ಜಗತ್ತಿನಾದ್ಯಂತದ ಛಾಯಾಚಿತ್ರಗ್ರಾಹಕರನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸಿ ವಿಶೇಷ ದಿನವನ್ನಾಗಿ ಹಮ್ಮಿಕೊಳ್ಳುವ ಉದ್ದೇಶದಿಂದ ಆಗಸ್ಟ್.19ರಂದು ವಿಶ್ವ ಫೋಟೊ ದಿನ ಏರ್ಪಡಿಸಲಾಗುತ್ತಿದೆ. ಇದು 1839 ಆಗಸ್ಟ್ 19ರಂದು ಮೊದಲ ಶಾಶ್ವತ ಫೋಟೊಗ್ರಾಫಿಕ್ ಪ್ರಕ್ರಿಯೆ ಪೇಟೆಂಟ್ ಖರೀದಿಸಿದ ಮತ್ತು ಜಗತ್ತಿಗೆ ಉಚಿತವಾಗಿ ಬಿಡುಗಡೆಗೊಳಿಸಿದ ಕಳೆದ ವರ್ಷ 175ನೇ ವಿಶ್ವ ಛಾಯಾಗ್ರಹಣ ದಿನಾಚರಣೆ ವರ್ಷಾಚರಣೆಗೆ ಸಿದ್ಧಿಗೊಂಡಿದೆ.

* ಫೋಟೋಗ್ರಾಫಿಯ ಅಪ್ರತಿಮ ಪ್ರತಿಭೆ ಹರೀಶ್ ಜೋಶಿ ಗೋಕರ್ಣ*

Harish Joshi-15

Harish Joshi-2

Harish Joshi-4

Harish Joshi-7
ಈ ವರ್ಷ ಆಗಸ್ಟ್ 19ರಂದು ನಡೆಯುವ ವಿಶ್ವಫೋಟೊ ದಿನಾಚರಣೆಯಂದು ಜಾಗತಿಕ ಫೋಟೊಗ್ರಾಫರ್ಗಳನ್ನು ಒಂದೆಡೆ ಒಗ್ಗೂಡಿಸಿ ಫೋಟೊಗ್ರಾಫಿಯ ಶಕ್ತಿಯನ್ನು ಜಗತ್ತಿಗೆ ತೋರಿಸುವ ಮೂಲಕ ಜಗತ್ತಿನ ವ್ಯವಹಾರ, ಸಂಘಟನೆ ಮತ್ತು ಸಮಾಜ ಘಟಕಗಳಿಗೆ ಪ್ರೋತ್ಸಾಹ ನೀಡುವ ಉದ್ದೇಶವನ್ನು ಇಟ್ಟುಕೊಳ್ಳಲಾಗಿದೆ. ಅದೆಷ್ಟೋ ಬಾರಿ ನಾವು ಜಾಗತಿಕ ಸ್ನೇಹಿತರು ಮತ್ತು ಕುಟುಂಬದೊಂದಿಗೆ ನಮ್ಮ ಅಮೂಲ್ಯ ಕ್ಷಣಗಳನ್ನು ಹಂಚಿಕೊಳ್ಳಲು ಒಂದು ದಿನ ಇದೆ ಎಂಬುದನ್ನೇ ಛಾಯಾಗ್ರಹಕರೇ ಮರೆತುಬಿಟ್ಟಿದ್ದೇವೆ.

