ಬಂಟ್ವಾಳ: ರಾ.ಹೆದ್ದಾರಿ 75ರ ಮೆಲ್ಕಾರ್ ಸಮೀಪದ ನರಹರಿ ಪರ್ವತದ ಬಳಿ ಲಾರಿಯೊಂದು ಕೆಟ್ಟು ಹೋದ ಪರಿಣಾಮ ತಾಸು ಗಟ್ಟಲೆ ಟ್ರಾಫಕ್ ಜಾಮ್ ಉಂಟಾದ ಘಟನೆ ಇಂದು ಬೆಳಿಗ್ಗೆ ನಡೆಯಿತು.

ಘನಗಾತ್ರದ ಲಾರಿಯೊಂದು ಮಂಗಳೂರಿನಿಂದ ಸರಕು ಸಾಗಿಸುತ್ತಿದ್ದ ವೇಳೆ ಸುಮಾರು ಬೆಳಿಗ್ಗೆ 7.30ರ ಸಮಯ ನರಹರಿ ಪರ್ವತದ ಬಳಿ ಹೆದ್ದಾರಿ ಮಧ್ಯೆ ತಾಂತ್ರಿಕ ದೋಷಗಳಿಂದ ಲಾರಿ ಕೆಟ್ಟು ಹೋದ ಪರಿಣಾಮ 10 ಗಂಟೆಯವರೆಗೂ ಹೆದ್ದಾರಿಯಲ್ಲಿ ಟ್ರಾಫಿಕ್ ಜಾಮ್ ಸಮಸ್ಯೆ ಉಂಟಾಗಿತ್ತು. ಬೆಳಗ್ಗಿನ ಜಾವ ಉಂಟಾದ ಸಮಸ್ಯೆಯಿಂದಾಗಿ ವಿದ್ಯಾರ್ಥಿ ಸಹಿತ ಕೆಲಸಕ್ಕೆ ಹೋಗುವವರು ಪರದಾಡುವಂತಾಯಿತು. ಪಾಣೆಮಂಗಳೂರುವರೆಗೆ ಮತ್ತು ಕಲ್ಲಡ್ಕದ ಕೆ.ಸಿ.ರೋಡ್ವರೆಗೆ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಬಿ.ಸಿ.ರೋಡ್ ಟ್ರಾಫಿಕ್ ಜಾಮ್ ಮುಕ್ತವಾದ ಬಳಿಕ ಇದೇ ಪ್ರಥಮ ಬಾರಿಗೆ ತಾಸು ಗಟ್ಟಲೆ ಟ್ರಾಫಿಕ್ ಜಾಮ್ ಉಂಟಾಗಿತ್ತು. ಟ್ರಾಫಿಕ್ ಪೊಲೀಸರು ಸಮಸ್ಯೆಯನ್ನು ಪರಿಹರಿಸಲು ಪರದಾಡುತ್ತಿದ್ದರು.

