ಬಂಟ್ವಾಳ : ಕರೆಂಕಿ ಶ್ರೀ ದುರ್ಗಾ ಫ್ರೆಂಡ್ಸ್ ಕ್ಲಬ್ ವತಿಯಿಂದ ನಮ್ಮ ಆದ್ಯತೆ, ನಮ್ಮ ಸ್ವಚ್ಛತೆ ಕಾರ್ಯಕ್ರಮದ ಅಡಿಯಲ್ಲಿ ಸರಕಾರಿ ಶಾಲೆ ಉಳಿಸಿ ಎಂಬ ದೃಢ ಸಂಕಲ್ಪದ ತಿಂಗಳ ಕಾರ್ಯಕ್ರಮ ಕುಕ್ಕಾಜೆ – ಮಂಚಿ ದ.ಕ.ಹಿ.ಪ್ರಾ.ಶಾಲೆಯಲ್ಲಿ ಭಾನುವಾರ ನಡೆಯಿತು.
40ಕ್ಕಿಂತಲೂ ಅಧಿಕ ಸದಸ್ಯರು ಶಾಲೆಯಲ್ಲಿ ವಿವಿಧ ದುರಸ್ತಿ ಕಾರ್ಯಗಳನ್ನು ನಡೆಸಿದರು. ಹಾಗೂ ಶಾಲಾ ಮೈದಾನದ ಆವರಣಲ್ಲಿ ಬೆಳೆದು ನಿಂತಿದ್ದ ಹುಲ್ಲುಗಳನ್ನು ಕಟಾವುಗೊಳಿಸಿ ಪರಿಸರ ಸ್ವಚ್ಛಗೊಳಿಸಿದರು. ಶಾಲಾ ಅಂಗಳದಲ್ಲಿ ಆಯುರ್ ಭುವಿ ಎನ್ನುವ ಆಯುರ್ವೇದ ಗಿಡಗಳ ಕೈತೋಟ ನಿರ್ಮಿಸಿ, ಪ್ರತಿ ಗಿಡಗಳಿಗೂ ಹೆಸರಿನ ಫಲಕ ಅಳವಡಿಸಿ ಅದರ ಸುತ್ತ ತಂತಿ ಬೇಲಿ ಹಾಕಿ ಶಾಲೆಗೆ ಕೊಡುಗೆ ನೀಡಿದರು.
ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಮಂಚಿ ಗ್ರಾ.ಪಂ.ಅಧ್ಯಕ್ಷೆ ಪ್ರಮೀಳ ಅಧ್ಯಕ್ಷತೆ ವಹಿಸಿದ್ದರು. ಜಿ.ಪಂ.ಸದಸ್ಯ ಎಂ.ಎಸ್.ಮಹಮ್ಮದ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಸರ್ವ ಧರ್ಮದ ದೇಗುಲವಾಗಿರುವ ಶಾಲೆಗೆ ನೀಡುವ ಸೇವೆ ಯಾವುದೇ ಧರ್ಮಧ ಶ್ರದ್ದಾಕೇಂದ್ರಗಳಿಗೆ ಸಲ್ಲಿಸುವ ಸೇವೆಗಿಂತ ಮಿಗಿಲಾದುದು. ಶಾಲೆಯ ಸರ್ವಾಂಗೀಣ ದುರಸ್ತಿ ಕಾರ್ಯಗಳನ್ನು ನಡೆಸುವ ಜೊತೆ ಜೊತೆಗೆ ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗಳನ್ನು ಉಳಿಸುವ ಕ್ಲಬ್ನ ಪ್ರಯತ್ನ ನಿಜಕ್ಕೂ ಅಭಿನಂದನಾರ್ಹವಾದುದು ಎಂದರು. ಯಾವುದೇ ಸಂಘ ಸಂಸ್ಥೆ ಯಶಸ್ವಿಯಾಗಿ ಮುನ್ನಡೆಯ ಬೇಕಾದರೆ ಉತ್ತಮ ನಾಯಕನ ಅಗತ್ಯ ಇದೆ. ಸರ್ಕಾರ, ಜನಪ್ರತಿನಿಧಿಗಳು ಮಾಡಬೇಕಾದ ಕಾರ್ಯವನ್ನು ಶ್ರೀ ದುರ್ಗಾ ಫ್ರೆಂಡ್ಸ್ನ ಅಧ್ಯಕ್ಷ ಪ್ರಕಾಶ್ ಅಂಚನ್ ಅವರ ಸಮರ್ಥ ನಾಯಕತ್ವದಲ್ಲಿ ಕ್ಲಬ್ನ ಎಲ್ಲಾ ಸದಸ್ಯರು ಮನಪೂರ್ವಕವಾಗಿ ಮಾಡಿತ್ತಿದ್ದಾರೆ, ಇನ್ನಷ್ಟು ಉತ್ತಮ ಕೆಲಸಗಳು ಕ್ಲಬ್ನಿಂದ ನಡೆಯಲಿ ಎಂದು ಶುಭ ಹಾರೈಸಿದರು.

