ಉಳ್ಳಾಲ: ದೇರಳಕಟ್ಟೆ ಪಾನೀರು ದಯಾ ಮಾತೆ ಇಗರ್ಜಿಯಲ್ಲಿ ಕನ್ಯಾ ಮರಿಯಮ್ಮನವರ ಹುಟ್ಟುಹಬ್ಬ ಮತ್ತು ತೆನೆಹಬ್ಬ ಇಂದು ನಡೆಯಿತು.
ಭಕ್ತರು ಬೆಳೆದ ತೆನೆಯನ್ನು ಚರ್ಚಿನಲ್ಲಿಟ್ಟು ಪೂಜೆ ನೆರವೇರಿಸಿದ ಬಳಿಕ ಕನ್ಯಾ ಮರಿಯಮ್ಮನವರ ಮೂರ್ತಿಗೆ ಪುಷ್ಪಾರ್ಚನೆ ನೆರವೇರಿಸಲಾಯಿತು.
DSC_0515

DSC_0507

DSC_0508
ಪೂಜೆ ಬಳಿಕ ತೆನೆ, ಹಾಲು ಮತ್ತು ಕಬ್ಬು ವಿತರಿಸಲಾಯಿತು. ಈ ಸಂದರ್ಭ ಪಾನೀರು ಚರ್ಚ್ ನ ಧರ್ಮಗುರು ಡೆನಿಸ್ ಸುವಾರಿ, ಅತಿಥಿ ಧರ್ಮಗುರರುಗಳಾಗಿ ಹೋಮಿಯೋಪತಿ ಫಾದರ್ ಮುಲ್ಲರ್ಸ್ ಆಸ್ಪತ್ರೆಯ ನಿರ್ದೇಶಕ ಫಾ. ವಿನ್ಸೆಂಟ್ ಡಿಸೋಜಾ ,
ಪಾಲನಾ ಮಂಡಳಿ ಉಪಾಧ್ಯಕ್ಷ ಫ್ರಾಂಕಿ ಪ್ರಾನ್ಸಿಸ್ ಕುಟಿನ್ಹಾ, ಕಾರ್ಯದರ್ಶಿ ಫಿಲಿಪ್ ಡಿಸೋಜಾ ಮೊಂಟೆಪದವು, ಧರ್ಮಭಗಿನಿಯರು ಮೊದಲಾದವರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *