ಕೈಕಂಬ: ಬಂಗಾರ್ ಕಲಾವಿದೆರ್ ಗಂಜಿಮಠ ಇದರ ಉದ್ಘಾಟನಾ ಸಮಾರಂಭವು ಸೆ.19ರಂದು ಕೈಕಂಬ ಶ್ರೀ ಗಣೇಶ್ ಮಂಟಪದಲ್ಲಿ ಜರಗಿತು. ಇದರ ಉದ್ಘಾಟನೆಯನ್ನು ಉಳಿಪಾಡಿಗುತ್ತುಉದ್ಯಮಿ ಪ್ರಗತಿಪರ ಕೃಷಿಕರು ರಾಜೇಶ್ ನಾಯಕ್ ಉದ್ಘಾಟಿಸಿದರು.
ಸಾರ್ವಜನಿಕ ಶ್ರೀ ಗಣೇಶೋತ್ಸವ ಸೇವಾ ಸಮಿತಿ ಕೈಕಂಬ ಇದರ ಅಧ್ಯಕ್ಷ ವಿನೋದ್ ಮಾಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕೈಕಂಬ ನೈಸ್ ಕ್ಯಾಟರರ್ಸ್ನ ಮಾಲಕ ದೀಪಕ್ ಕೋಟ್ಯಾನ್, ಕೈಕಂಬ ಶ್ರೀನಿವಾಸ್ ಎಂಟರ್ ಪ್ರೈಸಸ್ನ ಮಾಲಕ ಶ್ರೀ ಶ್ರೀಧರ್ ರಾವ್, ಗಂಜಿಮಠ ಸಾಯಿಕೃಪ ಹೋಟೆಲ್ ಮಾಲಕ ರವಿ, ಗಂಜಿಮಠ ರಾಜಕೇಸರಿ ಯೂತ್ ಕ್ಲಬ್ ಅಧ್ಯಕ್ಷ ಪ್ರವೀಣ್ ಎಡಪದವು, ನೆಲ್ಯಾಡಿ ಸಂತ ಜಾರ್ಜ್ ಪದವಿ ಪೂರ್ವ ಕಾಲೇಜ್ ಉಪನ್ಯಾಸಕ ವಿಶ್ವನಾಥ ನೆಲ್ಯಾಡಿ, ಪ್ರವೀಣ ವರಕೋಡಿ, ಶಂಕರ ನಾಲಿಮಾರ್ ಉಪಸ್ಥಿತರಿದ್ದರು. ಜನಾರ್ಧನ ಅಮ್ಮುಂಜೆ ಕಾರ್ಯಕ್ರಮ ನಿರೂಪಿಸಿದರು.
ಸಂಜೆ 6ರಿಂದ 9ರವರೆಗೆ ಯಕ್ಷಕಲಾ ಸಂಘ ವರಕೋಡಿ ಇದರ ಬಾಲ ಕಲಾವಿದರಿಂದ ಯಕ್ಷಗಾನ ಬಯಲಾಟ ವೀರಮಣಿ-ಕುಶಲವ ,ರಾತ್ರಿ 9ರಿಂದ 12ರವರಗೆ ಬಂಗಾರ್ ಕಲಾವಿದೆರ್ ಗಂಜಿಮಠ ಇವರಿಂದ ನಮ ಎನ್ನಿಲೆಕ್ಕ ಅತ್ತ್ ಎಂಬ ತುಳು ಸಾಮಾಜಿಕ, ಹಾಸ್ಯಮಯ ನಾಟಕ ನಡೆಯಿತು.