ಇಂದು ನಾವು ಫೋಟೊಗ್ರಾಫಿಗೆಅನುದಾನವನ್ನು ಕೂಡ ಪಡೆಯುತ್ತಿದ್ದೇವೆಎಂದು ವಿಶ್ವ ಫೋಟೊ ದಿನದ ಸಂಸ್ಥಾಪಕ ಕೊರ್ಸ್ಕೆ ಅರ ಹೇಳಿದ್ದಾರೆ. ಮೊದಲ ಬಾರಿಗೆ 35 ಎಂಎಂ ಫಿಲ್ಮ್ ಕ್ಯಾಮರಾ 90 ವರ್ಷಗಳ ಹಿಂದೆ ಅಭಿವೃದ್ಧಿಪಡಿಸಲಾಯಿತು. ಡಿಜಿಟಲ್ ಕ್ಯಾಮರಾ ಕೇವಲ 20 ವರ್ಷಗಳ ಹಿಂದೆ ಮತ್ತು 15 ವರ್ಷಗಳ ಹಿಂದೆ ಕ್ಯಾಮರಾ ಫೋನುಗಳೇ ಇರಲಿಲ್ಲ. ಆದರೆ ಇಂದು ಪ್ರತಿಯೊಂದು ಪ್ರಕ್ರಿಯೆಯೂ ಛಾಯಾಗ್ರಹಣ ಪ್ರಭಾವದಿಂದ ಅಭಿವೃದ್ಧಿಗೊಂಡಿದೆ. ನೀವುವಿಶ್ವ ಫೋಟೊ ದಿನವನ್ನು ನಿಮ್ಮ ಸಮುದಾಯ, ಸಮಾಜದೊಂದಿಗೆ ಹೇಗೆ ಬಳಸಿಕೊಳ್ಳಬಹುದು ಎಂಬುದಕ್ಕೆ ಉಪಾಯಗಳನ್ನು ವೆಬ್ಸೈಟಲ್ಲಿ ಬಿಡುಗಡೆಗೊಳಿಸಿದ್ದು, ಅದನ್ನು ಬಳಸಿಕೊಂಡು ಛಾಯಾಗ್ರಹಣದ ಅರಿವು ಮೂಡಿಸಿಕೊಳ್ಳಲು  ಕೋರುತ್ತಾರೆ ಕೊರ್ಸ್ಕೆ.

ದೃಶ್ಯ ಸಂವಹನಕ್ಕೆ ಛಾಯಾಗ್ರಹಣ ಪ್ರಬಲವಾದ ಮಾರ್ಗವಾಗಿದೆ ಮತ್ತು ಸಂವಹನಕ್ಕೆ ಹೆಚ್ಚು ನಂಬಿಕೆ ಮತ್ತು ವಿಶ್ವಾಸವನ್ನು ತಂದುಕೊಟ್ಟಿದೆ. ಫೋಟೊಗ್ರಾಫಿ ಪರಿಷ್ಕರಣೆಯಿಂದ ಇಂದು ನಾವು ನಮ್ಮ ಅಮೂಲ್ಯ ಕ್ಷಣಗಳನ್ನು ಕೇವಲ ಸೆಕೆಂಡುಗಲ್ಲಿ ಜಗತ್ತಿನಾದ್ಯಂತ ಹಂಚಿಕೊಳ್ಳಬಹುದು. ಛಾಯಾಗ್ರಹಣ ಎಂದರೆ ಜಗತ್ತನ್ನು ನೋಡುವ ಮಾರ್ಗದ ಕ್ರಾಂತಿಕಾರಿ ಅನ್ವೇಷಣೆ. ನಾವು ನಮ್ಮ ಮನೆಯಲ್ಲಿಯೇ ಕುಳಿತು ಜಗತ್ತಿನ ವಿವಿಧ ಸ್ಥಳಗಳನ್ನು ಸಂಪರ್ಕಿಸಬಹುದು. ನಾವು ನಮ್ಮ ಸಾಹಸಗಳನ್ನು ಇನ್ನೊಂದು ನಗರದಲ್ಲಿರುವ ಸ್ನೇಹಿತರೊಂದಿಗೆ
ಹಂಚಿಕೊಳ್ಳಬಹುದು. ಲಕ್ಷಂತರ ಕಿ.ಮೀ ದೂರದಲ್ಲಿದ್ದರೂ ಮೊಮ್ಮಕ್ಕಳು ಬೆಳೆಯುವುದನ್ನು ನೋಡಬಹುದು.

