ಬಂಟ್ವಾಳ:ಸಮಾಜಮುಖಿ ಚಟುವಟಿಕೆ ಮೂಲಕ ಇಲ್ಲಿನ ಕುದ್ಕೋಳಿ ಓಂ ಫ್ರೆಂಡ್ಸ್ ಯುವಕ ಮಂಡಲ ಮತ್ತು ಮಹಿಳಾ ಸಮಿತಿಯು ಕೇವಲ ಶ್ರೀಕೃಷ್ಣ ಜನ್ಮಾಷ್ಟಮಿ ಮತ್ತು ಮೊಸರುಕುಡಿಕೆ ಉತ್ಸವಕ್ಕೆ ಸೀಮಿತವಾಗಿರದೆ ಕಳೆದ ಒಂಭತ್ತು ವರ್ಷಗಳಲ್ಲಿ ಸ್ಥಳೀಯ ಪ್ರತಿಭಾನ್ವಿತ ವಿದ್ಯಾರ್ಥಿಗಳು ಮತ್ತು ಅಶಕ್ತರಿಗೆ ಪೋತ್ಸಾಹ ನೀಡುತ್ತಾ ಇತರ ಸಂಘಟನೆಗಳಿಗೆ ಮಾದರಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಬಿ.ಸಿ.ರೋಡ್ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ ಕೆ.ಸರಸ್ವತಿ ಭಟ್ ಹೇಳಿದ್ದಾರೆ.

14btl-sanman

14btl-Kudkoli
ಬಂಟ್ವಾಳ ತಾಲೂಕಿನ ಕುದ್ಕೋಳಿ ಓಂ ಫ್ರೆಂಡ್ಸ್ ಯುವಕ ಮಂಡಲ ಮತ್ತು ಮಹಿಳಾ ಸಮಿತಿ ವತಿಯಿಂದ (ಸೆ.13ರಂದು) ಭಾನುವಾರ ನಡೆದ 9ನೇ ವರ್ಷದ ಮೊಸರು ಕುಡಿಕೆ ಉತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಂಘದ ಅಧ್ಯಕ್ಷ ಪೂವಪ್ಪ ಜಿ.ಪೂಜಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ರಾಯಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಮೇಶ ಭಟ್ ಮಾದೇರಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಎಲ್ಪೇಲು ತುಳುನಾಡು ಯುವಕ ಮಂಡಲ ಅಧ್ಯಕ್ಷ ರಾಜೇಂದ್ರ ಸಾಲ್ಯಾನ್, ರಾಷ್ಟ್ರೀಯ ಕ್ರೀಡಾಪಟು ಜಯ ನಾಯ್ಕ್ ಕ , ಗ್ರಾಮ ಪಂಚಾಯಿತಿ ಸದಸ್ಯರಾದ ಲಿಂಗಪ್ಪ ಪೂಜಾರಿ, ಯೋಗೀಶ ಆಚಾರ್ಯ ಎಲ್ಪೇಲು, ಪ್ರಮುಖರಾದ ಸೇಸಪ್ಪ ಪೂಜಾರಿ, ಭಾಸ್ಕರ ಬೆಳುವಾಯಿ ಮತ್ತಿತರರು ಶುಭ ಹಾರೈಸಿದರು. ಮಹಿಳಾ ಸಮಿತಿ ಅಧ್ಯಕ್ಷೆ ಮೋಹಿನಿ ಮತ್ತಿತರರು ಉಪಸ್ಥಿತರಿದ್ದರು.
ಇದೇ ವೇಳೆ ಬಂಟ್ವಾಳ ತಾಲ್ಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಮೋಹನ್ ಕೆ.ಶ್ರೀಯಾನ್ ರಾಯಿ, ಪ್ರತಿಭಾನ್ವಿತ ವಿದ್ಯಾರ್ಗರ್ಥಿಳಾದ ತ್ರಿಶಾಂತ್ ಕುದ್ಕೋಳಿ, ಸುಶ್ಮಿತ್ ಇವರನ್ನು ಸನ್ಮಾನಿಸಿ, ವಿವಿಧ ಸ್ಪರ್ಧಾ  ವಿಜೇತರಿಗೆ ಬಹುಮಾನ ವಿತರಿಸಲಾಯಿತು. ರುದೇಶ್ ಸ್ವಾಗತಿಸಿ, ವಂದಿಸಿದರು.

By suddi9

Leave a Reply

Your email address will not be published. Required fields are marked *