ಬಂಟ್ವಾಳ, ಆ. 31: ನೇತ್ರಾವತಿ ನದಿ ತುಂಬೆ ವೆಂಟೆಡ್ ಡ್ಯಾಂ ಮುಳುಗಡೆ ಪ್ರದೇಶದ ರೈತರಿಗೆ ಸೂಕ್ತ ಪರಿಹಾರ, ವೈಜ್ಞಾನಿಕ ಸವರ್ೆ ಲಿಖಿತ ಮಾಹಿತಿ ನೀಡುವಂತೆ ಆಗ್ರಹಿಸಿ ಸೆ. 15ರಂದು ಜಿಲ್ಲಾ ಉಸ್ತುವಾರಿ ಸಚಿವರ ಬಿ.ಸಿ.ರೋಡ್ ಕಛೇರಿ ಎದುರು ಧರಣಿ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ ಎಂದು ಜಿಲ್ಲಾ ರೈತ ಸಂಘದ ಅಧ್ಯಕ್ಷ ಶ್ರೀಧರ ಶೆಟ್ಟಿ ತಿಳಿಸಿದ್ದಾರೆ.
ಅವರು ಆ. 31ರಂದು ಬಿ.ಸಿ.ರೋಡ್ ಪ್ರೆಸ್ ಕ್ಲಬ್ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ವಿವರ ನೀಡಿದರು.
ಕನರ್ಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ದ.ಕ.ಜಿಲ್ಲಾ ಘಟಕ ಮತ್ತು ತುಂಬೆ ವೆಂಟೆಡ್ ಡ್ಯಾಮ್ ಸಂತ್ರಸ್ತ ರೈತರ ಹೋರಾಟ ಸಮಿತಿ ಆಶ್ರಯದಲ್ಲಿ ಧರಣಿ ಪ್ರತಿಭಟನೆ ಹಮ್ಮಿಕೊಂಡಿದ್ದಾಗಿ ವಿವರಿಸಿದರು.
ಮೊದಲ ದಿನದ ಪ್ರತಿಭಟನೆಯಲ್ಲಿ ಸಚಿವರು ಸ್ಪಂದಿಸಿ ನಮಗೆ ಸೂಕ್ತ ಭರವಸೆ ನೀಡದಿದ್ದಲ್ಲಿ ಬೇಡಿಕೆ ಈಡೇರುವ ತನಕ ಪ್ರತಿಭಟನೆ ನಡೆಸಲಾಗುವುದು. ಪ್ರತಿಭಟನೆಯಲ್ಲಿ ಕೇವಲ ರೈತರು ಮಾತ್ರವಲ್ಲದೆ ಮನೆಮಂದಿ, ಜಾನುವಾರು, ನಾಯಿ, ಕೋಳಿಗಳಂತಹ ಪ್ರಾಣಿಪಕ್ಷಿಗಳನ್ನು ಸಹ ಜೊತೆಗೂಡಿ ವಿಶಿಷ್ಟವಾಗಿ ಪ್ರತಿಭಟಿಸುವುದಾಗಿ ತಿಳಿಸಿದರು.
ತುಂಬೆ ವೆಂಟೆಡ್ ಡ್ಯಾಂ ನಿಮರ್ಾಣದ ಕುರಿತು ರೈತರು ಜಿಲ್ಲಾಡಳಿತದಲ್ಲಿ ಹಲವು ಸಲ ಕೇಳಿದಾಗಲೂ ಯಾವುದೇ ಲಿಖಿತ ಮಾಹಿತಿ ನೀಡಿರುವುದಿಲ್ಲ. ಕಳೆದ ಹದಿನೈದು ದಿನಗಳ ಹಿಂದೆ ದ.ಕ.ಜಿಲ್ಲಾಕಾರಿಗಳು ರೈತರಿಗೆ ಮಾಹಿತಿ ನೀಡುವುದಾಗಿ ತಿಳಿಸಿದ್ದರು.ಆದರೆ ಯಾವುದೇ ಮಾಹಿತಿ ನೀಡಲು ವಿಫಲರಾಗಿದ್ದಾರೆ ಎಂದಿದ್ದಾರೆ.
ತುಂಬೆ ಡ್ಯಾಂ ನೀರು ನಿಲುಗಡೆ ಎತ್ತರ 7 ಮೀಟರ್ ಎನ್ನುತ್ತಾರೆ. ಹಾಗಿದ್ದರೆ 12 ಮೀಟರ್ ಎತ್ತರಕ್ಕೆ ಡ್ಯಾಂ ರಚಿಸಿದ್ದೇಕೆ. ಯಾವುದೇ ಸಂದರ್ಭ ಎದುರಾದರೆ ಹೆಚ್ಚುವರಿ ನೀರು ನಿಲ್ಲಿಸಿದಲ್ಲಿ ಮುಳುಗಡೆ ಆಗುವ ಜಮೀನಿನ ಪರಿಹಾರಕ್ಕೆ ಪುನ: ಹೋರಾಟ ನಡೆಸುವ ಬದಲು ಈಗಲೇ ಸ್ಪಷ್ಟವಾಗಿ ನಿದರ್ಿಷ್ಟ ಎತ್ತರ ಮಾತ್ರ ನೀರು ನಿಲ್ಲಿಸುವುದು ಮತ್ತು ಅದಕ್ಕೆ ಸಂಬಂಸಿದಂತೆ ಪರಿಹಾರವನ್ನು ಈಗಲೇ ಘೋಷಿಸುವಂತೆ ತಿಳಿಸಿದರು.
ರೈತರನ್ನು ವಂಚಿಸುವುದು ಬೇಕಿಲ್ಲ. ಸ್ಪಷ್ಟ ಲಿಖಿತ ದಾಖಲೆ ನೀಡಲಿ. ಜಿಲ್ಲೆಯ ಯಾವೊಬ್ಬ ಜನ ಪ್ರತಿನಿಯೂ ರೈತರ ಪರವಾಗಿ ಸ್ಪಂದಿಸದೆ ಸುಳ್ಳು ಹೇಳಿಕೊಂಡು ಬಂದಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಂಗಳೂರು ವಕೀಲರ ಸಂಘದ ಅಧ್ಯಕ್ಷ ಎಸ್.ಪಿ. ಚಂಗಪ್ಪ, ಜಿಲ್ಲಾ ರೈತ ಸಂಘದ ಕಾರ್ಯದಶರ್ಿ ಮನೋಹರ್ ಶೆಟ್ಟಿ, ತುಂಬೆ ವೆಂಟೆಡ್ ಡ್ಯಾಂ ಸಂತ್ರಸ್ತ ರೈತರ ಹೋರಾಟ ಸಮಿತಿ ಪ್ರ.ಕಾರ್ಯದಶರ್ಿ ಎಂ. ಸುಬ್ರಹ್ಮಣ್ಯ ಭಟ್, ಕಾರ್ಯದಶರ್ಿ ಎನ್.ಕೆ. ಇದಿನಬ್ಬ, ಸದಸ್ಯರಾದ ಸುದೇಶ್ ಮಯ್ಯ , ಶರತ್ ಕುಮಾರ್, ರೈತ ಸಂಘ ಗೌ.ಸಲಹೆಗಾರ ಮುರುವ ಮಹಾಬಲ ಭಟ್ ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *