ರಾಮನಗರ: ರಾಮನಗರದಲ್ಲಿ ಆಪ್ ಕಾರ್ಯಕರ್ತರ ಮೇಲೆ ಕೈ ಕಾರ್ಯಕರ್ತರ ಹಲ್ಲೆಯನ್ನು ಖಂಡಿಸಿ ರವಿಕೃಷ್ಣಾ ರೆಡ್ಡಿ ನೇತೃತ್ವದಲ್ಲಿ ಆಪ್ ಕಾರ್ಯಕರ್ತರು ರಸ್ತೆಯಲ್ಲೇ ಕುಳಿತು ಅಹೋರಾತ್ರಿ ಪ್ರತಿಭಟನೆ ನಡೆಸಿದ್ದಾರೆ. ರಾಮನಗರದಲ್ಲಿ ಕೈಕಾರ್ಯಕರ್ತರು ಹಣ ಹಂಚುತ್ತಿದ್ದ ಫೋಟೊವನ್ನು ತೆಗೆಯಲು ಹೋದಾಗ ಕಾಂಗ್ರೆಸ್ ಕಾರ್ಯಕರ್ತರು ಆಪ್ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿ ಗೂಂಡಾಗಿರಿ ಪ್ರದರ್ಶಿಸಿದ್ದರು. ಈ ಕುರಿತು ರವಿಕೃಷ್ಣಾ ರೆಡ್ಡಿ ಮಾತನಾಡುತ್ತಾ, ಕಾರ್ಯಕರ್ತರ ಮೇಲೆ ಹಲ್ಲೆಯಾಗಿ 24 ಗಂಟೆಗಳಾಗಿವೆ. ಹಲ್ಲೆ ಮಾಡಿದ ಮತ್ತು ಹಣ ಹಂಚಿದ ಆರೋಪಿಯನ್ನು ಪೊಲೀಸರು ಇಲ್ಲಿಯವರೆಗೆ ಬಂಧಿಸಿಲ್ಲ.

aap
ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಬೆಂಬಲಿಗರು ಬಹಿರಂಗವಾಗಿ ಹಣವನ್ನು ಹಂಚಿದ್ದಾರೆ. ರಾಜ್ಯದಲ್ಲಿ ಇದೊಂದೇ ಕ್ಷೇತ್ರವಲ್ಲ. ಎಲ್ಲಾ ಕ್ಷೇತ್ರಗಳಲ್ಲೂ ಅಕ್ರಮ ಚುನಾವಣೆ ನಡೆದಿದೆ. ಇದೊಂದು ಪ್ರಜಾಪ್ರಭುತ್ವದ ಅಣಕ. ಚುನಾವಣೆ ಆಯೋಗ ನಿರ್ವೀರ್ಯ ಸಂಸ್ಥೆ. ಅದು ಸರಿಯಾಗಿ ಕೆಲಸ ನಿರ್ವಹಿಸಿಲ್ಲ ಎಂದು ರವಿಕೃಷ್ಣ ರೆಡ್ಡಿ ಆರೋಪಿಸಿದ್ದಾರೆ.

By suddi9

One thought on “ಆಪ್ ಮೇಲೆ ಕೈ ಹಲ್ಲೆ: ಪ್ರತಿಭಟನೆ”

Leave a Reply

Your email address will not be published. Required fields are marked *