ಬಂಟ್ವಾಳ : ತಾಲೂಕು ವಾಮದಪದವು ಸಮುದಾಯ ಆರೋಗ್ಯ ಕೇಂದ್ರಕ್ಕೆ ಹೋಗುವ ರಸ್ತೆಯ ಅಭಿವೃದ್ಧಿ ಸಹಿತ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ವಾಮದಪದವು ವಲಯ ಬಿಜೆಪಿ ವತಿಯಿಂದ ಸೋಮವಾರ ವಾಮದಪದವು ಸರ್ಕಲ್ ಬಳಿ ಪ್ರತಿಭಟನಾ ಸಭೆ ಜರಗಿತು.
ಬಿಜೆಪಿ ಪ್ರಮುಖ ರಾಜೇಶ್ ನಾೈಕ್ ಉಳಿಪಾಡಿಗುತ್ತು ಅವರು ಸಭೆಯಲ್ಲಿ ಭಾಗವಹಿಸಿ ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿ ವಾಮದಪದವು ಆರೋಗ್ಯ ಕೇಂದ್ರವು ಸುಸಜ್ಜಿತವಾಗಿದ್ದು ಎಲ್ಲಾ ರೀತಿಯ ವ್ಯವಸ್ಥೆಯನ್ನು ಒಳಗೊಂಡಿದ್ದರೂ ಇಲ್ಲಿಗೆ ಹೆಚ್ಚುವರಿ ವೈದ್ಯಾ„ಕಾರಿಗಳು ಹಾಗೂ ಸಿಬಂದಿಗಳ ಅಗತ್ಯವಿದೆ. ಅತೀ ಹೆಚ್ಚು ಜನಸಂಖ್ಯೆ ವ್ಯಾಪ್ತಿಯನ್ನು ಹೊಂದಿರುವ ಈ ಆರೋಗ್ಯ ಕೇಂದ್ರಕ್ಕೆ ಒಬ್ಬರೇ ಕರ್ತವ್ಯ ನಿರ್ವಹಿಸುವುದು ಅಸಾಧ್ಯವಾಗಿದ್ದು ಈ ಹಿನ್ನೆಲೆಯಲ್ಲಿ ಸರಕಾರ ತತ್‍ಕ್ಷಣ ಇಲ್ಲಿನ ಖಾಲಿ ಹುದ್ದೆಗಳನ್ನು ಭರ್ತಿ ಮಾಡಬೇಕಾಗಿದೆ ಎಂದು ಒತ್ತಾಯಿಸಿದರು.
ಜಿ.ಪಂ.ಮಾಜಿ ಉಪಾಧ್ಯಕ್ಷ ಎಂ.ತುಂಗಪ್ಪ ಬಂಗೇರ ಅವರು ಮಾತನಾಡಿ ಬಡವರ ಅಭಿವೃದ್ಧಿ ಬಗ್ಗೆ ಮಾತನಾಡುವ ರಾಜ್ಯ ಸರಕಾರ ಬಡಜನತೆಯ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ವಹಿಸಿದೆ. ಜಿಲ್ಲೆಯವರೇ ಆದ ಆರೋಗ್ಯ ಸಚಿವರು ಜಿಲ್ಲೆಯ ಪ್ರತೀ ಆಸ್ಪತ್ರೆಗಳಿಗೆ ಎಲ್ಲಾ ರೀತಿಯ ಮೂಲಭೂತ ಸೌಲಭ್ಯಗಳನ್ನು ಒದಗಿಸುವುದರೊಂದಿಗೆ ವೈದ್ಯಾ„ಕಾರಿಗಳ ಸಹಿತ ಸಿಬಂದಿಗಳನ್ನು ತತ್‍ಕ್ಷಣ ಒದಗಿಸಬೇಕು. ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ವಿಧಾನ ಸೌಧದ ಮುಂದೆ ಉಗ್ರ ರೀತಿಯ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ಜಿ.ಪಂ.ಉಪಾಧ್ಯಕ್ಷ ಸತೀಶ್ ಕುಂಪಲ, ಸದಸ್ಯೆ ನಳಿನಿ ಬಿ.ಶೆಟ್ಟಿ , ಬಂಟ್ವಾಳ ಬಿಜೆಪಿ ಅಧ್ಯಕ್ಷ ಜಿ.