ಬಂಟ್ವಾಳ: ಇಲ್ಲಿನ ಬಂಟ್ವಾಳ ವಿಧಾನಸಭೆ ವ್ಯಾಪ್ತಿಗೊಳಪಟ್ಟಂತೆ 5 ಗ್ರಾಮೀಣ ರಸ್ತೆಗಳನ್ನುಮೇಲ್ದರ್ಜೆಗೇರಿಸಲು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮನಾಥ ರೈ ಅವರ ಪ್ರಸ್ತಾಪದಂತೆ ಲೊಕೋಪಯೋಗಿ ಇಲಾಖೆ 4 ಗ್ರಾಮೀಣ ರಸ್ತೆಗಳನ್ನು ಒಂದು ಬಾರಿ ಅಭಿವೃದ್ದಿ ಪಡಿಸಲು ಅನುಮೋದನೆ ನೀಡಿದೆ ಅದರಂತೆ ಸಿದ್ದಕಟ್ಟೆ, ಹೊಕ್ಕಾಡಿಗೋಳಿ, ಮಾವಿನಕಟ್ಟೆ, ಅಜ್ಜಿಬೆಟ್ಟು ಸಂಪರ್ಕದ 10.40 ಕಿ.ಮೀ ಉದ್ದದ ರಸ್ತೆಯ ಅಗಲೀಕರಣ ಹಾಗೂ ಡಾಮರೀಕರಣಕ್ಕೆ ಮಂಗಳವಾರ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮನಾಥ ರೈ ಸಿದ್ದಕಟ್ಟೆಯಲ್ಲಿ ಚಾಲನೆ ನೀಡಿದರು.
BTW_SEP29_7

2

3 (1)ಈ ಸಂದರ್ಭ ಮಾತನಾಡಿದ ಅವರು ಸಿದ್ದಕಟ್ಟೆ ಪೇಟೆಯಲ್ಲಿ ಬಸ್ ಬೇ ನಿರ್ಮಿಸಲು 1 ಕೋಟಿ ರುಪಾಯು ಅನುದಾನ ಮಂಜೂರಾಗಿದೆ. ಸಿದ್ದಕಟ್ಟೆ ಕರ್ಪೆ ರಸ್ತೆ ಅಭಿವೃದ್ದಿಗೆ 1.50 ಕೋಟಿ ಅನುದಾನ ಮೀಸಲಿಡಲಾಗಿದೆ ಆದರೆ ಅದು ಟೆಂಡರ್ ಮುಕ್ತಾಯದ ವೇಳೆ ಹೆಚ್ಚುವರಿಯೂ ಆಗಬಹುದು ಎಂದು ಹೇಳಿದರು. ರಸ್ತೆ ಹಾನಿಗೀಡಗಿರುವ ಬಗ್ಗೆ ಕೆಲವರು ಜನಪ್ರತಿನಿಧಿಗಳು ಪ್ರತಿಭಟನೆ ಮಾಡಿದ್ದಾರೆ. ರಸ್ತೆಗಳ ಅಭಿವೃದ್ದಿ ಕೇವಲ ಶಾಸಕರ ಜವಬ್ದಾರಿ ಮಾತ್ರವಲ್ಲ ಸಂಬಂಧಪಟ್ಟ ಜನಪ್ರತಿನಿಧಿಗಳ ಜವಬ್ದಾರಿಯೂ ಆಗಿದೆ ಎಂದು ಸಚಿವರು ಹೇಳಿದರು. ಇದಕ್ಕಿಂತ ಮುಂಚಿತವಾಗಿ ಕೂರಿಯಾಳ -ಪಾದೆದಗುರಿ ರಸ್ತೆ ಅಭಿವೃದ್ದಿಗೆ ಕಾರ್ಯಕ್ಕೆ ಸಚಿವರು ಚಾಲನೆ ನೀಡಿದರು.
ಇದೇ ಯೋಜನೆಯಡಿ ಸಿದ್ದಕಟ್ಟೆ, ಕರ್ಪೆ, ಅಣ್ಣಳಿಕೆಯ 10.56 ಕಿ,.ಮೀ, ಕಟ್ಟಡ ಪಡ್ಪು, ನರ್ಸಿಕುಮೇರು, ಪುಂಜಾಲಕಟ್ಟೆ ಸಂಪರ್ಕದ 7.50 ಕಿ.ಮೀ.ಉದ್ದದ ರಸ್ತೆ, ಕನ್ಯಾನ, ಮಿತ್ತನಡ್ಕ, ಬೇಡಗುಡ್ಡೆ, ಆನೆಕಲ್ಲು ಸಂಪರ್ಕದ 10.60 ಕಿ.ಮೀ ಉದ್ದದ ರಸ್ತೆಯೂ ಅಭಿವೃದ್ದಿಗೊಳ್ಳಲಿದೆ ಎಂದು ತಿಳಿಸಿದರು.
ಈ ಸಂದರ್ಭ ಬಂಟ್ವಾಳ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಪಿಯೂಸ್ ರೊಡ್ರಿಗಸ್, ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷ ಮಾಯಿಲಪ್ಪ ಸಾಲ್ಯಾನ್, ತಾ.ಪಂ. ಸದಸ್ಯ ಎಫ್ರಂ ಸಿಕ್ವೇರಾ, ಸಂಗಬೆಟ್ಟು ಗ್ರಾ.ಪಂ.ಮಾಜಿ ಅಧ್ಯಕ್ಷ ಪ್ರಭಾಕರ ಪ್ರಭು, ದೇವಪ್ಪ ಪೂಜಾರಿ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಬಿ.ಎಚ್.ಖಾದರ್, ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದ ಸಹಾಯಕ ಕಾರ್ಯಪಾಲ ಎಂಜಿನಿಯರ್ ನರೇಂದ್ರಬಾಬು, ಕಿರಿಯ ಇಂಜಿನಿಯರ್ ಜಗದೀಶ್‍ಚಂದ್ರ ಸಂಗಬೆಟ್ಟು ಹಾಗೂ ಅಮ್ಟಾಡಿ ಗ್ರಾಮಪಂಚಾಯಿತಿ ಪ್ರತಿನಿಧಿಗಳು ಮತ್ತಿತರರು ಹಾಜರಿದ್ದರು.

By suddi9

Leave a Reply

Your email address will not be published. Required fields are marked *