ಮೂಡುಬಿದಿರೆ: ಕಾರ್ಪೊರೇಟ್ ಕಂಪೆನಿಗಳಿಗೆ ಕೃಷಿ ಭೂಮಿಯನ್ನು ಮಾರಿ ಇನ್ನೊಂದಡೆ ಗೋವುಗಳಿಗೆ ಆಹಾರವಿಲ್ಲದೇ, ಸಾಕಲಾಗದೇ ಅವುಗಳ ಸಾವಿಗೆ ಕಾರಣರಾಗಿ ಕೊನೆಗೆ ಅವುಗಳಿಗೆ ಸೂಕ್ತ ಅಂತ್ಯ ಸಂಸ್ಕಾರಕ್ಕೂ ವ್ಯವಸ್ಥೆ ಮಾಡಲಾಗದವರು ಇನ್ನೊಬ್ಬರ ಆಹಾರದ ಹಕ್ಕನ್ನು ಕಸಿದುಕೊಳ್ಳುವ ಕೆಲಸ ಮಾಡಬಾರದು. ಹೀಗೆ ಮೂಲ ಭೂತ ಅಗತ್ಯ ನಿರಾಕರಣೆಯೇ ನಿಜವಾದ ಭಯೋತ್ಪಾದನೆ. ವೈವಿಧ್ಯತೆಯ ಸಂಸ್ಕøತಿಯಲ್ಲಿ ಏಕತೆಯಿಂದಿರುವ ಭಾರತೀಯತೆಯನ್ನು ಉಳಿಸಲು ಕೆಡುಕಿನ ವಿರುದ್ಧ ಹೋರಾಟದಲ್ಲಿ ಸಾವೇ ಎದುರಾದರೂ ಗೌರವಪೂರ್ವಕ ಸ್ವೀಕರಿಸಲು ಸಿದ್ಧರಾಗಿ ಎಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಹನೀಫ್ ಕಾಟಿಪಳ್ಳ ಹೇಳಿದರು. ಅವರು ರವಿವಾರ ಇಲ್ಲಿನ ರಾಜೀವ ಗಾಂಧಿ ವಾಣಿಜ್ಯ ಸಂಕೀರ್ಣದ ಆವರಣದಲ್ಲಿ ಮೂಡುಬಿದಿರೆ ನಾಗರಿಕರ ಸಮಿತಿ ವತಿಯಿಂದ ಕರಾವಳಿಯ ಜನರ ಶಾಂತಿಯನ್ನು ಕದಡುತ್ತಿರುವ ಸಂಘಪರಿವಾರದ ವಿರುದ್ಧ ನಡೆದ ಬೃಹತ್ ರ್ಯಾಲಿ ಮತ್ತು ಪ್ರತಿಭಟನೆಯನ್ನು ಉದ್ದೇಶಿಸಿ ದಿಕ್ಸೂಚಿ ಭಾಷಣ ಮಾಡಿದರು.

ದೇಶದ ಗಡಿ ಕಾಯುವ ಸೈನಿಕರೇ ನಮ್ಮ ನಿeವಾದ ರಕ್ಷಕರು. ಅವರಿಗೆ ನೀಡುವ ಪೌಷ್ಠಿಕ ಆಹಾರದಲ್ಲಿ ಗೋಮಾಂಸ ಬಳಕೆಯಾಗುತ್ತಿದೆ ಎಂದ ಅವರು ಮನುಷ್ಯ ಹೆಚ್ಚು ಗೌರವಿಸಬೇಕಾದ ಇತರ ಮನುಷ್ಯರ ಬಗ್ಗೆ ಪರಸ್ಪರ ಸೌಹಾರ್ದತೆಯ ವಾತಾವರಣ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಣೆಯಾಗುತ್ತಿರುವ ಕಾರಣದಿಂದಾಗಿಯೇ ಇಲ್ಲಿ ಜಿಲ್ಲೆಯ ಅಭಿವೃದ್ಧಿಯಾಗುತ್ತಿಲ್ಲ ಎಂದವರು ಅಭಿಪ್ರಾಯಪಟ್ಟರು.
