ಬಂಟ್ವಾಳ : ಭೂಮಸೂದೆ, ಬಗರ್ಹುಕುಂ, ನಿವೇಶನ ಹಂಚಿಕೆಯ ವಿವಿಧ ಸರ್ಕಾರಿ ಯೋಜನೆಗಳಲ್ಲೂ ದ.ಕ.ಜಿಲ್ಲೆಯ ಜನತೆ ಅತ್ಯಂತ ಹೆಚ್ಚಿನ ಭೂ ಒಡೆತನ ಪಡೆದುಕೊಂಡಿದ್ದು, ಈಗಿನ 94ಸಿಯಡಿ ಅತ್ಯಂತ ಹೆಚ್ಚು ಅರ್ಜಿ ಸಲ್ಲಿಸಿರುವ ಜಿಲ್ಲೆ ದಕ್ಷಿಣ ಕನ್ನಡ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದರು.

1 (1)

2


ದ.ಕ.ಜಿಲ್ಲಾ ಪಂಚಾಯತ್, ಬಂಟ್ವಾಳ ತಾಲೂಕು ಪಂಚಾಯತ್ ಹಾಗೂ ಬಂಟ್ವಾಳ ವಿಧಾನ ಸಭಾ ಕ್ಷೇತ್ರಕ್ಕೊಳಪಟ್ಟ ಗ್ರಾ.ಪಂ.ಗಳ ಸಹಕಾರದೊಂದಿಗೆ ಸೋಮವಾರ ಬಿ.ಸಿ.ರೋಡಿನ ರಂಗೋಲಿ ಸಭಾಂಗಣದಲ್ಲಿ ನಡೆದ ಬಂಟ್ವಾಳ ವಿಧಾನಸಭಾ ಕ್ಷೇತ್ರಕ್ಕೊಳಪಟ್ಟ ಗ್ರಾಮೀಣ ವಸತಿ ಯೋಜನೆಯ ಸಾಲ ಮನ್ನಾ ತಿಳುವಳಿಕೆ ಪತ್ರ ವಿತರಣೆ ಹಾಗೂ ಫಲಾನುಭವಿಗಳ ಸಮಾವೇಶ ವನ್ನು ಉದ್ಘಾಟಿಸಿ ಮಾತನಾಡಿದರು.
ಸಿದ್ದರಾಮಯ್ಯ ಸರ್ಕಾರ ಅಸ್ತಿತ್ವಕ್ಕೆ ಬಂದ ಬೆನ್ನಲ್ಲೇ ರಾಜ್ಯದಲ್ಲಿ ಕ್ರಾಂತಿಕಾರಿ ಅಭಿವೃದ್ದಿ ಕಾರ್ಯಗಳು ನಡೆದಿದ್ದು, ಜನಮನ ತಟ್ಟುವ ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತಂದಿದ್ದು, ಬಂಟ್ವಾಳ ಕ್ಷೇತ್ರ ವ್ಯಾಪ್ತಿಯ 33 ಗ್ರಾಮಪಂಚಾಯತ್ ಗಳ 1496 ಮಂದಿ ಫಲಾನುಭವಿಗಳ ಗ್ರಾಮೀಣ ವಸತಿ ಯೋಜನೆಯ ಸಾಲಮನ್ನಾ ಮಾಡಲಾಗಿದೆ ಎಂದರು.
ಹಸಿವು ಮುಕ್ತ ರಾಜ್ಯ ನಿರ್ಮಾಣದ ಉದ್ದೇಶದಿಂದ ಅನ್ನಭಾಗ್ಯ ಯೋಜನೆ ಜಾರಿಯ ಜೊತೆಗೆ ವಿವಿಧ ನಿಗಮಗಳಲ್ಲಿನ ಸಾಲ ಮನ್ನಾ ಮಾಡಿದ ಕೀರ್ತಿ  ಸಿದ್ದರಾಮಯ್ಯ ಸರ್ಕಾರದ್ದು ಎಂದ ಅವರು, ಬ್ಯಾಂಕ್ ಬಂಡವಾಳ ಶಾಹಿಗಳ ಪರವಾಗಿದ್ದ ಸಂದರ್ಭ ಅದನ್ನು ರಾಷ್ಟ್ರೀಕರಣಗೊಳಿಸಿದ ಕೀರ್ತಿ ಇಂದಿರಾ ಗಾಂಧಿಯದ್ದು.ಹೀಗಾಗಿ ಬ್ಯಾಂಕ್ ಜನರ ಬ್ಯಾಂಕ್ ಆಯಿತು. ಅದೇ ಬಗೆಯ ಕ್ರಾಂತಿ ಈಗಿನ ಸರ್ಕಾ ರದಿಂದ ನಡೆಯುತ್ತಿದೆ ಎಂದರು. ಬಂಟ್ವಾಳ ತಾಲೂಕಿನಲ್ಲಿ 94 ಸಿ ಯಡಿ ಅತೀ ಹೆಚ್ಚು ಅರ್ಜಿ ಸಲ್ಲಿಕೆಯಾಗಿದ್ದು, ಮುಂದಿನ 2-3 ತಿಂಗಳ ಒಳಗಾಗಿ ಇವುಗಳ ಹಕ್ಕು ಪತ್ರ ವಿತರಣೆಗೆ ಕ್ರಮ ಕೈಗೊಳ್ಳಲಾಗುವುದು ಎಂದರು.