1837ರಲ್ಲಿ ಫೋಟೊಗ್ರಾಫಿಕ್ ಪ್ರಕ್ರಿಯೆಯಾದ ಡಗೆರೋಟೈಪನ್ನು ಜೋಸೆಫ್ ನೈಸ್ಫೋರೆ ನೀಪ್ಸೆ ಮತ್ತು ಲ್ಯೂಯಿಸ್ ಡಗರೆ ಅಭಿವೃದ್ಧಿಪಡಿಸಿದ ನೆನಪಿಗಾಗಿ ವಿಶ್ವಫೋಟೊ ದಿನ ಆಸ್ತಿತ್ವಕ್ಕೆ ತರಲಾಗಿದೆ ಎನ್ನುತ್ತಾರೆ ಛಾಯಾಗ್ರಹಕ ವಿದ್ವಂಸರು. 1839ರ ಜನವರಿ 9ರಂದು ಫ್ರೆಂಚ್ ಅಕಾಡೆಮಿ ಆಫ್ ಸೈನ್ಸಸ್ಡ ಗೆರೋಟೈಪ್ ಪ್ರಕ್ರಿಯೆಯನ್ನು ಘೋಷಿಸಿತು. ಕೆಲವೇ ತಿಂಗಳ ನಂತರ 1839ರ ಆಗಸ್ಟ್ 19 ರಂದು ಫ್ರೆಂಚ್ ಸರ್ಕಾರ ಪೇಟೆಂಟ್ ಖರೀದಿಸಿದ್ದಲ್ಲದೆ ಸಂಶೋಧನೆಯನ್ನು “ಜಗತ್ತಿಗೆ ಉಚಿತ ಕೊಡುಗೆ” ಎಂದು ಘೋಷಿಸಿತು. ಆದರೆ ಡಗರೋಟೈಪ್ ಮೊದಲ ಶಾಶ್ವತ ಫೋಟೊ ಗ್ರಾಫಿಕ್ ಕಲ್ಪನೆಯಲ್ಲ ಎಂದು ಸರ್ಕಾರ ತಿಳಿಸಿತ್ತು. ನೈಸ್ಫೋರೆ ನೀಪ್ಸೆ ಮೊದಲ ಶಾಶ್ವತ ಫೋಟೊಗ್ರಾಫ್ನ್ನು ಸೆರೆಹಿಡಿದಿದ್ದು“ವೀವ್ ಫ್ರಮ್ ದ ವಿಂಡೋ ಅಟ್ ಲಿ ಗ್ರಾಸ್” ಇದಕ್ಕೆ ಬಳಸಿದ ಪ್ರಕ್ರಿಯೆಯನ್ನು ಹಾಲಿಯೋಗ್ರಾಫಿ ಎಂದು ಕರೆಯಲಾಗಿದೆ.
ಡಗರೆಟೈಪ್ ಮೊದಲ ಪ್ರಾಯೋಗಿಕ ಫೋಟೊಗ್ರಾಫಿಕ್ ಪ್ರಕ್ರಿಯೆ ಮತ್ತು ಫ್ರೆಂಚ್ ಸರ್ಕಾರದಿಂದ ಪೇಟೆಂಟ್ ಖರೀದಿ ಮತ್ತು ಬಿಡುಗಡೆ ಮೂಲಕ 1839ರ ಆಗಸ್ಟ್ 19ನ್ನು ವಿಶ್ವಫೋಟೊ ದಿನಾಚರಣೆ ಆರಿಸಲು ಎರಡು ಐತಿಹಾಸಿಕ ಗುಣಗಳು ಕಾರಣವಾಗಿವೆಎನ್ನುತ್ತಾರೆ ಛಾಯಾಗ್ರಹಕ ವಿದ್ವಂಸರು. ವಿಶ್ವ ಫೊಟೊಗ್ರಾಫಿ ದಿನವೆಂದರೆ ಎಲ್ಲಕ್ಕಿಂತ ಹೆಚ್ಚಾಗಿ ಛಾಯಾಗ್ರಹಣವನ್ನು ಆಚರಿಸುವ ದಿನ. ಒಂದು ವೇಳೆ
ನೀವು ಹವ್ಯಾಸಿ ಛಾಯಾಗ್ರಹಕರು ಅಥವಾ ಫೋಟೋ ಆಸಕ್ತರು ಆಗಿರಬಹುದು ಅಥವಾ ವೃತ್ತಿಪರ ಫೋಟೋಗ್ರಾಫರ್ ಆಗಿರಬಹುದು. ಒಟ್ಟಿನಲ್ಲಿ ಆಗಸ್ಟ್ 19ರ ಛಾಯಾಗ್ರಹಣ ದಿನಾಚರಣೆಎಂದರೆ ನೀವು ನಿಮ್ಮ ಛಾಯಾಗ್ರಹಣದ ಪ್ರೀತಿಯನ್ನು ಅಪ್ಪಿಕೊಳ್ಳುವ ದಿನ. ಏನು ನಡೆಯಲಿದೆ ಮತ್ತು ಹೇಗೆ ಭಾಗವಹಿಸಬಹುದು ಎಂಬುದನ್ನು ನೀವೇ ಕಂಡುಹಿಡಿಯಿರಿ. ಒಂದು ವೇಳೆ ನೀವು ಛಾಯಾಗ್ರಹಣದ ಅಭಿಲಾಷಿಯಾಗಿದ್ದರೆ ನೀವು ವಿಶ್ವ ಛಾಯಾಗ್ರಹಣ ದಿನ ಆಚರಣೆಯಲ್ಲಿ ಭಾಗವಹಿಸಲು ಉಸ್ತುಕರಾಗಿರಿ.

