ಬಂಟ್ವಾಳ : ಭಗವದ್ಗೀತೆ ಹಿಂದೂ ಧರ್ಮದ ಶ್ರೇಷ್ಠ ಪುರಾಣ ಗ್ರಂಥ . ಈ ಕಥಾ-ಶ್ರವಣದಿಂದ ಸಕಲ ಪಾಪಗಳು ಪರಿಹಾರವಾಗಿ ಪುಣ್ಯ ಪ್ರಾಪ್ತಿಯಾಗುತ್ತದೆ ಎಂದು ಹೇಳುತ್ತಾ ಶ್ರೀಮದ್ಭಾಗವತಾ ಸಪ್ತಾಹವು ಯಶಸ್ವಿಯಾಗಿ ಜರಗಲಿ ಎಂದು ಪೊಳಲಿ ರಾಮಕೃಷ್ಣ ತಪೋವನದ ಶ್ರೀ ಸ್ವಾಮಿ ವಿವೇಕ ಚೈತನ್ಯಾನಂದ ಆಶೀರ್ವಚನವಿತ್ತರು. ಅವರು ಮಂಚಿ-ಕನಕಗಿರಿಯಲ್ಲಿ ಬೆ.ನಾ.ವಿಜಯೇಂದ್ರ ಆಚಾರ್ ಮೈಸೂರು ರವರ ನೇತೃತ್ವದಲ್ಲಿ ನಡೆದ ಶ್ರೀ ಮದ್ಭಾಗವತ ಸಪ್ತಾಹ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
KAR_6580ಲಯನ್ಸ್ ಅಂತರಾಷ್ಟ್ರೀಯ ಸೇವಾ ಸಂಸ್ಥೆಯ ಪ್ರಾಂತೀಯ ಅಧ್ಯಕ್ಷ ಲಯನ್ ದಾಮೋದರ ಬಿ.ಎಂ. , ತಾರನಾಥ ಕೈರಂಗಳ , ರಾಮಗಣೇಶ ಪ್ರಭು ಬಿ.ಸಿ.ರೋಡ್ , ವೆಂಕಟ್ರಮಣ ಭಟ್ , ಮುರಳೀಧರ ರಾವ್ , ಜಯಪ್ರಕಾಶ್ ಕಂದೂರು , ಸಿ.ಎಚ್.ಸೀತಾರಾಮ ಶೆಟ್ಟಿ , ಮಧುಸೂಧನ್ ಭಟ್ ಕೈಯೂರು , ಲಕ್ಷ್ಮಣ ಮಂಚಿ ಉಪಸ್ಥಿತರಿದ್ದರು. ಕೈಯೂರು ನಾರಾಯಣ ಭಟ್ ಸ್ವಾಗತಿಸಿದರು. ತಿರುಮಲೇಶ್ ಕೈಯೂರು ವಂದಿಸಿ ಕಾರ್ಯಕ್ರಮ ನಿರ್ವಹಿಸಿದರು.

By Suddi9

Leave a Reply

Your email address will not be published. Required fields are marked *