ತಾ.ಪಂ.ಅಧ್ಯಕ್ಷ ಯಶವಂತ ದೇರಾಜೆ ಮಾತನಾಡಿ, ಫಲಾನುಭವಿಗಳು ಖುಷಿಯಲ್ಲಿದ್ದರೆ, ಜನಪ್ರತಿನಿಧಿಗಳು ಖುಷಿಯಲ್ಲಿರುತ್ತಾರೆ, ವಸತಿ ಯೋಜನೆಯ ಸಾಲವನ್ನು ಸರ್ಕಾರ ಮನ್ನಾ ಮಾಡಿರುವುದು ಬಡವರಿಗೆ ಸರ್ಕಾರ ಕೊಟ್ಟ ದೊಡ್ಡ ಕೊಡುಗೆ ಎಂದರು.
ಜಿಲ್ಲಾ ಪಂಚಾಯತ್ ಸದಸ್ಯರಾದ ಎಂ.ಎಸ್.ಮಹಮ್ಮದ್ ಮಾತನಾಡಿ, ಸರ್ಕಾರ ವಿವಿಧ ಸಾಲಮನ್ನಾ ಯೋಜನೆಗಳ ಮೂಲಕ ಗ್ರಾಮೀಣ ಪ್ರದೇಶದ ಜನರನ್ನು ಋಣಮುಕ್ತರನ್ನಾಗಿಸುವ ಪುಣ್ಯದ ಕೆಲಸ ಮಾಡುತ್ತಿದೆ ಎಂದರು.
ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಆಶಾ ತಿಮ್ಮಪ್ಪ ಗೌಡ, ಸದಸ್ಯರಾದ ಚಂದ್ರಪ್ರಕಾಶ ಶೆಟ್ಟಿ, ಬಂಟ್ವಾಳ ಪುರಸಭಾ ಅಧ್ಯಕ್ಷೆ ವಸಂತಿ ಚಂದಪ್ಪ, ಬಂಟ್ವಾಳ ನಗರ ಯೋಜನಾಪ್ರಾಧಿಕಾರದ ಅಧ್ಯಕ್ಷ ಪಿಯುಸ್ ಎಲ್ ರೋಡ್ರಿಗಸ್, ತಾ.ಪಂ. ಉಪಾಧ್ಯಕ್ಷೆ ವಿಲಾಸಿನಿ, ಸದಸ್ಯರಾದ ಸಂಪತ್ ಕುಮಾರ್ ಶೆಟ್ಟಿ, ಮಾಧವ ಮಾವೆ, ಕಮಲಾಕ್ಷಿ, ಪದ್ಮಶೇಖರ್ ಜೈನ್, ಮಹಮ್ಮದ್ ಶರೀಫ್, ಎಫ್ರೆಮ್ ಸಿಕ್ವೇರಾ, ಕಮಲ, ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷ ಮಾಯಿಲಪ್ಪ ಸಾಲ್ಯಾನ್ ಅಬ್ಬಾಸ್ ಆಲಿ, ಐಡಾ ಸುರೇಶ್, ಅಧಿಕಾರಿಗಳಾದ ಗಿರೀಶ್, ಮಂಜುಳಾ ಮೊದಲಾದವರು ಉಪಸ್ಥಿತರಿದ್ದರು.
ಸಮಾರಂಭದಲ್ಲಿ ತಾ.ಪಂ. ವ್ಯವಸ್ಥಾಪಕರಾಗಿ ನಿವೃತ್ತರಾದ ನಾಗೇಶ್ ಅವರನ್ನು ಸನ್ಮಾನಿಸಲಾಯಿತು. ತಾ.ಪಂ.ಕಾರ್ಯನಿರ್ವಹಣಾಧಿಕಾರಿ ಸಿಫ್ರಿಯನ್ ಮಿರಾಂಡ ಸ್ವಾಗತಿಸಿದರು. ಮಂಜುವಿಟ್ಲ ಕಾರ್ಯಕ್ರಮ ನಿರ್ವಹಿಸಿದರು. ಶಿವಾನಂದ ವಂದಿಸಿದರು.

ಕಲ್ಪವೃಕ್ಷಕ್ಕೆ ನೀರೆರೆದು ಉದ್ಘಾಟನೆ..
ವೇದಿಕೆಯ ಮೇಲೆ ಫಾಟ್ ನಲ್ಲಿ ನೆಡಲಾಗಿದ್ದ ಕಲ್ಪವೃಕ್ಷಕ್ಕೆ ಸಚಿವ ಬಿ.ರಮಾನಾಥ ರೈ ಯವರು ಬಿಂದಿಗೆಯಿಂದ ನೀರೆರೆಯುವ ಮೂಲಕ ಫಲಾನುಭವಿಗಳ ಸಮಾವೇಶವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಕನರ್ಾಟಕ ಸಕರ್ಾರ ಕೂಡ ಕಲ್ಪವೃಕ್ಷದಂತೆ ಎಲ್ಲರ ಅಪೇಕ್ಷೆಯ ಕಾರ್ಯಕ್ರಗಳನ್ನು ನೀಡುತ್ತಿದೆ ಎಂದರು.

ಚಿತ್ರ-ಕಿಶೋರ್ ಪೆರಾಜೆ

By suddi9

Leave a Reply

Your email address will not be published. Required fields are marked *