ಕೈಕಂಬ: ಶ್ರೀ ಭದ್ರಕಾಳಿ ಸನ್ನಿಧಿಯಲ್ಲಿ 31ನೇ ವರ್ಷದ ನವರಾತ್ರಿ ಮಹೋತ್ಸವವು ಅ. 21ಬುಧವಾರ ದಿಂದ ಅ.22 ಗುರುವಾರದವರೆಗ ವಿವಿಧ ಕಾರ್ಯಕ್ರಮಗಳೊಂದಿಗೆ ಬೆಂಜನಪದವು ಭದ್ರಕಾಳಿ ದೇವಸ್ಥಾನದಲ್ಲಿನಡೆಯಲಿದೆ.
ಅ. 20 ರಂದು ಮಂಗಳವಾರ ಬೆಳಗ್ಗೆ 8 ಗಂಟೆಗೆ ಗಣಹೋಮ, 9ರಂದ 11ಗಂಟೆಯವರೆಗೆ ಭದ್ರಕಾಳಿ ಸೇವಾಸಮಿತಿ ಬೆಂಜನಪದವು ಇವರಿಂದ ಭಜನೆ, ಬೆಳಗ್ಗೆ 11 ಗಂಟೆಯಿಂದ 12ಗಂಟೆಯವರೆಗೆ ಶ್ರೀ ದೇವಿಗೆ ಮಹಾಪೂಜೆ , ಆವೇಶ ಬಲಿ ವಾಹನಗಳಿಗೆ ಆಯುಧಪೂಜೆ ,ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ಸಂಜೆ 4ರಿಂದ 6ರ ತನಕ ಕ್ಷೇತ್ರದ ಗುಳಿಗ ಕೋಲ ಮತ್ತು ಪರಿವಾರ ದೈವಗಳಿಗೆ ಕೋಲ ಸಾಯಂಕಾಲ 6ರಿಂದ ರಾತ್ರಿ 9ರ ತನಕ ಧರ್ಮದೈವ ಧೂಮಾವತಿ ಬಂಟ ನೇಮೋತ್ಸವ ಅಣ್ಣಪ್ಪ ದೈವದ ನೇಮೋತ್ಸವ ನಡೆಯಲಿದೆ. ರಾತ್ರಿ 12.30 ರಿಂದ ಕೆಂಡ ಸೇವೆ ಹಾಗೂ ಮೂರ್ತಿ ಬಲಿ ಉತ್ಸವ ನಡೆಯಲಿದೆ. ಎಂದು ಭದ್ರಕಾಳಿ ದೇವಳದ ಪ್ರಕಟನೆ ತಿಳಿಸಿದೆ.