ಆನಂದ , ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ದೇವದಾಸ್ ಶೆಟ್ಟಿ ಬಂಟ್ವಾಳ, ಪ್ರಮುಖರಾದ ಸಂಜೀವ ಪೂಜಾರಿ ಪಿಲಿಂಗಾಲು, ಪಿಲಾತಬೆಟ್ಟು ಗ್ರಾ.ಪಂ.ಅಧ್ಯಕ್ಷ ಚಂದ್ರಶೇಖರ ಕುಮಂಗಿಲ, ಇರ್ವತ್ತೂರು ಗ್ರಾ.ಪಂ.ಉಪಾಧ್ಯಕ್ಷ ಶಂಕರ ಶೆಟ್ಟಿ ಬೆದ್ರಮಾರು, ಸೇವಾ ರಮೇಶ್ ಶೆಟ್ಟಿ ಮಜಲೋಡಿ, ಬಿಜೆಪಿ ಪ್ರಮುಖರಾದ ಪುರುಷೋತ್ತಮ ಶೆಟ್ಟಿ , ಸೀತಾರಾಮ ಶೆಟ್ಟಿ , ಜಯರಾಮ ಶೆಟ್ಟಿ ಕಾಪು, ಮೋಹನದಾಸ್ ಗಟ್ಟಿ , ವಿಜಯ ರೈ , ಭೋಜರಾಜ ಶೆಟ್ಟಿ , ದೇವಿಪ್ರಸಾದ್ ಶೆಟ್ಟಿ , ವಾಮದಪದವು ಎಬಿವಿಪಿ ಘಟಕ ಸದಸ್ಯರು ಮತ್ತಿತರರು ಭಾಗವಹಿಸಿದ್ದರು.
ಆಸ್ಪತ್ರೆಯಲ್ಲಿ ಪೂರ್ಣ ಪ್ರಮಾಣದ ಸೇವೆ, ಹೆಚ್ಚುವರಿ ವೈದ್ಯಾ„ಕಾರಿಗಳ ನೇಮಕ, ಸರಕಾರದ ಎಲ್ಲಾ ಸವಲತ್ತುಗಳು ಜನರಿಗೆ ಸಿಗಬೇಕು., ಹಳೆಯ ಕಟ್ಟಡವನ್ನು ತೆರವುಗೊಳಿಸಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಸೇವೆ ಸಿಗಬೇಕು. ತುರ್ತು ಚಿಕಿತ್ಸೆಗಾಗಿ 108 ಆ್ಯಂಬುಲೆನ್ಸ್ ಸೇವೆ , ಸಿಬಂದಿಗಳ ಕೊರತೆಯನ್ನು ಸರಿಪಡಿಸುವುದು, ಆಸ್ಪತ್ರೆ ರಸ್ತೆ ದುರಸ್ತಿ ಮೊದಲಾದ ಬೇಡಿಕೆಗಳ ಮನವಿಯನ್ನು ಜಿಲ್ಲಾ ಆರೋಗ್ಯಾ„ಕಾರಿ ಡಾ|ರಾಮಕೃಷ್ಣ ರಾವ್ ಅವರಿಗೆ ಸಲ್ಲಿಸಲಾಯಿತು. ಈ ವೇಳೆ ಮಾತನಾಡಿದ ಅವರು ಸಮುದಾಯ ಆರೋಗ್ಯ ಕೇಂದ್ರಕ್ಕೆ ನಿಯೋಜನೆ ನೆಲೆಯಲ್ಲಿ ವೈದ್ಯರನ್ನು ನೇಮಕಾತಿಗೊಳಿಸಲಾಗಿದೆ. ಖಾಲಿ ಹುದ್ದೆಗಳನ್ನು ಭರ್ತಿ ಮಾಡುವ ಬಗ್ಗೆ ಸರಕಾರದ ಗಮನಕ್ಕೆ ತರಲಾಗುವುದು. ಆಸ್ಪತ್ರೆಯ ರಸ್ತೆ ದುರಸ್ತಿ ಎಲ್ಲರ ಜವಾಬ್ದಾರಿಯಾಗಿದ್ದು ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಅನುದಾನದಲ್ಲಿ ರಸ್ತೆ ದುರಸ್ತಿ ಮಾಡುವ ಬಗ್ಗೆ ಇಲಾಖೆಯಿಂದ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಹೇಳಿದರು. ರಾಜ್ಯ ಬಿಜೆಪಿ ಉಪಾಧ್ಯಕ್ಷೆ ಸುಲೋಚನ ಜಿ.ಕೆ.ಭಟ್ ಕಾರ್ಯಕ್ರಮ ನಿರೂಪಿಸಿದರು.