ಸುಮಾರು 170ಕ್ಕೂ ಅಧಿಕ ವರ್ಷಗಳ ಬಳಿಕ ಅದರ ಭೂತ, ವರ್ತಮಾನ, ಭವಿಷ್ಯ ಮತ್ತು ತಾಂತ್ರಿಕ ಮತ್ತು ಕಲಾತ್ಮಕವಾಗಿ ಆಯ್ಕೆಗೊಂಡ ಆಗಸ್ಟ್-19 ದಿನಾಂಕವನ್ನು ಕ್ಯಾಮೆರಾ, ಮೊಬಾಯ್ಲ್ಗಳಲ್ಲಾದರೂ ಫೋಟೋ ಕ್ಲಿಕ್ಕಿಸಿ ಛಾಯಾಗ್ರಹಣ ದಿನಾಚರಣೆಗೆ ಮೆರುಗು ನೀಡೋಣ. ಹರೀಶ್ ವಿ.ಜೋಶಿ: ಕ್ಯಾಮೆರಾಗಳ ಬಳಕೆ ಎಷ್ಟು ಸೂಕ್ಷ್ಮವೋ ಅಷ್ಟೇ ನಾಜೂಕು ಕೂಡಾ ಆಗಿದೆ. 1ಎಂಎಂನಷ್ಟು ಕ್ಯಾಮೆರಾ ಅಲ್ಲಾಡಿದರೂ ಫೋಟೋವೇ ನಷ್ಟವಾಗುತ್ತದೆ. ಫೋಟೋ ತೆಗೆಯುವಾತ ಮಾಡುವ ಪ್ರತೀಯೊಂದು ತಪ್ಪಿಗೂ ಫೋಟೋಗಳೇ ಕಾಣಿಸದೆ ಮರೆಯಾಗುತ್ತವೆ. ಆದುದರಿಂದಲೇ ಒಂದಾನೊಂದು ಕಾಲದಲ್ಲಿ ಫೋಟೋಗ್ರಾಫರ್ ಎಂದರೆ ಶ್ರೇಷ್ಠ  ವ್ಯಕ್ತಿ ಎನ್ನುವುದಕ್ಕೂ ಪಾತ್ರರಾಗಿದ್ದರು. ಆದರೆ ಇಂದು ಗ್ರಾಯಿಫ್ವಾಟರ್ ಕುಡಿಯುವ ಮಗುವೂ ಕೂಡಾ ಫೋಟೋಗ್ರಾಫರ್ ಆಗುವುದು ಸಾಮಾನ್ಯವಾಗಿದೆ. 

