ಸುದ್ದಿ 9ಕೈಕಂಬ; ಮಂಗಳೂರಿನ ಕಂದಾವರ ಗ್ರಾಮದ ಬೈಲು ಮೂಡುಕರೆ ದಿ. ಮುಂಡಪ್ಪ ಶೆಟ್ಟಿ ಅವರ ದರ್ಮ ಪತ್ನಿ ಬೈಲು ಹೊಸಮನೆ ಜಲಜ ಶೆಟ್ಟಿ ಅವರ ಹುಟ್ಟುಹಬ್ಬವನ್ನು ಮನೆಮಂದಿ ವಿಜೃಂಭಣೆಯಿಂದ ಆಚರಿಸಿ ಹಿರಿಯರ ಆಶೀರ್ವಾದ ಪಡೆದರು. ಈ ಅಪರೂಪದ ಘಟನೆ ನಡೆದಿದ್ದು ಇಲ್ಲಿನ ಬೈಲು ಹೊಸಮನೆಯಲ್ಲಿ. ಈ ಮನೆಯ ಹಿರಿಯಜ್ಜಿ ಜಲಜ ಎಂ. ಶೆಟ್ಟಿಯವರಿಗೆ ಇಂದು(23 ಎಪ್ರಿಲ್) ಹುಟ್ಟುಹಬ್ಬದ ಸಂಭ್ರಮ. ಈ ವಿಶೇಷ ದಿನವನ್ನು ಮತ್ತಷ್ಟು ವಿಶೇಷವನ್ನಾಗಿಸಲು ಯೋಚಿಸಿದ ಮನೆ ಸದಸ್ಯರು ಶತಾಯುಷಿ ಅಜ್ಜಿಯ ಜನ್ಮ ದಿನವನ್ನು ಮನೆಯಲ್ಲೇ ಸರ್ವ ಸದಸ್ಯರ ಜೊತೆಗೆ ವಿಜೃಂಭಣೆಯಿಂದ ಆಚರಿಸಿ ಸಂಭ್ರಮಪಟ್ಟರು.
ಚಿತ್ರ ಕ್ಲಾಸಿಕ್ ಡಿಜಿಟಲ್ ಸ್ಟುಡಿಯೋ ಕೈಕಂಬ




