ಬಂಟ್ವಾಳ: ಬಂಟ್ವಾಳ ಇಲ್ಲಿನ ನ್ಯಾಯಾಲಯದ ವಾರಂಟ್ ಧಿಕ್ಕರಿಸಿ ತಲೆ ಮರೆಸಿಕೊಂಡಿದ್ದ ಹಳೆ ಆರೋಪಿಯನ್ನು ಬಂಟ್ವಾಳ ನಗರ ಠಾಣೆ ಪೊಲೀಸರು ಮಂಗಳವಾರ ಬಂಧಿಸಿ ಮತ್ತೆ ನ್ಯಾಯಾಲಯಕ್ಕೆ ಹಾಜರುಪಡಿಸಿದ ಘಟನೆ ನಡೆದಿದೆ.
ಆರೋಪಿಯನ್ನು ಬಾಳ್ತಿಲ ಗ್ರಾಮದ ನೀರಪಾದೆ ನಿವಾಸಿ ಈಶ್ವರ ಪೂಜಾರಿ ಎಂಬವರ ಪುತ್ರ ವೆಂಕಪ್ಪ ಪೂಜಾರಿ (48) ಎಂದು ಗುಉತಿಸಲಾಗಿದೆ. ಈತನು ಕಳೆದ ಕೆಲವು ತಿಂಗಳ ಹಿಂದೆ ಅಕ್ರಮ ಶರಾಬು ಸಾಗಾಟ ನಡೆಸುತ್ತಿದ್ದ ವೇಳೆ ಪೊಲೀಸರಿಂದ ಬಂಧನಕ್ಕೊಳಗಾಗಿ ಬಳಿಕ ನ್ಯಾಯಾಲಯದಿಂದ ಜಾಮೀನು ಪಡೆದು ಹೊರ ಬಂದು ತಲೆಮರೆಸಿಕೊಂಡಿದ್ದನು. ಇದೀಗ ನ್ಯಾಯಾಲಯ ವಾರಂಟ್‍ನಂತೆ ಪೊಲೀಸ್ ಸಿಬ್ಬಂದಿ ಸದಾಶಿವ ಶೆಟ್ಟಿ ಮತ್ತು ಸುಬ್ರಹ್ಮಣ್ಯ ಅವರು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿಉವುದಾಗಿ ತಿಳಿಸಿದ್ದಾರೆ.

By suddi9

Leave a Reply

Your email address will not be published. Required fields are marked *