ಬಂಟ್ವಾಳ: ಬಂಟ್ವಾಳ ಪುರಸಭೆ ವ್ಯಾಪ್ತಿಯ ಜನರಿಗೆ ಕುಡಿಯುವ ನೀರು ಪೂರೈಕೆಯಾಗುವುದು ಜಕ್ರಿಬೆಟ್ಟಿನಲ್ಲಿರುವ ರೇಚಕ ಸ್ಥಾವರದಿಂದ ಆದರೆ ಕುಡಿಯುವ ನೀರನ್ನು ಪೂರೈಸುವ ಈ ಸ್ಥಳದಲ್ಲಿ ಅಶುಚಿತ್ವವೇ ಕಾಣ ಸಿಗುತ್ತದೆ. ಪಂಪ್ ಹೌಸ್ ನಿಂದ ರೇಚಕ ಸ್ಥಾವರಕ್ಕೆ ಬರುವ ನೀರು, ಚಿಮ್ಮವ ಫೌಂಟೇನ್ನಲ್ಲಿ ಹಾದು ಬರಬೇಕು. ಆದರೆ ಅದರ ಎಲ್ಲಾ ಸ್ಥರಗಳಲ್ಲೂ ಪಾಚಿ ತುಂಬಿಕೊಂಡಿದೆ. ತಳಭಾಗದ ಸ್ಥರದಲ್ಲಿ ಅಪಾರ ಪ್ರಾಮಾಣದಲ್ಲಿ ಕೆಸರು ತುಂಬಿಕೊಂಡು ಸ್ವಚ್ಛಗೊಳಿಸದೆ ಹಲವು ದಿನಗಳೆ ಕಳೆದಿದೆ. ಇದೇ ಪಾಚಿ, ಹಾಗೂ ಕೆಸರಿನಿಂದ ಹಾದು ನೀರು ಮುಂದಿನ ಹಂತಕ್ಕೆ ವರ್ಗಾವಣೆಗೊಳ್ಳುತ್ತಿದೆ. ರೇಚಕ ಸ್ಥಾವರದ ಸುತ್ತ ಗಿಡಗಳು, ಹುಲ್ಲುಗಳು ಬೆಳೆದು ನಿಂತಿದೆ. ಕುಡಿಯುವ ನೀರನ್ನು ಪೂರೈಕೆ ಮಾಡುವ ಸ್ಥಳದಲ್ಲಿ ಸ್ವಚ್ಛತೆ ಮರೀಚಿಕೆಯಾಗಿದೆ.

13

1 (2)

3 (2)

4

7

8

10

11

12
ನದಿ ನೀರನ್ನು ನೇರವಾಗಿ ಜನರಿಗೆ ಸರಬರಾಜು ಮಾಡುವುದಕ್ಕೂ ಇಲ್ಲಿಂದ ಪೂರೈಕೆಯಾಗುವ ಶುದ್ದಗೊಳಿಸಲ್ಪಟ್ಟ ನೀರಿಗೂ ಯಾವುದೇ ವ್ಯತ್ಯಸವಿಲ್ಲ ಎನ್ನುವ ಸ್ಥಿತಿಯಲ್ಲಿ ರೇಚಕ ಸ್ಥಾವರದಿಂದ ನೀರು ಸರಬರಾಜಗುತ್ತಿದೆ. ಯಾಕೆಂದರೆ ನೇತ್ರಾವತಿ ನದಿಯಿಂದ ಮೇಲಕ್ಕೆತ್ತಲ್ಪಟ್ಟ ನೀರು ಬಡ್ಡಕಟ್ಟೆ ಪಂಪ್ಹೌಸ್ ಮೂಲಕ ಜಕ್ರಿಬೆಟ್ಟು ರೇಚಕ ಸ್ಥಾವರವನ್ನು ತಲುಪುತ್ತದೆ. ಅಲ್ಲಿ ಫೌಂಟೇನ್ ಮೂಲಕ ಚಿಮ್ಮಿ ಬಂದ ನೀರು ವೃತ್ತಾಕರದ ಟ್ಯಾಂಕ್ನಲ್ಲಿ ವಿವಿಧ ಹಂತದಲ್ಲಿ ಶುದ್ದೀಕರಣಗೊಳ್ಳ ಬೇಕು. ನದಿಯಿಂದ ಬಂದ ಕಲುಷಿತ ನೀರನ್ನು ಟ್ಯಾಂಕ್ಗೆ ಅಳವಡಿಸಿರುವ ಬ್ರಿಡ್ಜ್ನಲ್ಲಿ ಶುದ್ದೀಕರಿಸಿಕೊಳ್ಳ ಬೇಕು.