ಜಿ.ಪಂ.ಮಾಜಿ ಸದಸ್ಯೆ ಸುಲೋಚನಾ ಭಟ್, ತಾ.ಪಂ.ಸದಸ್ಯರಾದ ಲವಿನಾ ಡಿಸೋಜ, ಗ್ರಾ.ಪಂ.ಉಪಾಧ್ಯಕ್ಷ ಮೋಹನದಾಸ್ ಶೆಟ್ಟಿ, ಸದಸ್ಯರಾದ ಅಬ್ದುಲ್ ರಝಾಕ್, ಶಮೀಉಲ್ಲಾ, ಕೇಶವ ರಾವ್, ಇಬ್ರಾಹಿಂ, ಕೃಷ್ಣಪ್ಪ, ಕ್ಷೇತ್ರ ಶಿಕ್ಷಣ ಅಧಿಕಾರಿ ಶೇಷಶಯನ ಕಾರಿಂಜ, ರಾಷ್ಟ್ರಪ್ರಶಸ್ತಿ ಪುರಸ್ಕøತ ಶಿಕ್ಷಕ ರಮೇಶ್ ನಾಯಕ್ ರಾಯಿ, ಶಿವಪ್ರಸಾದ್, ಡಿ.ಕೆ.ಹಂಝ ಮುತ್ತಪ್ಪ ಬಿಜಾರ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಮೊಯ್ಯಿದ್ದೀನ್ ಕೆ. ಉಪಸ್ಥಿತರಿದ್ದರು.
ಕ್ಲಬ್ನ ಸದಸ್ಯರಾದ ರಾಮಚಂದ್ರ ಶೆಟ್ಟಿ ದಂಡೆ, ಶೇಖರ ಅಂಚನ್, ಯಶೋಧರ ನಾಯ್ಕ್ ರಾಮನಗರ, ಪ್ರಧಾನ ಕಾರ್ಯದರ್ಶಿ ನವೀನ್ ಸೇಸಗುರಿ, ಕೋಶಾಧಿಕಾರಿ ವಿನೋದ್ ಕುಮಾರ್, ಸದಸ್ಯರಾದ ಮನೋಜ್ ಕರೆಂಕಿ, ಗಂಗಾಧರ ಕುಲಾಲ್, ರಮೇಶ್ ಕುಲಾಲ್, ಗಣೇಶ ಗೌಡ, ಸೀತಾರಾಮ ಕರೆಂಕಿ, ವಿಠಲ್ ಡಿ., ಬಾಲಕೃಷ್ಣ ಗೌಡ, ರಾಮಚಂದ್ರ ಪೂಜಾರಿ ಕರೆಂಕಿ, ಪ್ರಸಾದ್ ಪುತ್ರನ್, ತುಕರಾಮ, ಪೂವಪ್ಪ ಮೆಂಡನ್, ಆನಂದ್ ಕೆ. ವೇದಿಕೆಯಲ್ಲಿದ್ದರು.
ಮುಖ್ಯಶಿಕ್ಷಕಿ ರೋಹಿಣಿ ಅವರು ಸ್ವಾಗತಿಸಿದರು. ದುರ್ಗಾಫ್ರೆಂಡ್ಸ್ ಅಧ್ಯಕ್ಷ ಪ್ರಕಾಶ ಅಂಚನ್ ಪ್ರಸ್ತಾವಿಸಿದರು. ಪುರುಷೋತ್ತಮ ಅಂಚನ್ ಕಾರ್ಯಕ್ರಮ ನಿರೂಪಿಸಿದರು.
ಚಿತ್ರ: ಶ್ರೀ ದುರ್ಗಾ ಫ್ರೆಂಡ್ಸ್ನ ವತಿಯಿಂದ ಆಯುರ್ವೇದ ತೋಟವನ್ನು ನಿರ್ಮಸಿ ಶಾಲೆಗೆ ಹಸ್ತಾಂತರಿಸಲಾಯಿತು.
