ಬಂಟ್ವಾಳ: ಬಿ.ಸಿ.ರೋಡಿನ ಪೊಲೀಸ್‍ಲೇನ್‍ನಲ್ಲಿರುವ ಶ್ರೀ ಅನ್ನಪೂಣೆಶ್ವರೀ ದೇವಸ್ಥಾನದ ಅನ್ನಪೂರ್ಣ ಅನ್ನಛತ್ರವನ್ನು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಮಂಗಳವಾರ ಉಧ್ಘಾಟಿಸಿದರು. ಧಾರ್ಮಿಕ ದತ್ತಿ ಇಲಾಖೆಯಿಂದ 4 ಲಕ್ಷ ರುಪಾಯಿ ಅನುದಾನದಡಿ ಮಂಜೂರುಗೊಂಡ ದೇವಸ್ಥಾನದ ಪ್ರಾಂಗಣಕ್ಕೆ ಅಲ್ಯೂಮಿನಿಯಂ ಫಲಕಗಳ ಛಾವಣಿಯನ್ನು ಅಳವಿಡಿಸುವ ಕಾಮಗಾರಿಗೂ ಸಚಿವರು ಚಾಲನೆ ನೀಡಿದರು. ಬಳಿಕ ನವರಾತ್ರಿಯ ಉತಸ್ವದ ಪ್ರಯುಕ್ತ ದೇವಸ್ಥಾನದಲ್ಲಿ ನಡೆಯುವ ವಿಶೇಷ ಪೂಜೆಯಲ್ಲಿ ಪಾಲ್ಗೊಂಡರು.
BTW_OCT13_2 - Copy
ಈ ಸಂದರ್ಭ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಸೇಸಪ್ಪ ಕೋಟ್ಯಾನ್ ಪಚ್ಚಿನಡ್ಕ, ಕೋಶಾಧಿಕಾರಿ ಸದಾಶಿವ ಬಂಗೇರಾ, ಆನಂದ ಕೆ., ವಿಶ್ವನಾಥ ಪೂಜಾರಿ, ಬಂಟ್ವಾಳ ವೃತ್ತ ನಿರೀಕ್ಷಕ ಕೆ.ಯು.ಬೆಳ್ಳಿಯಪ್ಪ, ನಗಠ ಠಾಣಾ ಎಸೈ ನಂದಕುಮಾರ್, ನಿವೃತ್ತ ಎಎಸೈ ಕೇಪುಗೌಡ, ಕೃಷ್ಣ ಕುಲಾಲ್, ಮಾಧವ ಕುಲಾಲ್, ಜಗನ್ನಾಥ ಶೆಟ್ಟಿ, ಚಂದ್ರಹಾಸ ಶೆಟ್ಟಿ, ಪುಷ್ಪರಾಜ ಶೆಟ್ಟಿ, ಪ್ರಕಾಶ್ ಶೆಟ್ಟಿ ತುಂಬೆ, ಪುರಸಭಾ ಸದಸ್ಯರಾದ ಪ್ರಭಾ ಆರ್. ಸಾಲ್ಯಾನ್, ಲೋಕೇಶ್ ಸುವರ್ಣ, ಮೋಹನದಾಸ ಕೊಟ್ಟಾರಿ ಮತ್ತಿತರರು ಹಾಜರಿದ್ದರು.

By Suddi9

Leave a Reply

Your email address will not be published. Required fields are marked *