ಬಂಟ್ವಾಳ: ಲೋಕಸಭಾ ಸಂಸದರಾದ ನಳಿನ್ ಕುಮಾರ್ ಕಟೀಲ್ರವರು ಸಾರ್ವಜನಿಕ ಬೇಟಿ ಹಾಗೂ ಕಾರ್ಯಕರ್ತರ ಭೇಟಿ ಮತ್ತು ಸಾರ್ವಜನಿಕರಿಂದ ಅಹವಾಲು ಸ್ವೀಕಾರವನ್ನು ಆ.19ರಂದು ಬಿ.ಸಿ.ರೋಡ್ನ ಟ್ರೇಡ್ಸೆಂಟರ್ನಲ್ಲಿರುವ ಬಿ.ಜೆ.ಪಿ ಕಛೇರಿಯಲ್ಲಿ ಮಾಡಿದರು. ಈ ಸಂದರ್ಭ ಸಾರ್ವಜನಿಕರಿಂದ ವಿವಿಧ ರಸ್ತೆಗಳಿಗೆ ಸಂಬಂಧಪಟ್ಟಂತೆ ಮನವಿಗಳನ್ನು ಸ್ವೀಕರಿಸಲಾಯಿತು.
ಬಿಜೆಪಿ ಮುಖಂಡ ರಾಜೇಶ್ ನಾಯಕ್ ಉಳಿಪಾಡಿಗುತ್ತು, ಮಾಜಿ ಶಾಸಕ ರುಕ್ಮಯ ಪೂಜಾರಿ, ಬಂಟ್ವಾಳ ಬಿಜೆಪಿ ಅಧ್ಯಕ್ಷ ಜಿ.ಆನಂದ, ಪ್ರಮುಖರಾದ ರಾಮ್ದಾಸ್ ಬಂಟ್ವಾಳ, ದೇವದಾಸ್ ಶೆಟ್ಟಿ, ದಿನೇಶ್ ಭಂಡಾರಿ, ದೇವಪ್ಪ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.
