ಬಂಟ್ವಾಳ: ಲಯನ್ಸ್ ಕ್ಲಬ್ ಬಂಟ್ವಾಳ ಇದರ ಪ್ರಾಂತೀಯ ಅಧ್ಯಕ್ಷರ ಅಧಿಕೃತ ಭೇಟಿ ಕಾರ್ಯಕ್ರಮದಲ್ಲಿ ಗುರುನಮನ ಕಾರ್ಯಕ್ರಮವನ್ನು ಪ್ರಸಿದ್ಧ ಚಿತ್ರಕಲಾ ಅಧ್ಯಾಪಕರುಗಳಾದ ಮುರಳಿಕೃಷ್ಣ ಹಾಗೂ ಚೆನ್ನಕೇಶವರವರ ಗಾನಕುಂಚದೊಂದಿಗೆ ರಾಜ್ಯ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕ್ರತರಾದ ಯು. ದೇವಪ್ಪ ನಾಯ್ಕ್, ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕ್ರತರಾದ ಸಂತೋಷ್ ಕುಮಾರ್ ಟಿ. ಎನ್. ಮತ್ತು ಶ್ರೀಮತಿ ಶಾರದಾ ಇವರನ್ನು ಪ್ರಾಂತೀಯ ಅಧ್ಯಕ್ಷರಾದ ದಾಮೋದರ ಬಿ. ಎಂ. ಇವರು ಸನ್ಮಾಸಿದರು.
ಕಾರ್ಯಕ್ರಮದಲ್ಲಿ ವಲಯಾಧ್ಯಕ್ಷರುಗಳಾದ ಜಾಕೆ ಮಾಧವ ಗೌಡ ಹಾಗೂ ಮಹಮ್ಮದ್ ಇಕ್ಬಾಲ್, ಲಯನ್ ಅಧ್ಯಕ್ಷ ಜಯಂತ ಶೆಟ್ಟಿ ಲಯನೆಸ್ ಅಧ್ಯಕ್ಷೆ ಗೀತಾ ಜೆ. ಶೆಟ್ಟಿ, ಲಯನ್ ಕಾರ್ಯದರ್ಶಿಗಳಾದ ಶ್ರೀನಿವಾಸ್ ಪೂಜಾರಿ ಮೆಲ್ಕಾರ್, ಚಿತ್ರಾ ಜೆ. ಯಡಪಡಿತ್ತಾಯ ಖಜಾಂಚಿಗಳಾದ ಫ್ರಾನ್ಸಿಸ್ ಸಲ್ದಾನ್ಹ, ಜ್ಯೋತಿ ಮಧ್ವರಾಜ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

