ಮೂಡುಬಿದರೆ: ಕಾರ್ಕಳದಲ್ಲಿ ನಡೆದ ಮಹಾಮಸ್ತಕಾಭಿಷೇಕದಲ್ಲಿ ಸ್ವಯಂ ಸೇವಕರಾಗಿ ದುಡಿದ ಮೂಡಬಿದರೆಯ ಯುವಕರಿಗೆ ರಮಾರಾಣಿ ಸಭಾಭವನದಲ್ಲಿ ಅಭಿನಂದನೆ ಸಲ್ಲಿಸಲಾಯಿತು.
ಸ್ವಯಂಸೇವಾ ಸಮಿತಿ ಸಂಚಾಲಕ ಹೇಮಚಂದ್ರ ಜೈನ್ ಮುಖ್ಯ ಅತಿಥಿಯಾಗಿದ್ದರು. 60 ಮಂದಿ ಸ್ವಯಂ ಸೇವಕರನ್ನು ಅಭಿನಂದಿಸಲಾಯಿತು. ದಿನೇಶ ಆನಡ್ಕ, ಸಂಜಯತ ಕುಮಾರ್ ಶೆಟ್ಟಿ, ನಿರಂಜನ್ ಕುಮಾರ್ ಶೆಟ್ಟಿ, ಬಾಹುಬಲಿ ಪ್ರಸಾದ ಉಪಸ್ಥಿತರಿದ್ದರು.
