ಬಂಟ್ವಾಳ : ತಾಲೂಕಿನ ಸಾವಿರ ಅಡಿ ಎತ್ತರದ ನರಹರಿ ಪರ್ವತದಲ್ಲಿ ಸೋಣ(ಶ್ರಾವಣ) ಅಮವಾಸ್ಯೆ ತೀರ್ಥಸ್ನಾನ ಹಾಗೂ ನಾಗದೇವರಿಗೆ, ವಿನಾಯಕ ದೇವರಿಗೆ, ಸದಾಶಿವ ದೇವರಿಗೆ ವಿಶೇಷ ಸೇವೆ ಸೆ.13ರಂದು ರವಿವಾರ ಬೆಳಗ್ಗೆ 5ರಿಂದ ಸಂಜೆ 5ರ ವರೆಗೆ ಜರಗಲಿದೆ.
ಮುಂದಿನ ದಿನಗಳಲ್ಲಿ ಸುಮಾರು 6 ಕೋಟಿ ರೂ. ವೆಚ್ಚದಲ್ಲಿ ಕ್ಷೇತ್ರವನ್ನು ಅಭಿವೃದ್ಧಿಗೊಳಿಸುವ ಯೋಜನೆ ಇದ್ದು ಇದರ ಪೂವಾಭಾವಿ ಸಭೆಯು ಸೆ.13ರಂದು ಸಂಜೆ 3ಕ್ಕೆ ಶ್ರೀ ಕ್ಷೇತ್ರದಲ್ಲಿ ನಡೆಯಲಿದ್ದು ನರಹರಿ ಪರ್ವತದ ವ್ಯಾಪ್ತಿಗೊಳಪಟ್ಟ ಗ್ರಾಮ ಸಭೆಯ ಪದಾ„ಕಾರಿಗಳು, ಸದಸ್ಯರು, ಜೀರ್ಣೋದ್ಧಾರ ಸಮಿತಿ ಪದಾಧಿಕಾರಿಗಳು, ಸದಸ್ಯರು, ಉತ್ಸವ ಸಮಿತಿಯ ಪದಾ„ಕಾರಿಗಳು, ಸದಸ್ಯರು, ಭಕ್ತಾದಿಗಳು ಭಾಗವಹಿಸಿ ಸಲಹೆ, ಸೂಚನೆಗಳನ್ನು ನೀಡಬೇಕಾಗಿ ಪ್ರಕಟನೆ ತಿಳಿಸಿದೆ.
