ದುಬೈ: ಆರ್​ಸಿಬಿ ತಂಡ ಭರ್ಜರಿ ಸಿದ್ಧತೆ ನಡೆಸಿದೆ. ಯುವರಾಜ್​ ಸಿಂಗ್ ಜೊತೆ ಸೇರಿಕೊಂಡು ಗಂಗ್ನಮ್​ ಡ್ಯಾನ್ಸ್​ ಮಾಡಲು ಕ್ರಿಸ್​ಗೇಲ್​ ರೆಡಿಯಾಗಿದ್ದಾರೆ. ಐಪಿಎಲ್​ನ ಚೋಕರ್ಸ್​ ಆಗಿರುವ ಆರ್​ಸಿಬಿ, ಈ ಸಲ ಆ ಹಣೆಪಟ್ಟಿಯಿಂದ ಹೊರಬರುವುದಾಗಿ ವಿಂಡೀಸ್​ ಬಿರುಗಾಳಿ ಗೇಲ್​ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಕಳೆದ ಒಂದು ವಾರದಿಂದ ಆರ್’​ಸಿಬಿ ತಂಡ ದುಬೈನಲ್ಲಿ ಅಭ್ಯಾಸ ನಡೆಸುತ್ತಿದೆ. ತಂಡದ ಪ್ರಮುಖ ಆಟಗಾರರಾದ, ಗೇಲ್​, ಕೊಹ್ಲಿ, ಎಬಿಡಿ ಮತ್ತು ಯುವರಾಜ್​ ತಂಡ ಕೂಡಿಕೊಂಡಿದ್ದು, ಮೈದಾನದಲ್ಲಿ ಬೆವರಿಳಿಸುತ್ತಿದ್ದಾರೆ. ಈ ಐಪಿಎಲ್​ನಲ್ಲಿ ಉತ್ತಮ ಪ್ರದರ್ಶನ ನೀಡುವ ವಿಶ್ವಾಸದಲ್ಲಿದೆ. ಹಾಗೇ ಕ್ರಿಸ್ ಗೇಲ್​ ಎಂದಿನಂತೆ ತಮ್ಮ ಸ್ಫೋಟಕ ಆಟದಿಂದ ಮತ್ತೆ ಅಬ್ಬರಿಸುವ ವಿಶ್ವಾಸದಲ್ಲಿದ್ದಾರೆ.

RCB_AFP

ಆರ್​ಸಿಬಿ ತಂಡದ ಸದಸ್ಯನಾಗಿರುವುದಕ್ಕೆ ಯುವರಾಜ್​ ಸಂತಸ ವ್ಯಕ್ತಪಡಿಸಿದ್ದಾರೆ. ವರುಣ್​ ಅರೋನ್​ ಕೂಡ ಆರ್​ಸಿಯಲ್ಲಿ ಉತ್ತಮ ಪ್ರದರ್ಶನ ನೀಡುವುದಾಗಿ ಹೇಳಿದ್ದಾರೆ. ವಿರೋಧಿ ತಂಡಗಳಿಗೆ ರಿಯಲ್ ಚಾಲೆಂಜ್​ ನೀಡಲು ತಾವು ಸಿದ್ಧರಾಗಿರುವುದಾಗಿ ಈ ಇಬ್ಬರು ಹೇಳಿಕೊಂಡಿದ್ದಾರೆ. ಇನ್ನು, ಬೆಂಗಳೂರು ರಾಯಲ್ ಚಾಲೆಂಜರ್ಸ್’ನ ಅಪದ್ಬಾಂಧವ ಡಿವಿಲಿಯರ್ಸ್​ ಕೂಡ ಉತ್ತಮ ಫಾರ್ಮ್’​ನಲ್ಲಿದ್ದಾರೆ. ಪ್ರಾಕ್ಟೀಸ್​ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿರುವ ಅವರು, ಆರ್.​ಸಿ ತಂಡದ ಇನ್’​ಫಾರ್ಮ್​ ಬ್ಯಾಟ್ಸ್’​ಮನ್​. ಈ ಸಲದ ಐಪಿಎಲ್’​ನಲ್ಲಿ ಹೆಚ್ಚು ಹೊಸ ಆಟಗಾರರನ್ನು ಹೊಂದಿರುವ ತಂಡ ಆರ್’​ಸಿಬಿ. ಬೌಲಿಂಗ್​ ಕೋಚ್​ ಅಲಾನ್​ ಡೋನಾಲ್ಡ್​ ಅವರ ಸಲಹೆ, ಹಿರಿಯ ಆಟಗಾರರ ಅನುಭವ ಮತ್ತು ಸಮಯೋಚಿತ ಆಟದ ನೆರವಿನಿಂದ ಗೆಲ್ಲುವ ವಿಶ್ವಾಸದಲ್ಲಿದೆ. ಡೆಲ್ಲಿ ಡೇರ್ ಡೆವಿಲ್ಸ್ ವಿರುದ್ಧ ನಾಳೆ ಗೆದ್ದು ಟೂರ್ನಿಯಲ್ಲಿ ಶುಭಾರಂಭ ಮಾಡಲು ಉತ್ಸಕವಾಗಿರುವ ರಾಯಲ್​ ಚಾಲೆಂಜರ್ಸ್​ ಈ ಬಾರಿ ಐಪಿಎಲ್​ ಚೋಕರ್ಸ್​ ಎಂಬ ಹಣೆಪಟ್ಟಿಯಿಂದ ಹೊರಬರುವ ಆತ್ಮವಿಶ್ವಾಸದಲ್ಲಿದೆ.

By suddi9

Leave a Reply

Your email address will not be published. Required fields are marked *