ಬೆಳುವಾಯಿ ಗ್ರಾ.ಪಂ ವ್ಯಾಪ್ತಿಯಲ್ಲಿ ಬೀದಿ ದೀಪ ಸಮಸ್ಯೆ ಹೆಚ್ಚಾಗುತ್ತಿದ್ದು, ಪಂಚಾಯಿತಿಯವರು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಒತ್ತಾಯಿಸಿದರು. ಇದಕ್ಕೆ ಉತ್ತರಿಸಿದ ಗ್ರಾ.ಪಂ ಅಧ್ಯಕ್ಷ ಭಾಸ್ಕರ ಆಚಾರ್ಯ, ಬೀದಿ ದೀಪ ಸಮಸ್ಯೆ ಬಗೆಹರಿಸಲು ಕನಿಷ್ಠ ಒಂದು ತಿಂಗಳಾದರೂ ಬೇಕು. ಸೆ.10ರೊಳಗಡೆ ಬೀದಿ ದೀಪ ಸಮಸ್ಯೆ ಬಹುತೇಕ ಪರಿಹಾರವಾಗಲಿದೆ ಎಂದರು. ನನ್ನ ವಾರ್ಡ್‍ನಲ್ಲಿ ಹಾಕಿದ ಬೀದಿ ದೀಪ ಎರಡಢ ದಿನದಲ್ಲಿ ಹಾಳಾಗಿದೆ ಎಂದು ತಾ.ಪಂ ಸದಸ್ಯೆ ಪ್ರೇಮಾ ನಾಯ್ಕ್ ಆರೋಪಿಸಿದರು. ನಾವು ಅಧಿಕಾರ ವಹಿಸಿಕೊಂಡು ಕೇವಲ 2 ತಿಂಗಳಾಗಿದೆ. ಹಿಂದೆ ಬೀದಿ ದೀಪಗಳೆಲ್ಲ ಸಮರ್ಪಕವಾಗಿ ಕೆಲಸ ಮಾಡುತಿತ್ತೇ? ಎಂದು ಭಾಸ್ಕರ ಆಚಾರ್ಯ ಪ್ರಶ್ನಿಸಿದರು. ಮಾಜಿ ಅಧ್ಯಕ್ಷ ರಾಘು ಕೋಟ್ಯಾನ್ ಅಕ್ಷೇಪ ವ್ಯಕ್ತಪಡಿಸಿದರು. ಸಭೆಯಲ್ಲಿ ಸ್ವಲ್ಪ ಹೊತ್ತು ಗೊಂದಲ ಉಂಟಾಯಿತು.

By suddi9

Leave a Reply

Your email address will not be published. Required fields are marked *