ಕಾರವಾರ ಕುಮಟಾ ಗೋಕರ್ಣ ಅಲ್ಲಿನ ದಿ| ವಿಶ್ವೇಶ್ವರ ವೆಂಕಟರಮಣ ಜೋಶಿ ಮತ್ತು ದಿ| ಸುಶೀಲಾ ವಿ.ಜೋಶಿ ದಂಪತಿಯ ಸುಪುತ್ರರಾಗಿ 1959 ಜನವರಿ 2ರಂದು ಜನಿಸಿದ ಅಪ್ರತಿಮಾವಂತ  ಹರೀಶ್ ವಿ.ಜೋಶಿ. ಬಳಿಕ ಕರ್ನಾಟಕ ಧಾರವಾಡ ಅಂಕೋಲಾದ ಗೋಖಲೆ ಸೆಂಟನರಿ ಕಾಲೇಜ್ನಲ್ಲಿ ಪದವಿ ಪೂರೈಸಿ 1981ರಲ್ಲಿ ವೃತ್ತಿ ಹರಸಿ ಮುಂಬಯಿಗೆ ವಲಸೆ ಬಂದಿದ್ದರು. ಇಲ್ಲಿ ಸೆಂಚೂರಿ ಕಾಟನ್ ಟೆಕ್ಸ್ಟೈಲ್ನಲ್ಲಿ  ವೃತ್ತಿ ನಿರತರಾಗಿ 1987ರಲ್ಲಿ ಪೋಟೋಗ್ರಾಫಿಪರಿಣತರಾದರು. ಬಾಲ್ಯದಿಂದಲೇ ಕ್ಯಾಮೆರಾ ರಿಪೇರಿಂಗ್ ಬಗ್ಗೆ ಆಸಕ್ತರಾಗಿದ್ದು ಜೋಶಿ 1991ನಿಂದ  ಕ್ಯಾಮೆರಾ ದುರಸ್ತಿ ಕೆಲಸಕ್ಕೆ ಆಸಕ್ತಿ ತೋರಿದರು.  ರಾಷ್ಟ್ರದ ಸುಪ್ರಸಿದ್ಧ ಪೋಟೋಗ್ರಾಫರ್ಸ್ಗಳಾದ ಅಶೋಕ್ ಸಾಲ್ಯಾನ್ (ಫ್ಯಾಶನ್ಪೋಟೋಗ್ರಾಫರ್), ಆನಿಲ್ ಗಾಂಧಿ, ಹರಿ ಮಹಿಂದ, ಕಿಶೋರ್ ಸಾಲಿ (ಇಂಡಸ್ಟ್ರೀ ಪೋಟೋಗ್ರಾಫರ್ಸ್), ರಾಕೇಶ್ ಶ್ರೇಷ್ಠ, ಜಗದೀಶ್ ಮೂಳಿ, ಗೌತಮ್ ರಾಬಾಧ್ಯಕ್ಷ (ಬಾಲಿವುಡ್ ಪೋಟೋಗ್ರಾಫರ್) ಮತ್ತಿತರ ಛಾಯಾಚಿತ್ರಗಾರರ ದಿಗ್ಗಜರ ಕ್ಯಾಮೆರಾಗಳನ್ನು ನೀಟಾಗಿ ದುರಸ್ಥಿಗೈದು ತಮ್ಮ ಪ್ರತಿಮೆಯನ್ನು ಮೆರೆದವರಾಗಿದ್ದಾರೆ.

