ನವದೆಹಲಿ: ದೇಶಾದ್ಯಂತ ಬಿರುಗಾಳಿ ಎಬ್ಬಿಸಿದ್ದ ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಪ್ರಕರಣದ ತನಿಖಾ ವರದಿಯಲ್ಲಿ ಬಿಸಿಸಿಐನ ಮಾಜಿ ಅಧ್ಯಕ್ಷ ಶ್ರೀನಿವಾಸನ್ ಸೇರಿ 12 ಖ್ಯಾತ ಆಟಗಾರರ ಹೆಸರಿದೆ ಎಂದು ಸುಪ್ರೀಂಕೋರ್ಟ್ ಹೇಳಿದೆ. ಹಗರಣ ಕುರಿತಂತೆ ತನಿಖೆ ನಡೆಸಿ ವರದಿ ನೀಡಿದ್ದ ಮುದುಗಲ್ ಸಮಿತಿ ವರದಿಯನ್ನ ಇದೇ ಮೊದಲ ಬಾರಿಗೆ ಸುಪ್ರೀಂಕೋರ್ಟ್ ಬಹಿರಂಗಪಡಿಸಿದೆ.ಇದು ಕ್ರಿಕೆಟ್ ಮತ್ತು ಆಟಗಾರರ ಘನತೆ ಪ್ರಶ್ನೆಯಾಗಿರುವುದರಿಂದ ಇದನ್ನು ಸಿಬಿಐ ಅಥವಾ ಎಸ್`ಐಟಿ ತನಿಖೆಗೆ ಒಪ್ಪಿಸಿಲ್ಲ ಎಂದು ಕೋರ್ಟ್ ಹೇಳಿದೆ.

ipl

ಇದೇವೇಳೆ, ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಮೇಯಪ್ಪನ್ ಪಾತ್ರದ ಬಗ್ಗೆ ಧೋನಿ ಮತ್ತು ಶ್ರೀನಿವಾಸನ್ ಸುಳ್ಳು ಹೇಳಿಕೆ ನೀಡಿದ್ದಾರೆ ಎಂದು ಮುದುಗಲ್ ಸಮಿತಿ ನೀಡಿದ್ದ ವರದಿಯನ್ನ ಧೋನಿಮತ್ತು ಶ್ರೀನಿವಾಸನ್ ಪ್ರಶ್ನಿಸಿದ್ಧಾರೆ. ಹೀಗಾಗಿ, ಧ್ವನಿ ಮುದ್ರಿತ ದಾಖಲೆ ಪರಿಶೀಲನೆ ಕೌನ್ಸಿಲ್ ರಚಿಸುವಂತೆ ಮುದುಗಲ್ ಸಮಿತಿಗೆ ಸುಪ್ರೀಂಕೋರ್ಟ್ ಆದೇಶಿಸಿದೆ.

By suddi9

Leave a Reply

Your email address will not be published. Required fields are marked *