ಮಂಗಳೂರು:  ಕಣ್ಣೂರಿನ ತಳಿಪರಂಬದಲ್ಲಿ ಸಿಪಿಎಂ ಏರ್ಪಡಿಸಿದ್ದ ಶ್ರೀ ಕೃಷ್ಣ ಜನ್ಮಾಷ್ಟಮಿ ಮೆರವಣಿಗೆಯಲ್ಲಿ ಶ್ರೀ ನಾರಾಯಣ ಗುರು ಶಿಲುಬೆಗೇರಿಸುವ ಸ್ತಬ್ಧ ಚಿತ್ರ ಪ್ರದರ್ಶಿಸಿದ ಘಟನೆ ಬಿಜೆಪಿ ಜಿಲ್ಲಾ ಹಿಂದುಳಿದ ವರ್ಗಗಳ ಮೋರ್ಚಾ ತೀವ್ರವಾಗಿ ಖಂಡಿಸಿರುತ್ತದೆ. ಸೆ. 08ರಂದು   ಜಿಲ್ಲಾ ಕಛೇರಿಯಲ್ಲಿ ನಡೆದ ಬಿಜೆಪಿ ಹಿಂದುಳಿದ ವರ್ಗಗಳ ಜಿಲ್ಲಾ ಸಮಿತಿ ಸಭೆಯ ಜಿಲ್ಲಾಧ್ಯಕ್ಷರಾದ ಮೋಹನ್ ರಾಜ್ ಕೆ.ಆರ್. ಅಧ್ಯಕ್ಷತೆಯಲ್ಲಿ ನಡೆಯಿತು. ಈ ಸಭೆಯಲ್ಲಿ ನಾರಾಯಣ ಗುರು ಜಯಂತಿ ಆಚರಣೆ, ಬಿಜೆಪಿ ರೈತ ಚೈತನ್ಯ ರಥಾ ಯಾತ್ರೆ ಸಭೆಯ ಬಗ್ಗೆ ಚರ್ಚಿಸಲಾಯಿತು. ಸಭೆಯಲ್ಲಿ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ರಾಜ್ಯಾಧ್ಯಕ್ಷರಾದ ವಿಧಾನ ಪರಿಷತ್ ಸದಸ್ಯರಾದ ಕೋಟ ಶ್ರೀನಿವಾಸ ಪೂಜಾರಿ, ನಿತಿನ್ ಕುಮಾರ್, ಕಸ್ತೂರಿ ಪಂಜ, ಶಿವರಾಮ ಮಣಿಯಾಣಿ, ಜನಾರ್ಧನ, ರಾಮ ಮುಗ್ರೋಡಿ, ಸದಾನಂದ ಪೂಜಾರಿ ಬೆಳ್ತಂಗಡಿ, ಅಜಿತ್ ಕುಮಾರ್ ಉಳ್ಳಾಲ್ ಮೊದಲಾದವರು ಭಾಗವಹಿಸಿದ್ದರು

By Suddi9

Leave a Reply

Your email address will not be published. Required fields are marked *