ಆದರೆ ಈ ಬ್ರಿಡ್ಜ್ ತುಕ್ಕು ಹಿಡಿದಿದ್ದು, ಇದೀಗ ಹಲವು ಸಮಯಗಳಿಂದ ಕಾರ್ಯ ಸ್ಥಗಿತಗೊಳಿಸಿದೆ. ನಿಂತಲ್ಲೆ ಜಾಂ ಆಗಿರುವ ಬ್ರಿಡ್ಜನ್ನು ಪುರಸಭೆ ಇನ್ನೂ ದುರಸ್ತಿಗೊಳಿಸಿಲ್ಲ. ಇದರಿಂದಾಗಿ ಅಲ್ಲಿಗೆ ಹೋಗುವ ನೀರು ಅದೇ ಸ್ಥಿತಿಯಲ್ಲಿ ಮುಂದಿನ ಹಂತಕ್ಕೆ ವರ್ಗಾವಣೆಗೊಳ್ಳುತ್ತದೆ. ಹೀಗೆ ಬಂದ ನೀರಿಗೆ ಬ್ಲೀಚಿಂಗ್ ಪೌಂಡರ್ ಹಾಗೂ ಆಲಂ ಮಿಶ್ರಣಗೊಳಿಸಲಾಗುತ್ತದೆ. ಕೇವಲ ಈ ಮೂಲಕ ಸಂಪೂರ್ಣವಾಗಿ ಶುದ್ದೀಕರೀಸದೆ ಕುಡಿಯುವ ನೀರು ಇಲ್ಲಿಂದ ಪೂರೈಕೆಯಾಗುತ್ತಿದೆ. ಜವಬ್ದಾರಿಯುತ ಸಿಬ್ಬಂದಿಗಳ ಕೊರತೆಯೂ ಇದಕ್ಕೆ ಕಾರಣ ಎನ್ನುವ ಆರೋಪ ಪುರಸಭೆಯ ಅಧಿಕಾರಿಗಳಿಂದ ಕೇಳಿ ಬಂದಿದೆ. ಕೆಲ ದಿನಗಳಿಂದ ಪುರಸಭೆಯೂ ಬ್ಲೀಚಿಂಗ್ ಹುಡಿಯನ್ನು ನೀಡಿಲ್ಲ ಎನ್ನುವುದು ಈ ಸಂದರ್ಭ ಬೆಳಕಿಗೆ ಬಂದಿದೆ.
ಕಳೆದ ಕೆಲ ದಿನಗಳಿಂದ ಧಾರಾಕಾರ ಮಳೆ ಸುರಿಯುತ್ತಿದ್ದರೂ ಪುರಸಭೆ ವ್ಯಾಪ್ತಿಯ ಬಹು ಭಾಗಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಕಂಡು ಬಂದಿದೆ, ವಾರ್ಡ್  ಸಂಖ್ಯೆ 4ರ ಕಮಲ್ಕಟ್ಟೆ ಎಂಬಲ್ಲಿ ಕಳೆದ 10 ದಿನಗಳಿಂದ ನೀರು ಪೂರೈಕೆಯಾಗಿಲ್ಲ. ಸೋಮವಾರ ಸಂಜೆಯಿಂದ ಬಂಟ್ವಾಳ ಪೇಟೆ ಪ್ರದೇಶದಲ್ಲಿ ವಿದ್ಯುತ್ ಸಮಸ್ಯೆಯಿಂದಾಗಿ ನೀರಿನ ಪೂರೈಕೆಯಲ್ಲೂ ವ್ಯತಯ್ಯ ಉಂಟಾಗಿದೆ. ಮಂಗಳವಾರ ಸಂಜೆಯವರೆಗೂ ನೀರೇ ಪೂರೈಕೆಯಾಗಲಿಲ್ಲ. ಬೆಳಿಗ್ಗೆ ಕಚೇರಿ, ಕೆಲಸಗಳಿಗೆ ಹೋಗಬೇಕಾದ ಗೃಹಣಿಯರು ಪುರಸಭೆಗೆ ಹಿಡಿ ಶಾಪ ಹಾಕಿದರು.

ಚಿತ್ರ ಕಿಶೋರ್ ಪೆರಾಜೆ.

 

By suddi9

Leave a Reply

Your email address will not be published. Required fields are marked *