
ಸುದ್ದಿ9 ಕೈಕಂಬ: ಫಲ್ಗುಣಿ ನದಿಯಲ್ಲಿ ಸೆರೆ ಸಿಕ್ಕ ಭಾರೀ ಗಾತ್ರದ ಮುಗುಡನ್ನು ಬೆಸ್ತರು ಹಿಡಿದು ಕೈಕಂಬದ ಮೀನು ಮಾರುಕಟ್ಟೆಗೆ ತಂದಿದ್ದು ಎಲ್ಲರ ಕೇಂದ್ರ ಬಿಂದುವಾಗಿತ್ತು. ಸಮಾರು ಐದು ಕೆ.ಜಿ. ತೂಗುವ ಆರು ಮೀನುಗಳು ಜೀವ ಕಳೆಯದೆ ನೀರಿಗಾಗಿ ಒದ್ದಾಟ ನಡೆಸುತ್ತಿತ್ತು. ಕೊನೆಗೆ ವ್ಯಕ್ತಿಯೋರ್ವರು ಖರೀದಿಸಿದ್ದಾರೆ. ಇಂಥಾ ಮೀನುಗಳು ಒಂದು ಕಾಲದಲ್ಲಿ ಮಳಲಿ ಸಮೀಪದ ಪಟ್ಲ ಕೆಸರಿನಲ್ಲಿ ಸಿಗುತ್ತಿದ್ದು ಇದೀಗ ಅವನತಿಯ ಹಾದಿಯಲ್ಲಿದೆ. ಕ್ಯಾಟ್ ಫಿಷ್ ಎಂದು ಕರೆಯಲಾಗುವ ಈ ಮೀನನ್ನು ಹಿಡಿಯುವುದನ್ನು ಸರಕಾರ ನಿಷೇಧಿಸಿದ್ದು, ಒಂದು ವೇಳೆ ಆ ವ್ಯಕ್ತಿ ಸೆರೆ ಸಿಕ್ಕರೆ ಜಾಮೀನು ರಹಿತ ಬಂಧನ ಸಾಧ್ಯತೆ ಇದೆ.

