ಕೈಕಂಬ: ಮಂಗಳೂರು ಆಕಾಶವಾಣಿಯ ಹರ್ಷವಾರದ ಅತಿಥಿಯ 204ನೇ ಕಾರ್ಯಕ್ರಮದಲ್ಲಿ ಸೆ.20ರಂದು ಬೆಳಿಗ್ಗೆ 8.50 ಕ್ಕೆ ಕಂಪ್ಯೂಟರ್ ತಜ್ಞ ನಾಡೋಜ ಡಾ. ಕೆ.ಪಿ.ರಾವ್ ಭಾಗವಹಿಸಲಿದ್ದಾರೆ.
DSCN3694

DSCN3703
ಮುಂಬಯಿಯ ಟಾಟಾ ಇನ್ಸ್‍ಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್‍ನ ಅಣುಶಕ್ತಿ ವಿಭಾಗದ ಸಂಶೋಧಕರಾಗಿ ಸೇರಿ ಮುಂದೆ ಟಾಟಾ ಪ್ರೆಸ್ ಸೇರಿ ಅಕ್ಷರಗಳೊಡನೆ ಒಡನಾಟ ಪ್ರಾರಂಭಿಸಿದ್ದರು ಮಾನೋಟೈಪ್ ನಿರ್ದೇಶಕರಾಗಿ, ಕ್ವಾರ್ಕ್ ಎಕ್ಸ್‍ಪ್ರೆಸ್ ಅಡೋಬಿ ಸಿಸ್ಟಮ್ಸ ಮುಂತಾದ ಸಂಸ್ಥೆಗಳಲ್ಲಿ ಸಲಹೆಗಾರರಾಗಿ ಮಣಿಪಾಲ ಸಮೂಹ ಸಂಸ್ಥೆಗಳಲ್ಲಿ ಪ್ರಾಧ್ಯಾಪಕರಾಗಿ ಕೆಲಸ ನಿರ್ವಹಿಸಿರು. ಮುಂಬಯಿ ಮತ್ತು ಗೌಹಾಟಿ ಐಐಟಿಯಲ್ಲಿ ಪ್ರೊಫೆಸರಾಗಿ ದುಡಿದ ಅನುಭವಸ್ಥರು. ಯುಟ್ಯೂಬ್, ಫ್ರೀಸಾಪ್ಟ್‍ವೇರ್ ಫೌಂಢೇಶನ್, ಸೋರ್ಸ್‍ಫೋರ್ಜ್, ವಿಕ್ಕಪೀಡಿಯಾಗಳಿಗೆ ಕೊಡುಗೆ ನೀಡಿದವರು. ಕರ್ನಾಟಕ ಸರಕಾರ ನುಡಿ ತಂತ್ರಾಂಶವನ್ನು ಸಿದ್ಧಪಡಿಸಿದ ಹಾಗೂ ಫಾಂಟುಗಳನ್ನು ಬಳಸಿ ಪಠ್ಯವನ್ನು ಸಿದ್ಧಪಡಿಸಲು ಪದಸಂಸ್ಕಾರಕ (ವರ್ಡ್ ಪ್ರೊಸೆಸರ್)ಕ್ಕಾಗಿ ‘ಸೇಡಿಯಾಪು’ ತಂತ್ರಾಂಶ ಸಿದ್ಧಪಡಿಸಿದರು. ಧ್ವನ್ಯಾತ್ಮಕ ಕೀಲಿಮಣಿ ವಿನ್ಯಾಸ ರೂಪಿಸಿದ ‘ಲಿಪಿಬ್ರಹ್ಮ’ ಖ್ಯಾತಿಯ ಇವರು ಮುದ್ರಣ, ವಿನ್ಯಾಸ ಕುರಿತಂತೆ ಕೃತಿ ರಚನೆ ಮಾಡಿದ್ದಾರೆ. ತಮ್ಮ ಜೀವನಾನುಭವವನ್ನು ಸಂದರ್ಶನದಲ್ಲಿ ತಿಳಿಸಿದ್ದಾರೆ. ಇವರನ್ನು ಕಾರ್ಯಕ್ರಮ ನಿರ್ವಾಹಕರಾದ ಡಾ. ಸದಾನಂದ ಪೆರ್ಲ ಸಂದರ್ಶಿಸಿದ್ದಾರೆ. ಮುಂದಿನ ವಾರದ ಅಥಿತಿಯಾಗಿ ಮಣಿಪಾಲದ ಹಸ್ತ ಶಿಲ್ಪ ಹಾಗೂ ಸಂಸ್ಕ್ರತಿ ಗ್ರಾಮದ ನಿರ್ಮಾತೃ ಯು.ವಿಜಯನಾಥ ಶೆಣೈ ಭಾಗವಹಸಲಿರುವರು.

By suddi9

Leave a Reply

Your email address will not be published. Required fields are marked *