ಮುಖ್ಯ ಅತಿಥಿಯಾಗಿದ್ದ ಮಂಗಳೂರು ವಿಶ್ವವಿದ್ಯಾನಿಲಯ ಪ್ರಾಧ್ಯಾಪಕ ಪಟ್ಟಾಭಿರಾಮ ಸೋಮಯಾಜಿ ಮಾತನಾಡಿ ಸಂಘಪರಿವಾರ ದಕ್ಷಿಣ ಕನ್ನಡ ಜಿಲ್ಲೆಯನ್ನು ಕೋಮುವಾದದ ರಾಜಧಾನಿಯನ್ನಾಗಿಸಿದೆ. ಕಚ್ಚೆ ಹರುಕರಾಗಿರುವ ಸಂಘ ಪರಿವಾರದವರು ತಮ್ಮ ಬಟ್ಟಲಲ್ಲಿ ಆನೆ ಸತ್ತಿದ್ದರೂ ಇತರರ ಬಟ್ಟಲಲ್ಲಿ ನೊಣ ಹುಡುಕುವ ಕೆಲಸ ಮಾಡುತ್ತಿದ್ದಾರೆ. ನರಮಾಂಸ ತಿನ್ನುವ ಪುಂಡಾಟಿಕೆಯ ಸಂಘ ಪರಿವಾರದವರು ಸಾಧ್ಯವಿದ್ದರೆ ಎಲ್ಲ ಗೋವುಗಳನ್ನು ಕೂಡಿಟ್ಟು ಸಾಕಲಿ. ಅವರಿಗೆ ಅದೇ ಶಿಕ್ಷೆ ಎಂದರು. ದೊಡ್ಡ ಶನಿಸಂತಾನವಾಗಿರುವ ಹಲವು ಹೆಸರಿನ ಕೇಸರಿ ಸಂಘಟನೆಗಳವರಿಗೆ ಅಧಿಕಾರ ಮಾತ್ರ ಬೇಕು. ಹೋರಾಟದಲ್ಲಿಮಾನವ ಗುರಾಣಿಯನ್ನಾಗಿಸಿ ತಮ್ಮ ಬೇಳೆ ಬೇಯಿಸಿಕೊಳ್ಳುವ ಅವರು ಮಾಡುವುದೆಲ್ಲವೂ ಅನಾಚಾರ ಎಂದರು.
ಆಲ್ ಇಂಡಿಯಾ ಇಮಾಮ್ ಕೌನ್ಸಿಲ್ನ ಜಿಲ್ಲಾಧ್ಯಕ್ಷ ಜಾಫರ್ ಸ್ವಾದಿಕ್ ಫೈಝಿ ಮಾತನಾಡಿ ಜಾತ್ಯಾತೀತ ಪ್ರಜಾಪ್ರಭುತ್ವ ಸಂವಿಧಾನ ಮತ್ತು ಕಾನೂನಿಗೆ ಮಾತ್ರ ನಾವು ಈ ದೇಶದಲ್ಲಿ ಗೌರವಿಸಬೇಕು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಮು ಬೀಜ ಬಿತ್ತುತ್ತಿರುವ ಆರೆಸ್ಸೆಸ್ಗೆ ಜಿಲ್ಲೆಯಲ್ಲಿ ಕೆಲವು ಪೋಲೀಸ್ ಅಧಿಕಾರಿಗಳೂ ಏಜೆಂಟರಂತೆ ವರ್ತಿಸುತ್ತಿದ್ದಾರೆ, ಸಂಘ ಪರಿವಾರದ ಗೂಂಡಾಗಿರಿ ಮಟ್ಟಹಾಕದಿದ್ದರೆ ಸೌಹಾರ್ದತೆ ಸಾಧ್ಯವಿಲ್ಲ ಎಂದರು. ಜಿಲ್ಲೆಯ ಸಚಿವರುಗಳು ಇಲ್ಲಿ ಶಾಂತಿಯ ವಾತಾವರಣ ನೆಲೆಸುವಲ್ಲಿ ಕೆಲಸ ಮಾಡಲು ವಿಫಲರಾಗಿದ್ದಾರೆ. ಉಸ್ತುವಾರಿ ಸಚಿವರೂ ತಮ್ಮ ಜವಾಬ್ದಾರಿಯಲ್ಲಿ ಸೋತಿದ್ದಾರೆ. ಹಾಗಾಗಿ ದ. ಕ ಜಿಲ್ಲೆಗೆ ಸೂಕ್ತ ಉಸ್ತುವಾರಿ ಸಚಿವರನ್ನು ನೀಡುವಂತೆ ಅವರು ಮುಖ್ಯಮಂತ್ರಿಯವರನ್ನು ಆಗ್ರಹಿಸಿದರು.