ಕಪ್ಪು ಬಿಳುಪು, ಕಲರ್ ಕ್ಯಾಮೆರಾ, ಎಲೆಕ್ಟ್ರಾನಿಕ್ಸ್, ಮೆಕ್ಯಾನಿಕ್ ಇತ್ಯಾದಿ ವಿವಿಧ ಬಗೆಯ ಅನೇಕ ದೊಡ್ಡ-ಸಣ್ಣ ಕ್ಯಾಮೆರಾಗಳನ್ನು ತ್ವರಿತವಾಗಿ ರಿಪೇರಿ ಮಾಡುವಲ್ಲಿ ಎತ್ತಿದಕೈ ಜೋಶಿ ಅವರದ್ದಾಗಿದೆ. ಮಾಮಿಯಾ, ಹೆಜೇಲ್ ಬ್ಲೇಡ್, ಸಿನರ್, ಬ್ರವುನಿಕಾ ಇತ್ಯಾದಿ ಬೃಹತ್ (ಲಾರ್ಜ್ ) ಹಳೆ ತಂತ್ರಜ್ಞಾನವುಳ್ಳ ಅಧಿಕ ಉಪಯೋಗವುಳ್ಳ ಬ್ಲಾಕ್ ಎಂಡ್ ವೈಟ್ ಕ್ಯಾಮೆರಾಗಳು ಮತ್ತು ಪ್ರಸಕ್ತ ಉಪಯೋಗದಲ್ಲಿರುವ ಕಲರ್ಫುಲ್ ನಿಕೋನ್, ಕೆನಾನ್, ಯಸಿಕಾ, ಪೆಂಟೆಕ್ಸ್, ಮೆಲ್ಟೊ ಅಂತಹ ಕ್ಯಾಮೆರಾಗಳನ್ನು ದುರಸ್ತಿಗೊಳಿಸುವ ಸಾಧಕರು ಹರೀಶ್ ಆಗಿದ್ದಾರೆ. ಹಳೆ ಕಾಲದ ನೆಗೆಟಿವ್ ಪೋಟೋಗ್ರಾಫಿ, ಬಳಿಕದ ಕಲ್ಲರ್ ಯುಗ ಮತ್ತು ಸದ್ಯದ ಕ್ಷಣಾರ್ಧದಲ್ಲಿ ಮೆರುಗು ನೀಡುವ ಡಿಜಿಟಲ್ ವರ್ಣಪಾರದರ್ಶಕತ್ವದ ಪೋಟೋಗ್ರಾಫಿ ನವಯುಗದ ಅವಿಷ್ಕಾರ ಮೂಡಿಸಿದೆ.

ಆದರೆ ಹಳೆ ಫೋಟೋಗ್ರಾಫಿಯು ಛಾಯಾಚಿತ್ರಗ್ರಾಹಕನ ವೃತ್ತಿಪರತೆಯಿಂದ ಶಾರ್ಪ್ನೆಸ್ ಕಳಕೊಳ್ಳುತ್ತಿದೆ. ಪ್ರಸ್ತುತ ಪೋಟೋಗ್ರಾಫಿಯು ಅಳತೆ ವಿಸ್ತೀರ್ಣ, ಮೃದುತನರಿಂದ ಡಿಜಿಟಲೈಝೇಶನ್  ಮೂಲಕ ರಂಗುರಂಗಿನ ವೈವಿಧ್ಯತೆಯಲ್ಲಿ ಮೆರೆಯುತ್ತಿವೆ. ಬ್ರಯ್ಟ್ನೆಸ್ ಮೂಲಕ ಕಾಲಕ್ಕಾನುಗುಣವಾಗಿ ಫಲಿತಾಂಶ ನಿರೀಕ್ಷಣೆ ಆಧುನಿಕ ಪೋಟೋಗ್ರಾಪಿ ವೈಶಿಷ್ಟತೆಯವಾಗಿದೆ. ಇವೆಲ್ಲವುಗಳನ್ನು ನಾನು ಹವ್ಯಾಸ ಅಭ್ಯಾಸದಿಂದ ಸಾಧ್ಯವಾಗಿಸಿ ಯಶಸ್ಸು ಸಾಧಿಸಿರುವುದಾಗಿ. ಹರೀಶ್ ಜೋಶಿ  ತಿಳಿಸುತ್ತಾ ಸರ್ವ ಛಾಯಾಚಿತ್ರಗ್ರಾಹಕರಿಗೂ ಹ್ಯಾಪಿ ಪೋಟೋಗ್ರಾಫರ್ಸ್ ಡೇ ಶುಭಾರೈಸುತ್ತಿದ್ದಾರೆ.

ಚಿತ್ರ: ರೋನ್ಸ್ ಬಂಟ್ವಾಳ್

By Suddi9

Leave a Reply

Your email address will not be published. Required fields are marked *