ವಿಟ್ಲ: ಆನ್ ಲೈನ್ ಟಿಕೆಟ್ ಬುಕಿಂಗ್ ಮಾಡಿ ಬಸ್ಸಿನಲ್ಲಿ ಆಧಾರ್ ಕಾರ್ಡ್ ತೋರಿಸಿದರೂ ಸಮರ್ಪಕ ದಾಖಲೆ ಇಲ್ಲವೆಂದು 3 ಕಿ ಮೀ ಕರೆದುಕೊಂದು ಬಂದು ತಡರಾತ್ರಿ ನಡು ರಸ್ತೆಯಲ್ಲಿ ಇಳಿಸಿಹೋದ ಘಟನೆ ಪೆರ್ಲ ಸಮೀಪದ ಅಡ್ಕಸ್ಥಳದಲ್ಲಿ ನಡೆದಿದೆ.

ಪೆರ್ಲ ನಲ್ಕ ನಿವಾಸಿ ಬಾತೀಷ್ ಅ.3ರಂದು ರಾತ್ರಿ ಬೆಂಗಳೂರಿಗೆ ತೆರಳಲು ಕಾಸರಗೋಡು ರಾಜಹಂಸದಲ್ಲಿ ಟಿಕೆಟ್ ಬುಕ್ ಮಾಡಿಕೊಂಡಿದ್ದಾರೆ. ಟಿಕೆಟ್ ಪ್ರತಿ, ಮೊಬೈಲ್ ಟಿಕೇಟ್, ಆಧಾರ್ ಕಾರ್ಡ್ ತೋರಿಸಿದರೂ ದಾಖಲೆ ಸಮರ್ಕವಾಗಿಲ್ಲವೆಂದು ಅಡ್ಕಸ್ಥಳದಲ್ಲಿ ಬಸ್ಸಿನಿಂದ ನಿರ್ವಾಹಕ ಬಲವಂತವಾಗಿ ಇಳಿಸಿದ್ದಾರೆ. ಅಗತ್ಯ ಕೆಲಸಕ್ಕೆ ಹಾಜರಾಗಲಾರದೆ ನಷ್ಟ ಸಂಭವಿಸಿದೆ ಎಂದು ಪುತ್ತೂರು ಡಿಪೋ ಮ್ಯಾನೇಜರ್ಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

By Suddi9

Leave a Reply

Your email address will not be published. Required fields are marked *