ಕುಂದಾಪುರ: ತಾಲೂಕಿನ ಗೋಳಿಯಂಗಡಿ ಸಮೀಪದ ಹಿರಿಯಾನ ಕಾರಿಕೋಡ್ಲು ಎಂಬಲ್ಲಿ ಯುವತಿಯೋರ್ವಳನ್ನು ಅತ್ಯಾಚಾರಗೈದು ಕೊಲೆ ಮಾಡಿದ ಹೇಯ ಕೃತ್ಯ ವರದಿಯಾಗಿದೆ.ಅತ್ಯಾಚಾರಕ್ಕೆ ಒಳಗಾಗಿ ಕೊಲೆಯಾದ ಹುಡುಗಿಯನ್ನು ಸುಚಿತ್ರಾ (20) ಎಂದು ಗುರುತಿಸಲಾಗಿದೆ.
ಗೋಳಿಯಂಗಡಿಯ ಹಾರ್ಡ್ವೇರ್ ಅಂಗಡಿಯೊಂದರಲ್ಲಿ ಒಂದರಲ್ಲಿ ಕೆಲಸಕ್ಕಿದ್ದ ಸುಚಿತ್ರಾ ಪ್ರತಿ ದಿನ ಸಂಜೆ 5.30ಕ್ಕೆ ಕೆಲಸ ಬಿಟ್ಟು ಮನೆಗೆ ಹೋಗುತ್ತಿದ್ದಳು. ಇಂದು ಸಂಜೆ ತುಂಬಾ ಹೊತ್ತಿನ ವರೆಗೆ ಸುಚಿತ್ರಾ ಬಾರದೆ ಇದ್ದುದನ್ನು ಕಂಡು ಆಕೆಯ ಮನೆಯವರು ಅಂಗಡಿಯಲ್ಲಿ ವಿಚಾರಿಸಿದಾಗ ಆಕೆ ಮನೆಗೆ ಹೋಗುತ್ತೇನೆಂದು ತೆರಳಿದ್ದು ಗೊತ್ತಾಗಿದೆ. ಬಳಿಕ ಗಾಬರಿಗೊಂಡ ಮನೆಯವರು ಆಕೆಗಾಗಿ ಹುಡುಕಾಡಿದಾಗ ಆಕೆಯ ಮನೆಗೆ 50 ಮೀಟರ್ ದೂರದಲ್ಲಿ ಸುಚಿತ್ರಾ ಶವ ಪತ್ತೆಯಾಗಿದೆ. ಶವ ನಗ್ನವಾಗಿದ್ದು ಕತ್ತು ಸೀಳಿ ಕೊಲೆ ಮಾಡಲಾಗಿದೆ ಎಂದು ತಿಳಿದುಬಂದಿದೆ. ಅನುಮಾನದ ಮೇಲೆ ಮಣಿಕಂಠ ಎಂಬ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಮಣಿಕಂಠ ಈ ಹಿಂದೆಯೂ ಹುಡುಗಿಯರ ಚಾಳಿ ಇದ್ದವನು ಎನ್ನಲಾಗಿದೆ. ಈತ ಆಗಾಗ ಸುಚಿತ್ರಾಳನ್ನು ಫಾಲೋ ಮಾಡುತ್ತಿದ್ದ ಎಂದೂ ಸಹ ಅನುಮಾನಗಳಿದ್ದು ಈತನನ್ನು ಅನುಮಾನದ ಮೇಲಷ್ಟೇ ವಶಕ್ಕೆ ಪಡೆಯಲಾಗಿದ್ದು ಹೆಚ್ಚಿನ ವಿವರಗಳು ತನಿಖೆಯಲ್ಲಿ ಪತ್ತೆಯಾಗಬೇಕಿದೆ.
ಅವಳಿ ಮಕ್ಕಳಲ್ಲಿ ಒಬ್ಬಳು ಸುಚಿತ್ರಾ
ಕಾರಿಕೋಡ್ಲುವಿನ ಗೋವಿಂದ ನಾಯ್ಕ ಎಂಬವರ ಐವರು ಮಕ್ಕಳಲ್ಲಿ ಓರ್ವರಾಗಿರುವ ಸುಚಿತ್ರಾ ಅವಳಿಯಾಗಿ ಜನಿಸಿದ್ದರು. ಈಕೆಯ ಜೊತೆಗೆ ಹುಟ್ಟಿದವಳಿಗೆ ಸುಮಿತ್ರಾ ಎಂದು ಹೆಸರಿಡಲಾಗಿದೆ. ಇದೀಗ ಈ ಅವಳಿಗಳಲ್ಲಿ ಒಬ್ಬಳನ್ನು ಕಳೆದುಕೊಂಡ ದುಖದಲ್ಲಿ ಕುಟುಂಬವಿದೆ. ಉಡುಪಿ ಜಿಲ್ಲೆಯಲ್ಲಿ ಕಳೆದ ಆರು ತಿಂಗಳಲ್ಲಿ ನಡೆದ ಎರಡನೇ ರೇಪ್ ಎಂಡ್ ಮರ್ಡರ್ ಪ್ರಕರಣ ಇದಾಗಿದೆ, ಬೈಂದೂರಿನ ಒತ್ತಿನೆಣೆ ಪ್ರದೇಶದಲ್ಲಿ ಅಕ್ಷತಾ ದೇವಾಡಿಗ ಎಂಬ ವಿದ್ಯಾರ್ಥಿನಿಯನ್ನು ಆಕೆ ಕಾಲೇಜಿನಿಂದ ಮನೆಗೆ ತೆರಳುವಾಗ ಅತ್ಯಾಚಾರಗೈದು ಕೊಲೆ ಮಾಡಲಾಗಿತ್ತು. ಈ ಪ್ರಕರಣವನ್ನು ಪೊಲೀಸರು ಶೀಘ್ರದಲ್ಲಿ ಬೇಧಿಸಿದ್ದರು.
