ಬಂಟ್ವಾಳ : ಸಮಾಜದಲ್ಲಿ ನೊಂದವರಿಗೆ ಸಹಾಯಹಸ್ತ ನೀಡುವುದು ಕೂಡ ಗಣಪತಿ ದೇವರಿಗೆ ಮಾಡುವ ಒಂದು ರೀತಿಯ ಪೂಜೆ ಎಂದು ಶ್ರೀಧಾಮ ಮಾಣಿಲದ ಪರಮಪೂಜ್ಯ ಮೋಹನ್ ದಾಸ ಪರಮಹಂಸ ಸ್ವಾಮೀಜಿ ನುಡಿದರು. ಅವರು ಫರಂಗಿಪೇಟೆ ಹಿಂದೂ ಧಾರ್ಮಿಕ ಸೇವಾಸಮಿತಿ ಆಶ್ರಯದಲ್ಲಿ 33ನೇ ವರ್ಷದ ಗಣೇಶೋತ್ಸವದ ಸಮಾರೋಪ ಸಮಾರಂಭದ ಧಾರ್ಮಿಕ ಸಭೆಯ ಕಾರ್ಯಕ್ರಮದಲ್ಲಿ ಆಶೀರ್ವಚನವಿತ್ತರು. ಸ್ವಾತಂತ್ರ್ಯ ಹೋರಾಟದಲ್ಲಿ ಗಣೇಶ ಪೂಜೆಯು ಸಾರ್ವಜನಿಕವಾಗಿ ಒಂದು ರೀತಿಯ ಸಂಘಟನೆಯಾಗಿ ಸ್ವಾತಂತ್ರ್ಯಪೂರ್ವದಲ್ಲಿ ನಡೆದಿದೆ.KAR_9431

KAR_9480

KAR_9493

 

ಇಡೀ ಹಿಂದೂ ಸಮಾಜವನ್ನು ಒಟ್ಟುಗೂಡಿಸುವ ಉದ್ದೇಶದಿಂದ ಲೋಕಮಾನ್ಯ ಬಾಲಗಂಗಾಧರ ತಿಲಕರು ಇದಕ್ಕೆ ಚಾಲನೆ ನೀಡಿದರು. ದೀನದಲಿತರ ಸೇವೆಯೇ ಸೇವಾಂಜಲಿಯ ಮುಖ್ಯ ಉದ್ದೇಶ . ಇನ್ನಷ್ಟು ಒಳ್ಳೆಯ ಕೆಲಸ , ಜನಸೇವೆಗೆ ಮಹಾಗಣಪತಿ ಆಶೀರ್ವಾದ ಮಾಡಲಿ ಎಂದರು.
ವೇದಿಕೆಯಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ರಿಜಿಸ್ಟ್ರಾರ್ ಚಂದ್ರಹಾಸ ರೈ , ಪಂಜಿಕಲ್ ಬ್ರಹ್ಮಬೈದರ್ಕಳ ಗರಡಿಯ ಕಾರ್ಯಾಧ್ಯಕ್ಷ ಪ್ರಕಾಶ್ ಕುಮಾರ್ ಜೈನ್ , ರೋಟರಿ ಕ್ಲಬ್ ಮಾಜಿ ಅಧ್ಯಕ್ಷ ಉದ್ಯಮಿ ಪ್ರಕಾಶ್ ಕಾರಂತ್ ನರಿಕೊಂಬು , ಗಣೇಶೋತ್ಸವ ಸಮಿತಿ ಅಧ್ಯಕ್ಷ ಚಂದ್ರಶೇಖರ ತೇಜ ಮಾರಿಪಳ್ಳ ,ಅರ್ಕುಳ  ಬೀಡು ವಜ್ರನಾಭ ಶೆಟ್ಟಿ ಉಪಸ್ಥಿತರಿದ್ದರು. ಕೆ.ಕೃಷ್ಣ ಕುಮಾರ್ ಪೂಂಜ ಸ್ವಾಗತಿಸಿದರು. ಅರ್ಜು ನ್ ಕೆ.ಪೂಂಜ ವಂದಿಸಿ , ಕೆ.ದೇವದಾಸ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

By Suddi9

Leave a Reply

Your email address will not be published. Required fields are marked *