ಮೂಡುಬಿದಿರೆ: ವಿದ್ಯಾಗಿರಿಯ ಹಾಸ್ಟೆಲ್‍ನಲ್ಲಿ ಆಳ್ವಾಸ್‍ನ ವ್ಯಾಸಂಗ ಮಾಡುತ್ತಿದ್ದ ಪ್ರಥಮ ಬಿ.ಕಾಂ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
11145085_1445395745788272_3529822637842532532_n

11811529_1445395835788263_1447561275212088629_n
ಬೆಂಗಳೂರು ಮೂಲದ ರಕ್ಷಿತಾ(16) ಆತ್ಮಹತ್ಯೆ ಮಾಡಿಕೊಂಡಾಕೆ. ಶನಿವಾರ ಸಂಜೆ ಯಾವುದೋ ವಿಚಾರಕ್ಕೆ ವಾರ್ಡನ್ ಅವರೊಂದಿಗೆ ಜಗಳವಾಗಿದ್ದು, ರಾತ್ರಿ ವೇಳೆ ಆಕೆ ಹಾಸ್ಟೆಲ್ ಕೋಣೆಗೆ ಹೋಗಿರಲಿಲ್ಲ. ಮುಂಜಾನೆ ಹಾಸ್ಟೆಲ್‍ನ ಬಚ್ಚಲು ಮನೆಯಲ್ಲಿ ಆಕೆಯ ಶವ ಪತ್ತೆಯಾಗಿದೆ. ಬಚ್ಚಲು ಮನೆಯಲ್ಲಿ ಬಟ್ಟೆಯಿರಿಸುವ ಹ್ಯಾಂಗ್ಲಾರ್‍ಗೆ ವೈರ್ ಸಿಕ್ಕಿಸಿ, ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿದ್ದಾಳೆ. ಕೈಯಲ್ಲಿ ಡೆತ್‍ನೋಟ್ ಬರೆದಿದ್ದು, ಅದರಲ್ಲಿ ಅಪ್ಪ ಅಮ್ಮ ಕ್ಷಮಿಸಿ ಎಂದು ಬರೆಯಲಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ.

By suddi9

Leave a Reply

Your email address will not be published. Required fields are marked *