸ್ಟರ್, ಸನ್ಮಾರ್ಗ ವಾರಪತ್ರಿಕೆಯ ಸಂಪಾದಕ ಜನಾಬ್ ಅಬ್ದುಲ್ ಖಾದರ್ ಕುಕ್ಕಿಲ, ಹಿರಿಯ ಕವಿ ಜನಾಬ್ ರಹೀಮ್ ಬಿ.ಸಿ.ರೋಡ್ ಹಾಗೂ ಜಿಲ್ಲಾ ಪ್ರಶಸ್ತಿ ವಿಜೇತ ಜನಾಬ್ ಬಿ. ಅಬೂಬಕ್ಕರ್ ಬಾರ್ದಿಲ ಈ ನಾಲ್ಕು ಮಂದಿ ಸಾಧಕರನ್ನು ಸಚಿವರು ಸನ್ಮಾನಿಸಿದರು.
ಫೌಝಿಯ, ನೌಶೀದ, ಮಿನಾಝ ಫರ್ವಿನ್, ರಂಝೀನ, ಆಯೆಶ ಸಮ್ರೀನ, ಕಂಶೀರಾ, ಆಯಿಷತುಲ್ ಆಶಿಕ ಹಾಗೂ ಉಮ್ಮುಸಲ್ಮಾ ಇಂತಹ ವಿದ್ಯಾರ್ಥಿನಿಯರಿಗೆ ಪುರಸ್ಕಾರ ನೀಡಲಾಯಿತು. ವಿದ್ಯಾರ್ಥಿನಿಯರಿಗೆ ಬ್ಯಾರಿ ಕ್ವಿಝ್ ಹಾಗೂ ಬ್ಯಾರಿ ಭಾಷೆಯಲ್ಲಿ ಓದುವ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.
ಅಕಾಡೆಮಿ ಸದಸ್ಯ ಅಬ್ದುಲ್ ಹಮೀದ್ ಗೋಳ್ತಮಜಲು, ಅಬ್ದುಲ್ ಲತೀಫ್ ನೇರಳಕಟ್ಟೆ, ಝಕಾರಿಯಾ ಕಲ್ಲಡ್ಕ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅಕಾಡೆಮಿಯ ರಿಜಿಸ್ಟ್ರಾರ್ ಉಮರಬ್ಬ ಸ್ವಾಗತಿಸಿದರು. ಅಕಾಡೆಮಿ ಅಧ್ಯಕ್ಷ ಬಿ.ಎಮಹಮ್ಮದ್ ಹನೀಫ್ ಪ್ರಸ್ತಾವನೆಗೈದರು, ಅಕಾಡೆಮಿ ಸದಸ್ಯ ಅಬ್ದುಲ್ ಹಮೀದ್ ಗೋಳ್ತಮಜಲು ಕಾರ್ಯಕ್ರಮ ನಿರ್ವಹಿಸಿದರು. ಸದಸ್ಯ ಲತೀಫ್ ನೇರಳಕಟ್ಟೆ ವಂದಿಸಿದರು. ಉದ್ಘಾಟನಾ ಸಮಾರಂಭದ ಬಳಿಕ ಕವಿಗೋಷ್ಠಿ ಹಾಗೂ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆದು ಸಂಜೆ ಸಮಾರೋಪ ಸಮಾರಂಭ ನಡೆಯಿತು.

By Suddi9

Leave a Reply

Your email address will not be published. Required fields are marked *