ಬಂಟ್ವಾಳ ತಾಲ್ಲೂಕಿನ ಕಡೇಶ್ವಾಲ್ಯ ವ್ಯವಸಾಯ ಸೇವಾ ಸಹಕಾರ ಸಂಘದಲ್ಲಿ ಮಂಗಳವಾರ ನಡೆದ ವಾರ್ಷಿಕ ಮಹಾಸಭೆಯಲ್ಲಿ ನಿವೃತ್ತ ಲೆಕ್ಕಾಧಿಕಾರಿ, ಪಾಣೆಮಂಗಳೂರು ಸುಮಂಗಲಾ ಕ್ರೆಡಿಟ್ ಸೊಸೈಟಿ ಅಧ್ಯಕ್ಷ ನಾರಾಯಣ ಸಪಲ್ಯ ಮುಂಗೂರು ಇವರನ್ನು ಸನ್ಮಾನಿಸಲಾಯಿತು.

ಡಿಸಿಸಿ ಬ್ಯಾಂಕಿನ ವಲಯ ಮೇಲ್ವಿಚಾರಕ ಯೋಗೀಶ್, ಸಂಘದ ಅಧ್ಯಕ್ಷ ವಿದ್ಯಾಧರ ರೈ, ಉಪಾಧ್ಯಕ್ಷ ಆನಂದ, ನಿರ್ದೇಶಕರಾದ ಗಣೇಶ ಆರ್.ಶೆಟ್ಟಿ, ಧರ್ಣಪ್ಪ ಪೂಜಾರಿ, ಶಿವಾನಂದ, ಶೀನ ನಾಯ್ಕ, ಗೋಪಾಲಕೃಷ್ಣ, ಸತ್ಯವತಿ, ಕಾರ್ಯನಿರ್ವಹಣಾಧಿಕಾರಿ ಜಯರಾಮ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದಾರೆ.
