ಬೆಳುವಾಯಿ ಗ್ರಾಮಸಭೆಯಲ್ಲಿ ಅಧ್ಯಕ್ಷ
ಮೂಡುಬಿದರೆ: ಬೆಳುವಾಯಿ ಗ್ರಾ.ಪಂ ವ್ಯಾಪ್ತಿಯಲ್ಲಿ ಗೋ ಕಳ್ಳತನ ಹೆಚ್ಚಾಗುತ್ತಿದ್ದು, ಇದನ್ನು ನಿಯಂತ್ರಿಸಬೇಕೆಂದು ಬುಧವಾರ ನಡೆದ ಗ್ರಾಮಸಭೆಯಲ್ಲಿ ಗ್ರಾಮಸ್ಥರು ಒತ್ತಾಯಿಸಿದರು. ಗೋಮಾಂಸ ರಫ್ತು ನಿಷೇಧಿಸುವಂತೆ ಪಂಚಾಯಿತಿಯಲ್ಲಿ ನಿರ್ಣಯ ಕೈಗೊಂಡು ಪ್ರದಾನಿಗೆ ತಲುಪಿಸಲಾಗುವುದು. ಗೋ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ವೈಯಕ್ತಿಕವಾಗಿ ಪೊಲೀಸರಿಗೆ ದೂರು ನೀಡಿ. ಅದು ದಾಖಲಾಗದಿದಲ್ಲಿ ಪಂಚಾಯಿತಿಯಿಂದಲೇ ದೂರು ನೀಡುವ ಪ್ರಯತ್ನವನ್ನು ಮಾಡುತ್ತೇವೆ. ಮುಂದಿನ ಗೋಪೂಜೆ ಮೊದಲು ಹೈನುಗಾರರಿಗೆ ಪಂಚಾಯಿತಿಯಲ್ಲಿ ವಿಶೇಷ ಸಭೆಯನ್ನು ಕೈಗೊಳ್ಳುತ್ತೇವೆ ಎಂದು ಬೆಳುವಾಯಿ ಗ್ರಾ.ಪಂ ಅಧ್ಯಕ್ಷ ಭಾಸ್ಕರ ಆಚಾರ್ಯ ಭರವಸೆ ನೀಡಿದರು.
mbd_aug26_7
ಪೊಲೀಸ್ ಇಲಾಖೆಯಿಂದ ಬಂದಿದ್ದ ಪೊಲೀಸೊಬ್ಬರು ಗ್ರಾಮಸಭೆಯಲ್ಲಿ ಮಾತನಾಡಿ, ಸಾರ್ವಜನಿಕ ಸ್ಥಳಗಳಲ್ಲಿ ದನಗಳನ್ನು ಬಿಡಬೇಡಿ. ಇದರಿಂದ ಕಳ್ಳತನಕ್ಕೆ ಸುಲಭವಾಗುತ್ತದೆ ಎಂದು ಸಲಹೆ ನೀಡಿದರು. ಪ್ರಗತಿಪರ ಪೌಸ್ತೀನ್ ಸಿಕ್ವೇರಾ ಮಾತನಾಡಿ, ನನ್ನ ಮನೆಯಲ್ಲಿ ಕಟ್ಟಿದ ಹಟ್ಟಿಯಿಂದ 3 ದನಗಳನ್ನು ಕಳ್ಳತನ ಮಾಡಿದ್ದಾರೆ.ಇದಕ್ಕೆ ಮೊದಲು ಕ್ರಮ ಕೈಗೊಳ್ಳಿ ಎಂದರು.

By suddi9

Leave a Reply

Your email address will not be published. Required fields are marked *