ಎಸ್.ಡಿ.ಪಿ.ಐ ದ.ಕ ಜಿಲ್ಲಾ ಕಾರ್ಯದರ್ಶಿ ರಿಯಾಝ್ ಪರಂಗಿಪೇಟೆ ಮಾತನಾಡಿ ಅತ್ತಾವರ ಹಾಗೂ ಗಂಟಾಲ್ಕಟ್ಟೆಯ ಘಟನೆಗಳು ಆಕಸ್ಮಿಕ ಘಟನೆಗಳಲ್ಲ. ಅವು ಸಂಘಪರಿವಾರ , ಬಿಜೆಪಿ ಪ್ರಾಯೋಜಿತ ಘಟನೆಗಳಾಗಿವೆ . ಇವೆಲ್ಲದರ ಬಗ್ಗೆ ಇಲ್ಲಿನ ಸಚಿವರುಗಳು ಮೌನವಹಿಸಿರುವುದು ಪ್ರಜಾಸತ್ತೆಯ ಕಗ್ಗೋಲೆ ಎಂದು ಆರೋಪಿಸಿದರು.
ನಾಗರಿಕ ಸಮಿತಿ ಸದಸ್ಯ ಇಲ್ಯಾಸ್ ಸ್ವಾಗತಿಸಿ ಮಾತನಾಡಿ ದಕ ಜಿಲ್ಲೆಯಲ್ಲಿ ಸಂಘ ಪರಿವಾರದ ಗೂಂಡಾಗಿರಿ ಮಿತಿ ಮೀರಿದೆ. ಆದರೆ ಕಾನೂನನ್ನು ಗೌರವಿಸಿ ನಾವು ಸುಮ್ಮನಿದ್ದೇವೆ ಎಂದರು.
ಸಭೆ ನಡೆಯುವುದಕ್ಕೂ ಮೊದಲು ಪ್ರಾಂತ್ಯದ ಶಾಲಿಮಾರ್ ಹಾಲ್ ಮುಂಭಾಗದಿಂದ ಪೇಟೆಯ ಮುಖ್ಯ ಬೀದಿಯಲ್ಲಿ ಬೃಹತ್ ರ್ಯಾಲಿ ನಡೆಯಿತು.
ಮೂಡುಬಿದಿರೆ ನಾಗರಿಕ ಸಮಿತಿ ಅಧ್ಯಕ್ಷ ಮಹಮ್ಮದ್ ಅಶ್ರಫ್ ಅಧ್ಯಕ್ಷತೆವಹಿಸಿದ್ದರು.
ಯುನಿಸೆಫ್ ರಾಜ್ಯಾಧ್ಯಕ್ಷ ರಫೀವುದ್ದೀನ್ ಕುದ್ರೋಳಿ, ಇಂಡಿಯನ್ ಸೋಶಿಯಲ್ ಫಾರಮ್ ದುಬೈ ಘಟಕದ ಉಪಾಧ್ಯಕ್ಷ ಝಾಕೀರ್ ಆಲಂಗಾರ್ , ಪಿಎಫ್ಐ ಮೂಡುಬಿದಿರೆ ಅಧ್ಯಕ್ಷ ಶರೀಫ್ ತೋಡಾರು ಉಪಸ್ಥಿತರಿದ್ದರು. ರಫೀಕ್ ವಂದಿಸಿದರು. ಜಮಾಲ್ ಮತ್ತು ಆರಿಫ್ ಕಾರ್ಯಕ್ರಮ ನಿರ್ವಹಿಸಿದರು.
ಸಂಘಪರಿವಾರದವರಿಗೆಲ್ಲ ದನ ಹಾಲಿನ ಫ್ಯಾಕ್ಟರಿ ಅಷ್ಟೇ. ನಂತರ ಏನು ಮಾಡುವುದು. ಸೆಗಣಿ ಮಾರಿ ಜೀವನ ಮಾಡೋದಕ್ಕಾಗುತ್ತಾ? ಎಂದು ಪ್ರಶ್ನಿಸಿದ ಪಟ್ಟಾಭಿರಾಮ ಸೋಮಯಾಜಿ …..ಗಡಿ ಕಾಯುವ ಸೈನಿಕರಿಗೂ ಗೋಮಾಂಸ ಪೌಷ್ಠಿಕ ಆಹಾರವಾಗಿದೆ ಎಂದರು. ವಾಜಪೇಯಿ ಸಂಘ ಪರಿವಾರದವರಿಗೆ ಮರೆತೇ ಹೋಗಿದ್ದಾರೆ. ಅವರ ಅರೋಗ್ಯ ಚೆನ್ನಾಗಿಲ್ಲ. ಆಯಸ್ಸು ಇದೆ. ಕಾರಣ ಗೋಮಾಂಸ ತಿನ್ನುತ್ತಿದ್ದರು. ಇಂಗ್ಲೆಂಡಿನಲ್ಲಿ ವಿವೇಕಾನಂದರೂ ಗೋಮಾಂಸ ತಿಂದಿದ್ದು ಅವರಿಗದು ಇಷ್ಟವಾಗಿತ್ತು ಎಂದರು.


